Karnataka Times
Trending Stories, Viral News, Gossips & Everything in Kannada

KVP Scheme: ಕೇಂದ್ರ ಸರಕಾರದ ಈ ಯೋಜನೆಯಲ್ಲಿ ಹಣ ಡಬಲ್ ಆಗೋದು ಗ್ಯಾರೆಂಟಿ! 5 ಲಕ್ಷಕ್ಕೆ 10 ಲಕ್ಷ ರಿಟರ್ನ್ಸ್.

advertisement

ರಾಜ್ಯದಲ್ಲಿ ಹಣ ಡಬಲ್ ಮಾಡ್ತೇವೆ ಅನ್ನೊ ಅನೇಕ ಸ್ಕೀಂ ಯೋಜನೆಗಳು ಇರುವುದು ಕಾಣಬಹುದು ಆದರೆ ಎಲ್ಲವೂ ಕೂಡ ನಂಬಿಕೆಗೆ ಅರ್ಹವಾಗಿರುವುದಿಲ್ಲ ಅವುಗಳು ಬಹುತೇಕ ಸುಳ್ಳು ಮಾಹಿತಿ ನೀಡಿ ಮೋಸ ಮಾಡುವ ಆನ್ಲೈನ್ ಜಾಲವೇ ಆಗಿರುತ್ತದೆ. ಹಾಗಾಗಿ ಸುರಕ್ಷತೆ ದೃಷ್ಟಿಯಿಂದ ಸರಕಾರಿ ಸ್ವಾಮ್ಯದ ಹೂಡಿಕೆಗಳಿಗೆ ನೀವು ಅಧಿಕ ಪ್ರಾತಿನಿಧ್ಯ ನೀಡುವುದು ಅತೀ ಅಗತ್ಯವಾಗಿದೆ. ಹಾಗಾಗಿ ನೀವು ಈ ಹಣವನ್ನು ಸುರಕ್ಷಿತವಾಗಿ ಕೇಂದ್ರ ಸರಕಾರದ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಿದರೆ ದೀರ್ಘಾವಧಿಯಲ್ಲಿ ಅಧಿಕ ಲಾಭ ನಿಮಗೆ ನೀಡಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಬಜೆಟ್ ನಲ್ಲಿ ಚರ್ಚೆ: 

ಇತ್ತೀಚೆಗಷ್ಟೇ ಬಜೆಟ್ ಕಾಲಾವಧಿಯಲ್ಲಿ ಹಣ ಡಬಲ್ ಮಾಡುವುದು ಹೂಡಿಕೆಯ ಕ್ರಮಕ್ಕೆ ಉತ್ತೇಜಿಸುವ ಬಗ್ಗೆ ಅನೇಕ ತರನಾಗಿ ಚರ್ಚೆಗಳನ್ನು ಮಾಡಲಾಗಿತ್ತು. ಆದಾಯ ಡಬಲ್ ಮಾಡಲು ಇನ್ನೂ ಕೂಡ ಸ್ಕೀಂ ಅನ್ನು ಅಭಿವೃದ್ಧಿ ಪಡಿಸಲು ಚಿಂತನೆ ನಡೆಯುತ್ತಿದೆ ಆದರೆ ರೈತರ ಹೂಡಿಕೆ ಡಬಲ್ ಮಾಡಲು ಒಂದು ಯೋಜನೆ ಸಿದ್ಧ ಪಡಿಸಿದ್ದಾರೆ. ಈ ಬಗ್ಗೆ ಅನೇಕ ರೈತರಿಗೆ ಸೂಕ್ತ ಮತ್ತು ಸರಿಯಾದ ಮಾಹಿತಿ ಲಭ್ಯ ಆಗಿಲ್ಲ ಎಂದು ಹೇಳಬಹುದು. ಈ ಬಗ್ಗೆ ಸಂಪೂರ್ಣ ಅಪ್ಡೇಟ್ ಮಾಹಿತಿ ಈ ಲೇಖನದ ಮೂಲಕ ತಿಳಿಯಿರಿ.

Image Source: Jagran

ಕೆವಿಪಿ ಯೋಜನೆ (KVP Scheme):

advertisement

ಅಂಚೆ ಕಚೇರಿ (Post Office) ಯಲ್ಲಿ ಹೂಡಿಕೆ ಮಾಡುವ ಅನೇಕರಿಗೆ ಈ KVP Scheme ಬಗ್ಗೆ ತಿಳಿದಿರುವ ಸಾಧ್ಯತೆ ಇದೆ. ಇದು ಕಿಸಾನ್ ವಿಕಾಸ್ ಪತ್ರ ಎಂಬ ಹೆಸರಿನ ಮೂಲಕ ಕರೆಯಲಾಗುತ್ತದೆ.ಕೆಲವೊಂದು ಬ್ಯಾಂಕ್ ನಲ್ಲಿ ಕೂಡ ಈ ಯೋಜನೆ ಇದೆ. ಇದರ ಹೆಸರೇ ಸೂಚಿಸುವಂತೆ ರೈತರ ಆದಾಯ ಹೆಚ್ಚಿಸಿ ಅವರ ಸ್ಥಿತಿಯನ್ನು ಉನ್ನತೀಕರಣ ಗೊಳಿಸಬೇಕು ಎಂಬ ಉದ್ದೇಶಕ್ಕೆ ಈ KVP ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಯಲ್ಲಿ ರೈತರು ಹೂಡಿಕೆ ಮಾಡಿದರೆ ಅಧಿಕ ಲಾಭ ಸಿಗಲಿದೆ. ಈ ಬಗ್ಗೆ ಸರಕಾರಿ ಅಧಿಕೃತ ಸಂಸ್ಥೆಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ನೀಡಿದೆ.

KVP Scheme ಬಡ್ಡಿದರ ಎಷ್ಟು

ಇಲ್ಲಿನ KVP ಮೇಲೆ ನೀವು ಮಾಡಿದ್ದ ಹೂಡಿಕೆ ಮೇಲೆ 7.2% ನಷ್ಟು ಬಡ್ಡಿದರ ನೀಡಲಾಗುತ್ತದೆ. ಇದರಲ್ಲಿ ಯಾವುದೇ ಮೋಸ ಇಲ್ಲದೇ ಕೇಂದ್ರ ಸರಕಾರದ ಅಡಿಯಲ್ಲಿಯೇ ಈ ಯೋಜನೆ ಸಿದ್ಧಪಡಿಸಲಾಗಿದೆ. 10 ವರ್ಷದಲ್ಲಿ ಹೂಡಿಕೆ ಮಾಡಿಟ್ಟರೆ ನಿಮ್ಮ ಹಣ ಡಬಲ್ ಆಗಲಿದೆ. ರೈತರಿಗಾಗಿ ಈ ಯೋಜನೆ ಪರಿಚಯಿಸಲಾಗಿದ್ದರೂ ಯಾರು ಬೇಕಾದರೂ ಈ ಯೋಜನೆಗೆ ಹೂಡಿಕೆ ಮಾಡಬಹುದು. ಇದರಲ್ಲಿ ಸಿಂಗಲ್ ಅಕೌಂಟ್ ಹಾಗೂ ಮೈನರ್ ಅಕೌಂಟ್ ಓಪನ್ ಮಾಡಬಹುದಾಗಿದೆ. ಜಾಂಯ್ಟ್ ಅಕೌಂಟ್ ಮಾಡಲು 3 ಜನರ ಮಿತಿ ಕೂಡ ಇರಲಿದೆ.

Image Source: WealthTech Speaks

ಎಷ್ಟು ಹೂಡಿಕೆ ಮಾಡಬೇಕು?

KVP ಯೋಜನೆಯ ಅಡಿಯಲ್ಲಿ ಕನಿಷ್ಠ1000 ನಿಂದ 1100, 1,200 ನಂತೆ ಹೂಡಿಕೆ ಮಾಡಬಹುದು ಗರಿಷ್ಠ ಮಿತಿ ಇಲ್ಲ. ಆದರೆ ಇದು ಒಮ್ಮೆಲೆಗೆ ಮಾಡುವ ಹೂಡಿಕೆಯಾಗಿದೆ.ಅದೇ ರೀತಿ ಎಷ್ಟು ಅಕೌಂಟ್ ನಿಂದ ಕೂಡ ನೀವು ಹೂಡಿಕೆಮಾಡಬಹುದು.ಒಂದು ವೇಳೆ ನೀವು ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಿದ್ದು ಪ್ರೀ ಮೆಚ್ಯುರ್ ವಿತ್ ಡ್ರಾ ಮಾಡಲು ಅವಕಾಶ ಇದೆ. 2.6 ವರ್ಷ ಕಳೆದ ಬಳಿಕ ಆರೋಗ್ಯ , ಶೈಕ್ಷಣಿಕ ವಿಚಾರಕ್ಕೆ ನಿಗಧಿತ ಮೊತ್ತ ಹಿಂಪಡೆಯಬಹುದು.

advertisement

Leave A Reply

Your email address will not be published.