Karnataka Times
Trending Stories, Viral News, Gossips & Everything in Kannada

Loan: ಕೃಷಿ ಸಾಲ ಪಡೆದ ರೈತರಿಗೆ ಬೆಳ್ಳಂಬೆಳಿಗ್ಗೆ ಗುಡ್ ನ್ಯೂಸ್!

advertisement

ಇತ್ತೀಚಿನ ದಿನದಲ್ಲಿ ಸಾಲ (Loan) ನೀಡುವ ಸಂಸ್ಥೆಗಳ ಪ್ರಮಾಣ ಅಧಿಕವಾದಂತೆ ಸಾಲಕೊಳ್ಳುವವರ ಸಂಖ್ಯೆ ಕೂಡ ಅಧಿಕವಾಗುತ್ತಲೆ ಇದೆ. ಸಾಲವನ್ನು ಅನೇಕ ಕಾರಣಗಳಿಗೆ ಪಡೆಯಲಾಗಿದ್ದರೂ ಕೂಡ ಕೃಷಿ ಉದ್ದೇಶಕ್ಕಾಗಿ ಪಡೆಯುವ ಸಾಲಗಳಿಗೆ ಅಧಿಕ ಮಾನ್ಯತೆ ಇದೆ. ಈ ಬಾರಿ ಕೂಡ ಅನೇಕ ಸಹಕಾರಿ ಸಂಘ ಸಂಸ್ಥೆಗಳಿಂದ ಸಾಲ ಪಡೆದ ರೈತರು ಬೆಳೆ ಬೆಳೆದು ಸಾಲ ತೀರಿಸಬೇಕೆಂದಿದ್ದರೂ ಆದರೆ ಅಕಾಲಿಕ ಮಳೆ ಪರಿಸರ ಕಾರಣಕ್ಕೆ ಬೆಳೆ ನಾಶವಾದ ಕಾರಣ ಹಣ ಮರಳಿ ನೀಡಲು ಸಾಧ್ಯವಾಗುತ್ತಿಲ್ಲ, ಅಂತವರಿಗೆ ಸಿಎಂ ಸಿದ್ದರಾಮಯ್ಯ (CM Siddaramaiah)ಅವರು ಇಂದು ಬೆಳ್ಳಂ ಬೆಳಗ್ಗೆ ಶುಭ ಸುದ್ದಿ ನೀಡಿದ್ದಾರೆ.

ಯಾವ ಸಾಲ(Loan):

ಸಹಕಾರಿ ಸಂಸ್ಥೆಗಳು ಸಾಲ ನೀಡುವ ಪ್ರಮಾಣ ಅಧಿಕವಿದೆ‌. ಇಲ್ಲಿ ಸಾಲ ಪಡೆದ ರೈತರರಿಗೆ ಇದೀಗ ಸ್ವಲ್ಪ ವಿನಾಯಿತಿ ನೀಡಲು ಸರಕಾರ ಮುಂದಾಗಿದೆ. ಮಧ್ಯಮ ಅವಧಿ ಹಾಗೂ ದೀರ್ಘಾವಧಿಯ ಸಾಲವನ್ನು 2023ರ ಡಿಸೆಂಬರ್ 31ರ ಒಳಗಾಗಿ ಮಾಡಿದ್ದ ಸಾಲಕ್ಕೆ ಅಸಲು ಮರುಪಾವತಿ ಮಾಡಿದ್ದವರಿಗೆ ಬಡ್ಡಿದರ ಮನ್ನ ಮಾಡಲು ಸರಕಾರ ಆದೇಶ ನೀಡಿದೆ. ಇದರಿಂದಾಗಿ ಸಹಕಾರಿ ಸಂಸ್ಥೆಗಳಿಗೂ ರೈತರ ಸಾಲ ಮರುಪಾವತಿ ಆಗಲಿದ್ದು ದೊಡ್ಡ ಮಟ್ಟದಲ್ಲಿ ಸಹಕಾರ ಸಿಕ್ಕಂತಾಗುತ್ತದೆ. ಮಾತ್ರವಲ್ಲದೇ ಮುಂದಿನ ವರ್ಷದ ಸಾಲ ನೀಡಲು ಕೂಡ ಮತ್ತೆ ಉತ್ತೇಜನ ದೊರೆತಂತಾಗುವುದು.

Image Source: Tata Capital

ಬರಘೋಷಣೆ

advertisement

ಮಳೆಯ ಅಭಾವ ಆದ ಕಾರಣ ಬೆಳೆ ನಾಶವಾಗುತ್ತಿದೆ. ಹಾಗಾಗಿ 223ರಾಜ್ಯದ ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡುವುದಾಗಿ ತಿಳಿಸಿದ್ದರು. ಈ ಮೂಲಕ ಅದನ್ನು ಕಾರ್ಯ ರೂಪಕ್ಕೆ ತರಲು ಸರಕಾರ ಮುಂದಾಗಿದೆ. ಕೃಷಿ ಉದ್ದೇಶಕ್ಕಾಗಿ ಮಧ್ಯಮ ಮತ್ತು ದೀರ್ಘಾವಧಿಯ ಸಾಲ ಮಾಡಿದ್ದವರು ಬಳಿಕ ಫಸಲು ಸಿಗದೆ ಸಾಲ ಕಟ್ಟಲು ಆಗದೇ ಸಂಕಷ್ಟಗೊಂಡಿದ್ದಾರೆ. ಹಾಗಾಗಿ ಸಾಲ ಸಹಕಾರಿ ಸಂಸ್ಥೆಗೆ ಮರುಪಾವತಿ ಆಗುತ್ತಿಲ್ಲ. ಇದರ ಜೊತೆಗೆ ಸಹಕಾರಿ ಸಂಸ್ಥೆಗಳು ರೈತರು ಸಾಲ ಪಡೆದ ಹಣ ಹಿಂದುರುಗಿಸದ ಕಾರಣ ನಬಾರ್ಡ್ (NABARD)ಗೆ ಹಣ ಸಲ್ಲಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಬರ ಪರಿಹಾರ (Drought Relief) ಘೋಷಣೆ ಮಾಡಲಾಗಿದೆ.

ಇದುವರೆಗಿನ ಲೆಕ್ಕಾಚಾರ

ಸಹಕಾರಿ ಸಂಸ್ಥೆಗಳ ಮೂಲಕ 56 ದ ಸಾವಿರ ರೈತರು ಸಾಲ ಪಡೆದಿದ್ದು ತಿಳಿದು ಬಂದಿದೆ. 58 ಲಕ್ಷ ದಷ್ಟು ಮಧ್ಯಮ ಮತ್ತು ದೀರ್ಘಾವಧಿಯ ಕೃಷಿ ಸಾಲ (Agriculture Loan) ಪಡೆದಿದ್ದು ತಿಳಿದು ಬಂದಿದೆ. ಇದರ ಮೇಲೆ ಬಡ್ಡಿದರ 44 ಲಕ್ಷ ರೂಪಾಯಿ ಯಷ್ಟು ಆಗಿದೆ ಎಂದು ತಿಳಿದಿದೆ. ರೈತರು ರಾಜ್ಯದ ಸಹಕಾರಿ ಸಂಘ, ಕೃಷಿ ಪತ್ತಿನ ಸಹಕಾರಿ ಸಂಘ, ಜಿಲ್ಲಾ ಸಹಕಾರಿ ಬ್ಯಾಂಕ್, ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳಿಂದ ಸಾಲ ಪಡೆದಿದ್ದರೆ ಆ ಸಾಲದ ಅಸಲನ್ನು ಮಾರ್ಚ್ ಅಂತ್ಯದ ಒಳಗೆ ನೀಡಿದರೆ ಬಡ್ಡಿದರ ಮನ್ನ ಮಾಡಲು ಸರಕಾರ ಆದೇಶ ನೀಡಿದೆ.

Image Source: NewsClick

ಸರಕಾರವೇ ನೀಡುತ್ತೆ

ರೈತರು ಕಟ್ಟಬೇಕಾದ ಬಡ್ಡಿ ಮೊತ್ತವನ್ನು ಸರಕಾರವೇ ನೀಡಲು ತೀರ್ಮಾನಿಸಿದ್ದು ಅದಕ್ಕೆ ಕೆಲವು ಷರತ್ತನ್ನು ವಿಧಿಸಲಾಗಿದೆ. ರೈತರು ರಾಜ್ಯದ ಸಹಕಾರಿ ಸಂಘ, ಕೃಷಿ ಪತ್ತಿನ ಸಹಕಾರಿ ಸಂಘ, ಜಿಲ್ಲಾ ಸಹಕಾರಿ ಬ್ಯಾಂಕ್, ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳಿಂದ ಸಾಲ ಪಡೆದಿದ್ದರೆ ಅಲ್ಲಿ ಮಾಡಿದ್ದ ಸಾಲಕ್ಕೆ ಮಾತ್ರವೇ ಬಡ್ಡಿಮನ್ನ ಆಗಲಿದೆ. ಅದರ ಜೊತೆಗೆ ಕೃಷಿ ಯೇತರ ಉದ್ದೇಶಕ್ಕೆ ಮಾಡಿದ್ದ ಸಾಲಕ್ಕೂ ಈ ಬಡ್ಡಿ ಮನ್ನ ಅಂಶ ಇರಲಾರದು. ನಬಾರ್ಡ್ ಗುರುತಿಸಿದ ನೀರಾವರಿ, ಪಶುಸಂಗೋಪನೆ, ಕೃಷಿ ಯಾಂತ್ರಿಕರಣ, ತೋಟಗಾರಿಕೆ, ಮೀನುಗಾರಿಕೆ ಇತರ ಅಂಶಕ್ಕೆ ಮಾಡಿದ್ದ ಸಾಲಗಳಿದ್ದರೆ ಮಾತ್ರವೇ ಬಡ್ಡಿ ಮನ್ನ ಯೋಜನೆ ಸಿಗಲಿದೆ. ಈ ಮೂಲಕ ಸಂಬಂಧ ಪಟ್ಟ ಸಹಕಾರಿ ಸಂಸ್ಥೆ ಬಡ್ಡಿಯ ಮೊತ್ತವನ್ನು ಸರಕಾರ ನೀಡಲಿದೆ ಎಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್ ಈ ಬಗ್ಗೆ ಆದೇಶ ನೀಡಿದೆ.

advertisement

Leave A Reply

Your email address will not be published.