Karnataka Times
Trending Stories, Viral News, Gossips & Everything in Kannada

Govt. Document: ವ್ಯಕ್ತಿಯ ಮರಣದ ನಂತರ ಪ್ಯಾನ್, ಆಧಾರ್ ವೋಟರ್ ಐಡಿ ಏನು ಮಾಡಬೇಕು ಗೊತ್ತಾ?

advertisement

ಪ್ಯಾನ್ ಕಾರ್ಡ್ (PAN Card), ಆಧಾರ್ ಕಾರ್ಡ್ (Aadhaard Card), ವೋಟರ್ ಐಡಿ (Voter ID), ಪಾಸ್ಪೋರ್ಟ್ (Passport) ಇಂತಹ ಗುರುತಿನ ಚೀಟಿ (Identity Card) ನಮ್ಮ ದೇಶದಲ್ಲಿ ಪ್ರತಿಯೊಬ್ಬರಿಗೂ ಅಗತ್ಯವಾಗಿರುವುದು. ಯಾವುದೇ ರೀತಿಯ ಕಾನೂನಾತ್ಮಕ ಚಟುವಟಿಕೆಗಳನ್ನು ಮಾಡಲು ಹಾಗೂ ಇನ್ನು ಹಲವು ದಾಖಲೆಗಳಿಗೆ ನಾವು ಇಂತಹ ಪ್ರಮುಖ ಐಡಿ ಗಳನ್ನು ನೀಡಬೇಕು.

ಬ್ಯಾಂಕು ಖಾತೆ (Bank Account) ತೆರೆಯುವುದಿದ್ದರೆ ಅಥವಾ ಶಾಲಾ ಕಾಲೇಜುಗಳಿಗೆ ಅಡ್ಮಿಶನ್ ಮಾಡಿಸಿಕೊಳ್ಳಲು, ಮ್ಯಾರೇಜ್ ಸರ್ಟಿಫಿಕೇಟ್, ಆಸ್ತಿ ಪತ್ರ ನೋಂದಣಿ ಹೀಗೆ ಪ್ರತಿಯೊಂದು ಪ್ರಮುಖ ದಾಖಲೆಗಳನ್ನು ಹೊಂದಿರಲೇಬೇಕು. ಈ ಎಲ್ಲಾ ಐಡಿಗಳು ನಮಗೆ ಸಿಗುವುದು ಸರ್ಕಾರದಿಂದ. ಇನ್ನು ಒಬ್ಬ ವ್ಯಕ್ತಿ ಈ ಎಲ್ಲ ಐಡಿಗಳನ್ನು ಹೊಂದಿದ್ದು ಆತ ಮರಣ ಹೊಂದಿದರೆ ಈ ಗುರುತಿನ ಚೀಟಿ ಏನಾಗುತ್ತೆ ಅಥವಾ ಏನು ಮಾಡಬೇಕು ಎಂಬುದು ನಿಮಗೆ ಗೊತ್ತಾ.

Aadhaar Card:

 

 

ಪ್ರತಿಯೊಬ್ಬ ಭಾರತೀಯ ಸದಸ್ಯನಿಗೆ ನೀಡಲಾಗುವ ವಿಶಿಷ್ಟ ಗುರುತಿನ ಚೀಟಿ (Identity Card) ಆಧಾರ್ ಕಾರ್ಡ್ (Aadhaar Card). ಆಧಾರ್ ಕಾರ್ಡ್ ಇಲ್ಲದೆ ಇದ್ರೆ ಯಾವುದೇ ರೀತಿಯ ಕೆಲಸಗಳನ್ನು ಕೂಡ ಹಣಕಾಸಿನ ವ್ಯವಹಾರಗಳನ್ನು ಕೂಡ ಮಾಡಲು ಸಾಧ್ಯವಿಲ್ಲ. ಆಧಾರ್ ಕಾರ್ಡ್ ಹೊಂದಿದ್ದು, ಆತ ಮರಣ ಹೊಂದಿದರೆ ಆತನ ಆಧಾರ್ ಕಾರ್ಡ್ ಏನು ಮಾಡಬೇಕು ಎನ್ನುವ ಪ್ರಶ್ನೆ ಕಾಡಬಹುದು. ಇದಕ್ಕೆ ಇಲ್ಲಿದೆ ಉತ್ತರ. ವ್ಯಕ್ತಿ ಮರಣ ಹೊಂದಿದರೆ ಆತನ ಆಧಾರ್ ಕಾರ್ಡ್ ಅನ್ನು ಸರ್ಕಾರಕ್ಕೆ ಸರೆಂಡರ್ ಮಾಡಲೇಬೇಕು ಎನ್ನುವ ನಿಯಮ ಇಲ್ಲ. ಆದರೆ ಆ ಆಧಾರ್ ಕಾರ್ಡ್ ಅನ್ನು ಯಾರು ದುರುಪಯೋಗಪಡಿಸಿಕೊಳ್ಳಬಾರದು ಎನ್ನುವ ಕಾರಣಕ್ಕೆ ಮೃತ ಕುಟುಂಬದ ಸದಸ್ಯರು UIDAI ವೆಬ್ಸೈಟ್ಗೆ ಹೋಗಿ ಆಧಾರ್ ಸಂಖ್ಯೆಯನ್ನು ನಮೂದಿಸಿ ಲಾಕ್ ಮಾಡಬಹುದು.

Voter ID:

 

 

advertisement

ಒಬ್ಬ ವ್ಯಕ್ತಿ ಮರಣ ಹೊಂದಿದರೆ ಆತನ ಕುಟುಂಬದವರು ಮರಣ ಹೊಂದಿದ ವ್ಯಕ್ತಿಯ ಮತದಾರರ ಗುರುತಿನ ಚೀಟಿ (Identity Card) ರದ್ದು ಪಡಿಸಬಹುದಾಗಿದೆ. ಇದಕ್ಕಾಗಿ ಚುನಾವಣಾ ಕಚೇರಿಯಲ್ಲಿ ನಮೂನೆ 7 ಅರ್ಜಿ ಫಾರಂ ಭರ್ತಿ ಮಾಡಬೇಕು. ಮೃತ ವ್ಯಕ್ತಿಯ ಮರಣ ಪ್ರಮಾಣದ ದಾಖಲೆಯನ್ನು ನೀಡಿ ಆತನ ಗುರುತಿನ ಚೀಟಿ ರದ್ದು ಪಡಿಸಲು ಸಾಧ್ಯವಿದೆ.

PAN Card:

 

 

ಆದಾಯ ತೆರಿಗೆ (Income Tax) ಪಾವತಿ ಮಾಡುವವರ ಬಳಿ ಪಾನ್ ಕಾರ್ಡ್ ಇರುವುದು ಸಹಜ. ಒಂದು ವೇಳೆ ಆದಾಯ ತೆರಿಗೆ ಪಾವತಿ ಮಾಡುವ ವ್ಯಕ್ತಿಗೆ ಮರಣ ಹೊಂದಿದರೆ ಆತನ ಮನೆಯವರು ಆತನ ಬಳಿ ಇದ್ದ ಪ್ಯಾನ್ ಕಾರ್ಡ್ ಅನ್ನು ಆದಾಯ ತೆರಿಗೆ ಕಚೇರಿಗೆ ಸಲ್ಲಿಸಬೇಕು. ಕುಟುಂಬದ ಇನ್ನೊಬ್ಬ ಸದಸ್ಯರಿಗೆ ಮೃತ ಹೊಂದಿದವರ ಖಾತೆಯ ಹಣವನ್ನು ವರ್ಗಾಯಿಸಲಾಗುತ್ತದೆ ಹಾಗೂ ಆ ಹಿಂದಿನ ಖಾತೆಯನ್ನು ಮುಚ್ಚಿ ಹೊಸ ಸದಸ್ಯರ ಹೆಸರಿಗೆ ಖಾತೆ ತೆರೆಯಲಾಗುತ್ತದೆ.

Passport:

 

 

ಮರಣ ಹೊಂದಿದರೆ ಪಾಸ್ಪೋರ್ಟ್ (Password) ರದ್ದುಪಡಿಸಬೇಕು ಎನ್ನುವ ನಿಯಮ ಇಲ್ಲ ಆದರೆ ಸ್ವಲ್ಪ ಅವಧಿಯವರೆಗೆ ಪಾಸ್ಪೋರ್ಟ್ ಬಳಸದೇ ಇದ್ದರೆ ಆಟೋಮ್ಯಾಟಿಕ್ ಆಗಿ ಅದರ ಸಿಂಧುತ್ವ ಕೊನೆಗೊಳ್ಳುತ್ತದೆ.

advertisement

Leave A Reply

Your email address will not be published.