Karnataka Times
Trending Stories, Viral News, Gossips & Everything in Kannada

Loan: ಬ್ಯಾಂಕ್ ನಲ್ಲಿ ಸಾಲ ಪಡೆಯುವ ಮುನ್ನ ಈ ಅರ್ಹತೆ ಇದೆಯೇ ಪರಿಶೀಲಿಸಿ, ಇಲ್ಲದಿದ್ರೆ ಸಾಲ ಸಿಗಲ್ಲ!

advertisement

ಮನೆ (Home), ಶಿಕ್ಷಣ (Education), ಕೃಷಿ (Agriculture), ಸ್ವ ಉದ್ಯೋಗ (Self Employment) ಇನ್ನು ಅನೇಕ ಕಾರಣದಿಂದ ಬ್ಯಾಂಕ್ ಸಾಲ ಪಡೆಯುವುದು ಅನಿವಾರ್ಯವಾಗುತ್ತದೆ. ಕಡಿಮೆ ಬಡ್ಡಿದರದ ಸಾಲ ಸೌಲ ಸೌಲಭ್ಯ ನೀಡುವ ಪ್ರಮಾಣ ಇತ್ತೀಚಿನ ದಿನದಲ್ಲಿ ಅಧಿಕವಾಗಿದೆ. ಹಾಗಿದ್ದರೂ ಸಾಲಕ್ಕೆ ಅರ್ಜಿ ಹಾಕಿದವರಿಗೆಲ್ಲ ಸಾಲ ಸಿಗಲಾರದು ದಾಖಲಾತಿ ಎಲ್ಲವೂ ಸರಿಯಾಗಿ ಇದ್ದರೂ ವ್ಯಕ್ಯಿಯ ಸಿಬಿಲ್ ಸ್ಕೊರ್ (CIBIL Score) ಕೂಡ ಅತೀ ಮುಖ್ಯವಾಗುತ್ತದೆ. ಸಿಬಿಲ್ ಸ್ಕೋರ್ ಎನ್ನುವುದು ಸಾಲ ಪಡೆಯ ಬೇಕೆಂದು ಬಯಸುವವರಿಗೆ ತುಂಬಾ ಅಗತ್ಯವಾಗಿದ್ದು ಅದರ ಬಗ್ಗೆ ಸಂಕ್ಷಿಪ್ತ ಮಾಹಿತಿ ಈ ಲೇಖನದಲ್ಲಿ ನೀಡಿದ್ದೇವೆ.

CIBIL Score ಎಂದರೇನು?

 

 

ಸಿಬಿಲ್ ಸ್ಕೋರ್ (CIBIL Score) ಎನ್ನುವುದು ವ್ಯಕ್ತಿಯ ಅಥವಾ ಬ್ಯಾಂಕಿನ ಗ್ರಾಹಕರ ವಹಿವಾಟಿನ ವಿಚಾರ ಎಂದು ಹೇಳಬಹುದು‌. ಇದನ್ನು ಕ್ರೆಡಿಟ್ (Credit) ಇನ್ಫಾರ್ಮೇಶನ್ ಬ್ಯೂರೊ ಆಫ್ ಇಂಡಿಯಾ (Bureau of India) ಅಂದರೆ ಬ್ಯಾಂಕ್ ನಲ್ಲಿ ತಿಂಗಳ ಆರ್ಥಿಕ ವ್ಯವಹಾರ ಉತ್ತಮವಾಗಿದ್ದು ಸಾಲ (Loan) ಮರುಪಾವತಿ ಮಾಡಲು ಯೋಗ್ಯ ಎನಿಸಿದರೆ ಸಿಬಿಲ್ ಸ್ಕೋರ್ ಉತ್ತಮವಾಗಿ ಇರಲಿದೆ. ಅದೇ ರೀತಿ ನೀವು ಸಾಲ ಮರುಪಾವತಿಸದೆ ಬಡ್ಡಿ ಬೆಳೆಯುತ್ತಾ ನೋಟಿಸ್ ಬರೊ ವರೆಗೂ ಬಿಟ್ಟರೆ ಸಿಬಿಲ್ ಸ್ಕೋರ್ ಕೂಡ ಕಡಿಮೆ ಆಗಿದೆ ಎಂದು ಅರ್ಥ. ಅಂದರೆ ಉತ್ತಮ ಸಿಬಿಲ್ ಸ್ಕೋರ್ ಹೊಂದಿದ್ದವರಿಗೆ ಸಾಲ ಸೌಲಭ್ಯ ಸುಲಭವಾಗಿ ಸಿಗಲಿದೆ.

ಇದರ ಲೆಕ್ಕಾಚಾರ ಹೇಗೆ?

ಬಹುತೇಕ ಸಿಬಿಲ್ ಸ್ಕೋರ್ (CIBIL Score) ಎನ್ನುವುದು ಬ್ಯಾಂಕಿನ ಗ್ರಾಹಕನ ಆರ್ಥಿಕ ವಹಿವಾಟಿನ ವಿಚಾರಕ್ಕೆ ಸಂಬಂಧ ಪಟ್ಟದ್ದಾಗಿದೆ. ಆರು ತಿಂಗಳ ಲೆಕ್ಕಾಚಾರದ ಆಧಾರದ ಮೇಲೆ ಸಿಬಿಲ್ ಸ್ಕೋರ್ ನಿರ್ಧಾರ ವಾಗಲಿದೆ. 300ಕ್ಕಿಂತ ಕಡಿಮೆ ಇದ್ದರೆ ಸಾಲ ಸಿಗುವುದು ಇಲ್ಲ ಆದರೆ 300 ಕ್ಕಿಂತ ಮೇಲಿದ್ದು 750, 900 ಈ ರೀತಿ ಇದ್ದರೆ ಸಾಲ ಸುಲಭಕ್ಕೆ ಸಿಗಲಿದೆ.

advertisement

ಯಾಕೆ ಇದು ಮುಖ್ಯ?

ಸಿಬಿಲ್ ಸ್ಕೋರ್ ಹೆಚ್ಚು ಇದ್ದಾಗ ಸುಲಭವಾಗಿ ಸಾಲ (Loan) ನಿಮಗೆ ಸಿಗಲಿದೆ ಅಷ್ಟು ಮಾತ್ರವಲ್ಲದೆ ಕಡಿಮೆ ಬಡ್ಡಿದರಕ್ಕೆ ಸಾಲ ನೀಡಲು ಸಹ ನಿಮ್ಮ ಮನವಿ ಬ್ಯಾಂಕ್ ನವರು ಪರಿಶೀಲನೆ ಮಾಡಲಿದ್ದಾರೆ.ಬ್ಯಾಂಕ್ ನ ಸಾಲದ ಮೇಲಿನ ಬಡ್ಡಿದರ ಕಾರಣ ಮತ್ತು ಮೊತ್ತದ ಆಧಾರದ ಮೇಲೆ ಬ್ಯಾಂಕ್ ನಿಂದ ಬ್ಯಾಂಕ್ ಗೆ ಭಿನ್ನವಾಗಿ ಇರಲಿದೆ. ಅದೇ ರೀತಿ ಕ್ರೆಡಿಟ್ ಕಾರ್ಡ್ ಆಫರ್ (Credit Card Offer) ಸಹ ನಿಮಗೆ ಸಿಗಲಿದೆ. ನಿಮಗೆ ಸಾಲ ನೀಡಲು ಅನೇಕ ರಾಷ್ಟ್ರೀಯ ಹಾಗೂ ವ್ಯವಸಾಯಿಕ ಬ್ಯಾಂಕ್ ಗಳ ಬಹು ಆಯ್ಕೆ ಸಹ ಲಭ್ಯ ಆಗಲಿದೆ. ಸಾಲ ಪ್ರಕ್ರಿಯೆ ಹಣ ಪಡೆಯುವಿಕೆ ಎಲ್ಲವೂ ಶೀಘ್ರವಾಗಿ ಆಗಲಿದೆ.

ಈ ಬಗ್ಗೆ ಎಚ್ಚರಿಕೆ ವಹಿಸಿ:

ಒಮ್ಮೆ ಸಾಲ ತೆಗೆದು ಅದನ್ನು ತೀರಿಸಲು ಮತ್ತೊಂದು ಮಗದೊಂದು ಸಾಲಕ್ಕೆ ಅರ್ಜಿ ಹಾಕುವುದು ಸಿಬಿಲ್ ಸ್ಕೋರ್ ಮಟ್ಟ ಕುಸಿಯುವಂತೆ ಮಾಡಲಿದೆ. ನಿಮ್ಮ ವಾಸ್ತವ್ಯ ಹಾಗೂ ಕೆಲಸದಸ್ಥಳ ಕೂಡ ಈ ವಿಚಾರದಲ್ಲಿ ಗಣನೀಯವಾಗಿ ಪರಿಗಣಿಸುವ ಪ್ರಮುಖ ಅಂಶವಾಗಿದೆ. ಉಳಿತಾಯದ ಹಣವನ್ನು ವರ್ಗಾವಣೆ ಮಾಡುವುದು ಸಿಬಿಲ್ ಸ್ಕೋರ್ ಮಟ್ಟವನ್ನು ಕುಸಿಯುವಂತೆ ಮಾಡಲಿದೆ. ನೀವು ಪಡೆದ ಸಾಲವನ್ನು ಸರಿಯಾಗಿ ಸಮಯಕ್ಕೆ ಕಂತಿನ ಆಧಾರದ ಮೇಲೆ ಮರುಪಾವತಿ ಮಾಡದಿದ್ದರೆ ಡಿಫಾಲ್ಟ್ ಲೀಸ್ಟ್ ಗೆ ಅದು ತಲುಪಲಿದೆ. ತೆರಿಗೆ ವಹಿವಾಟಿನ ಸಮಸ್ಯೆ ಕೂಡ ಋಣಾತ್ಮಕ ಪರಿಣಾಮ ಬೀರಲಿದೆ.

ಹೀಗೆ ಮಾಡಿ:

ಸಿಬಿಲ್ ಸ್ಕೋರ್ ಅಧಿಕವಾಗಲು ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ (Credit Card Bill) ಅನ್ನು ಆಗಾಗ ಪಾವತಿಸಿ ಬಿಡಬೇಕು. ಚೆಕ್ ಬೌನ್ಸ್ (Cheque Bounce) ಆಗದೆ ಇರುವಂತೆ ಎಚ್ಚರಿಕೆ ವಹಿಸಿ. ಸಾಲಕ್ಕಾಗಿ ಪದೇ ಪದೇ ಅರ್ಜಿ ಸಲ್ಲಿಸಬಾರದು. ಅನಗತ್ಯ ಎನಿಸಿದರೆ ಕ್ರೆಡಿಟ್ ಕಾರ್ಡ್ ಬಳಸಬಾರದು. ನಿಮ್ಮ ಸಿಬಿಲ್ ಸ್ಕೋರ್ ಸ್ಥಿತಿ ಗತಿ ಅರಿಯಲು https://www.civil.com ಭೇಟಿ ನೀಡಿ ಲಾಗಿನ್ ಆಗಿ ಕೆಲ ಅಗತ್ಯ ಮಾಹಿತಿ ನೀಡಿದ ಬಳಿಕ OTPಸಹಾಯದಿಂದ ಸಿಬಿಲ್ ಸ್ಕೋರ್ ಶೇಕಡಾ ಪ್ರಮಾಣ ಅರಿಯಬಹುದು.

advertisement

Leave A Reply

Your email address will not be published.