Karnataka Times
Trending Stories, Viral News, Gossips & Everything in Kannada

Rent House: ಬಾಡಿಗೆ ಮನೆಯಲ್ಲಿರುವ ಎಲ್ಲರಿಗೂ ಹೊಸ ಅಧಿಕಾರ! ಇಲ್ಲಿದೆ ಹೊಸ ರೂಲ್ಸ್

advertisement

ಇಂದು ಪ್ರತಿಯೊಬ್ಬರಿಗೂ ಮನೆ ಅನ್ನೋದು ಮೂಲಭೂತ ಸೌಕರ್ಯದ ಮೂಲ ವಸ್ತು ವಾಗಿದೆ. ಹೆಚ್ಚಿನವರಿಗೆ ಸ್ವಂತ ಮನೆ ಬೇಕು ಅನ್ನುವ ಆಸೆ ಇದ್ದರೂ ನಿರ್ಮಾಣ ಮಾಡಲು ಕಷ್ಟ ಸಾಧ್ಯ. ಯಾಕಂದರೆ ಹೊಸ ಮನೆ ಕಟ್ಟಲು ನಿರ್ಮಾಣ ವೆಚ್ಚ ಕೂಡ ಬಹಳಷ್ಟು ಇರಲಿದ್ದು ಸುಲಭವಾಗಿ ಹೊಸ ಮನೆ ನಿರ್ಮಾಣ ಮಾಡಲು ಸಾಧ್ಯ ಇರುವುದಿಲ್ಲ. ಅದರಲ್ಲೂ ಇಂದು ಸ್ವಂತ ಮನೆಗಿಂತಲೂ ಬಾಡಿಗೆ ಮನೆ (Rent House) ಯಲ್ಲಿ ಜೀವನ ನಡೆಸುವವರ ಸಂಖ್ಯೆ ಬಹಳಷ್ಟು ಹೆಚ್ಚಿದೆ. ಅದರಲ್ಲೂ ನಗರ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲೇ ಜೀವನ ನಡೆಸುತ್ತಾರೆ.

ನೊಂದಣಿ ಮಾಡಿರಬೇಕು:

ಬಾಡಿಗೆ ಮನೆ (Rent House) ಯನ್ನು ಪಡೆದುಕೊಂಡಿರುವಾಗ ಕೆಲವೊಂದು ನಿಯಮಗಳ ಬಗ್ಗೆಯು ನೀವು ತಿಳಿದುಕೊಂಡಿರಬೇಕು.ಎಲ್ಲಾ ತೊಂದರೆಗಳಿಂದ ದೂರವಿರಲು, ನಿಮ್ಮ ಬಾಡಿಗೆ ಒಪ್ಪಂದವು ಬಹಳ ಮುಖ್ಯ ವಾಗಲಿದೆ. ಹಾಗಾಗಿ‌ ಮೊದಲು ರಿಜಿಸ್ಟ್ರಾರ್ ಮಾಡಿಸಿಕೊಂಡಿರಬೇಕು.

ಈ ಹಕ್ಕು ಇರಲಿದೆ:

 

Image Source: Housing

 

advertisement

  • ಬಾಡಿಗೆ ಮನೆ (Rent House) ಪಡೆದುಕೊಳ್ಳುವಾಗ ರಿಟರ್ನ್ ಅಗ್ರಿಮೆಂಟ್ ಅನ್ನು ಪಡೆದುಕೊಳ್ಳುವುದು ಸಹ ಉತ್ತಮ.ಇಲ್ಲಿ ನೀವು ಲಿಖಿತ ಒಪ್ಪಂದವನ್ನು ಹೊಂದಿರುವುದು ಅತ್ಯಗತ್ಯ ವಾಗಿ ಬೇಕಾಗಲಿದೆ.
  • ಯಾವುದೇ ಕಾರಣಕ್ಕೂ ಮೂಲಭೂತ ಸೌಕರ್ಯ ಗಳನ್ನು ಕಡಿತಗೊಳಿಸುವಂತಿಲ್ಲ.ಒಂದು ವೇಳೆ ಮೂಲಭೂತ ಅವಶ್ಯಕತೆಯನ್ನು ನೀಡಿಲ್ಲ ಎಂದಾದರೇ ಸ್ಥಳೀಯ ಪ್ರಾಧಿಕಾರದ ಜೊತೆ ವಿಚಾರಣೆಯನ್ನು ಮಾಡಬಹುದು
  • ಮಾಲೀಕನು ಬಾಡಿಗೆ‌ ಮನೆಯನ್ನು ಖಾಲಿ ಮಾಡಿಸಬೇಕಾದರೆ 15 ದಿನಗಳ ಒಳಗೆ ನೋಟಿಸ್ ನೀಡಬೇಕು.
  • ಬಾಡಿಗೆದಾರ ತನ್ನ ಮಾಲೀಕನಿಂದ ಮೊದಲು ಅಗ್ರಿಮೆಂಟ್ ಮಾಡಿಸಿಕೊಳ್ಳಬೇಕು
  • ನಿಮ್ಮ ಅನುಮತಿಯಿಲ್ಲದೆ ಮನೆಯ ಮಾಲೀಕರು ಒಳ ಪ್ರವೇಶಿಸಲು ಸಾಧ್ಯವಿಲ್ಲ
  • ಅದೇ ರೀತಿ ಒಪ್ಪಂದದ ನಿಯಮಗಳಿಗೆ ವಿರುದ್ಧವಾಗಿ ಜಮೀನುದಾರನು ಬಾಡಿಗೆಯನ್ನು ಹೆಚ್ಚಿಸಲು ಸಾಧ್ಯ ಇರುವುದಿಲ್ಲ

ಅಗ್ರಿಮೆಂಟ್ ನ ವಿಚಾರ ತಿಳಿದಿರಬೇಕು:

ನಿಮ್ಮ ಬಾಡಿಗೆ ಒಪ್ಪಂದವು ಒಂದು ವರ್ಷಕ್ಕಿಂತ ಮೇಲೇ ಇದ್ದರೆ ಇದನ್ನು ನೋಂದಣಿ ಮಾಡಿಸಲೇ ಬೇಕಾಗುತ್ತದೆ. ಆದ್ದರಿಂದಲೇ ಮನೆ ಬಾಡಿಗೆ ನೀಡುವವರು ಒಪ್ಪಂದ ಮಾಡಿಕೊಂಡು ಆ ಬಳಿಕ ನವೀಕರಣ ಮಾಡಿಸುವುದು ಕೂಡ ಉತ್ತಮ. ಹಾಗಾಗಿ ಬಾಡಿಗೆ ಗುತ್ತಿಗೆ ಒಪ್ಪಂದದ ನಿಯಮವನ್ನು ಮಾಲೀಕರು ಮೊದಲು ತಿಳಿದು ಕೊಂಡರೆ ಉತ್ತಮ. ಅಗ್ರಿಮೆಂಟ್‌ನಲ್ಲಿ ಕೆಲವು ಅಂಶಗಳನ್ನು ತಿಳಿಯಪಡಿಸುವುದು ಕೂಡ ಸೂಕ್ತ.

ಬಾಡಿಗೆ ದಾರ ತಿಳಿದುಕೊಂಡಿರಬೇಕು:

  • ಬಾಡಿಗೆದಾರ ಯಾವುದೇ ಆಸ್ತಿಯನ್ನು ಹಾನಿ ಮಾಡುವಂತಿಲ್ಲ.ಅಲ್ಲಿ ಇದ್ದ ವಸ್ತುಗಳನ್ನು ಹಾಳುಮಾಡುವಂತಿಲ್ಲ
  • ಅಗ್ರಿಮೆಂಟ್‌ ಅವಧಿ ಮುಗಿದ ನಂತರ ಖಾಲಿ ಮಾಡಬೇಕು.
  • ಅದೇ ರೀತಿ ಸರಿಯಾದ ಸಮಯಕ್ಕೆ ಬಾಡಿಗೆ ಪಾವತಿ ಮಾಡಬೇಕು.

advertisement

Leave A Reply

Your email address will not be published.