Karnataka Times
Trending Stories, Viral News, Gossips & Everything in Kannada

Property: ತುಂಬಾ ವರ್ಷಗಳಿಂದ ದಾಖಲೆ ಇಲ್ಲದೇ ಒಂದೇ ಜಾಗದಲ್ಲಿ ಇದ್ದವರಿಗೆ ಸಿಹಿಸುದ್ದಿ

advertisement

ಎಷ್ಟೋ ಬಾರಿ ನಾವು ವಾಸ ಇದ್ದ ಜಾಗ ನಮ್ಮ ಸ್ವತ್ತಲ್ಲ ಎಂಬುದು ತಡವಾಗಿ ತಿಳಿದು ಬಿಡುತ್ತದೆ. ಹಾಗೆ ನಮ್ಮದಲ್ಲದ ಜಾಗದಲ್ಲಿ ವಾಸ್ತವ್ಯ ಹೊಂದಿದ್ದರೆ ಅಲ್ಲಿ ಯಾವುದೇ ತರನಾಗಿ ದಾಖಲೆ ಇಲ್ಲದೆ ಇದ್ದರೆ ಆ ತರದ ಜಾಗ ನಮ್ಮ ಸ್ವಂತ ಮಾಡಿಕೊಳ್ಳಬಹುದಾ ಎಂಬ ಇತ್ಯಾದಿ ಮಾಹಿತಿ ಬಹುತೇಕರಿಗೆ ತಿಳಿದಿರಲಾರದು ಈ ನಿಟ್ಟಿನಲ್ಲಿ ಪ್ರತಿಕೂಲ ಸ್ವಾದೀನತೆ ಬಗ್ಗೆ ಇರುವ ನಿಯಮಗಳ ಬಗ್ಗೆ ನಿಮಗೆ ತಿಳಿಸಲಿದ್ದೇವೆ.

ಯಾವುದು ಈ ನಿಯಮ?

ಇದನ್ನು Adverse Possession ಎಂದು ಕರೆಯುತ್ತಾರೆ. ಅಂದರೆ ಪ್ರತಿಕೂಲ ಸ್ವಾದೀನತೆ ಪಡೆಯುವುದು ಎಂಬ ಅರ್ಥ ನೀಡಲಿದೆ. ಇದು ಇನ್ನೊಬ್ಬ ವ್ಯಕ್ತಿಯ ಭೂಮಿಯ ಮಾಲಿಕತ್ವ ಪಡೆಯುವ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದೆ. ಹಾಗಿದ್ದರೂ ಕೂಡ ಇದಕ್ಕೆ ಕೂಡ ಕೆಲವು ನಿಯಮ ಇದ್ದು ಆ ಎಲ್ಲ ನಿಯಮ ಪಾಲನೆ ಆದರೆ ಮಾತ್ರ ಅಂತಹ ಜಾಗ (Property) ನಿಮ್ಮ ಸ್ವಾದೀನತೆಗೆ ಬರಲಿದೆ.

ಈ ಷರತ್ತು ಇವೆ?

 

Image Source: informalnewz

 

advertisement

  • ನೀವು ಬೇರೆ ಅವರ ಜಾಗ (Property) ವನ್ನು ಗುಪ್ತವಾಗಿ ಬಳಕೆ ಮಾಡುತ್ತಿದ್ದರೆ ನಿಯಮದನ್ವಯ ಸ್ವಾಧೀನ ಸಾಧ್ಯವಿಲ್ಲ. ಅದರ ಬದಲು ಮುಕ್ತವಾಗಿ ಜಾಗ ಬಳಕೆ ಮಾಡಿದರೆ ಅಂತಹ ಜಾಗದ ಮಾಲಕರಾಗಬಹುದು.
  • ನೀವು ಇಂತಹ ಆಸ್ತಿಯ ಬಳಕೆ ಮಾಡಿದ್ದು ಸುತ್ತ ಮುತ್ತಲಿನವರಿಗೂ ತಿಳಿದಿರಬೇಕು.
  • ನೀವು ಕೃಷಿ ಭೂಮಿಯಲ್ಲಿ ಪ್ರತಿಕೂಲ ಸ್ವಾದೀನತೆ ಪಡೆಯಲು ಇಚ್ಛಿಸಿದರೆ ನಿರಂತರ 12 ವರ್ಷಗಳ ಕಾಲ ಕೃಷಿ ಮಾಡಿರಬೇಕು ಅದಕ್ಕೆ ಸೂಕ್ತ ದಾಖಲೆ ಅಗತ್ಯ.
  • ನೀವು ಬಳಸುವ ಭೂಮಿ ಮಾಲಿಕನಿಗೆ ಗೊತ್ತಿದ್ದರೂ ಆತ ಅಡೆತಡೆ ಮಾಡಿರಬಾರದು.

ಬಾಡಿಗೆ ಮನೆ ಪಡಿಯಬಹುದೆ?

 

Image Source: New Star Associates

 

ಅನೇಕರು 10-15 ವರ್ಷ ಬಾಡಿಗೆ ಮನೆ (Rented House) ವಾಸ್ತವ್ಯ ಇದ್ದರೆ ಆ ಮನೆ ನಿಮ್ಮ ಸ್ವಂತ ಆಗುತ್ತಾ ಎಂಬ ಅನುಮಾನ ನಿಮಗೆ ಇರಬಹುದು. ಆದರೆ ಬಾಡಿಗೆ ಮನೆಗಳಿಗೆ ಬಹುತೇಕ ಸಂದರ್ಭಗಳಲ್ಲಿ ಅಗ್ರಿಮೆಂಟ್ ಇರಲಿದೆ ಹಾಗಾಗಿ ಅಲ್ಲಿ ನಿಯಮವೇ ಇರುವ ಕಾರಣ ನೀವು ಅಂತಹ ಜಾಗ ಸ್ವಾದೀನತೆ ಪಡಿಸಿಕೊಳ್ಳಲಾಗದು. ಆದರೆ ಇದರ ಹೊರತಾಗಿ ಜಾಗದಲ್ಲಿ ನೆಲೆಯಾಗಿದ್ದರೆ ನೀವು ನೆಲೆ ನಿಂತಿದ್ದಕ್ಕೆ ಪುರಾವೆ ಅಗತ್ಯ.

ಕಾಯ್ದೆ ಅನ್ವಯ:

ಅಡ್ವರ್ಸ್ ಆ್ಯಕ್ಟ್ Limitations act 1966 ರ ಪ್ರಕಾರ ನೀವು ಆ ಜಾಗಕ್ಕೆ ಕಂದಾಯ ಪಾವತಿ ಮಾಡಿದ್ದರೆ ಕೋರ್ಟ್ ಮೂಲಕ ದಾವೆ ಹೂಡಿ ಜಾಗ ಸ್ವಾದೀನತೆ ಮಾಡಬಹುದು. 12ವರ್ಷಕ್ಕೆ ಮೊದಲು ದಾವೆ ಹೂಡಿದರೆ ‌ಮಾಲಿಕನಿಗೆ ಆಸ್ತಿ ದಕ್ಕಲಿದೆ ಇಲ್ಲವಾದರೆ ದಾವೆ ಹೂಡಿದವರಿಗೆ ಆಸ್ತಿ (Property) ಸಿಗಲಿದೆ. ಸರಕಾರಿ ಭೂಮಿಗೆ 30 ವರ್ಷಗಳ ಕಾಲ ವಾಸ್ತವ್ಯ ಇದ್ದರೆ ಕೆಲ ನಿಯಮ ಪಾಲನೆ ಆದರೆ ಮಾತ್ರ ಅಂತಹ ಜಾಗ ಸಿಗಲಿದೆ.

advertisement

Leave A Reply

Your email address will not be published.