Karnataka Times
Trending Stories, Viral News, Gossips & Everything in Kannada

Property: ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಪಾಲು ನೀಡದಿದ್ದರೆ ಏನಾಗುತ್ತೆ? ಇನ್ಮೇಲೆ ಹೊಸ ರೂಲ್ಸ್

advertisement

ಇತ್ತೀಚಿನ ದಿನದಲ್ಲಿ ಆಸ್ತಿ (Property) ಪಾಸ್ತಿಗೆ ಮೌಲ್ಯ ಅಧಿಕವಾಗುತ್ತಿದೆ‌. ಬೆಲೆಗಳು ಗಗನಕ್ಕೆ ಏರುತ್ತಿದ್ದು ಆಸ್ತಿಗೆ ಸಿಗುವ ಮೌಲ್ಯ ಕೂಡ ಹೆಚ್ಚಾಗುತ್ತಿದೆ. ಆಸ್ತಿಯಲ್ಲಿ ಗಂಡು ಮಕ್ಕಳು ಮಾತ್ರ ಪಾಲು ಪಡೆದು ಮನೆಯ ಹೆಣ್ಣು ಮಕ್ಕಳಿಗೆ ನೀಡದೆ ತಾವೇ ಅನುಭವಿಸುತ್ತಿದ್ದರೆ ಆಗ ಅಲ್ಲಿ ಯಾವ ನಿಯಮ ಅಪ್ಲೈ ಆಗಲಿದೆ? ಹೆಣ್ಣು ಮಕ್ಕಳಿಗಾಗಿ ಅನೇಕ ಕಾನೂನು ಇರುವಾಗ ಆಸ್ತಿಯ ಹಂಚಿಕೆ (Property Distribution) ಯಲ್ಲಿ ಮೋಸ ಮಾಡಲು ಸಾಧ್ಯವಿದೆಯಾ ಎಂಬ ಅನುಮಾನ ಸಹ ಮೂಡಲಿದ್ದು, ಎಲ್ಲ ಗೊಂದಲಕ್ಕೆ ನಿಮಗೆ ಈ ಲೇಖನದ ಮೂಲಕ ಉತ್ತರ ಸಿಗಲಿದೆ.

ಯಾವ ವಿಧಾನದ ಆಸ್ತಿ (Property)ಎಂದು ತಿಳಿಯಬೇಕು?

ಆಸ್ತಿಯಲ್ಲಿ ಸಮಾನ ಹಕ್ಕಿನ ನಿಯಮ ಇದೆ ಹಾಗಿದ್ದರೂ ಆಸ್ತಿ ಸಿಗದೆ ಇದ್ದಾಗ ಮೊದಲು ಹೆಣ್ಣು ಮಕ್ಕಳು ಆ ಆಸ್ತಿ (Property) ಯಾವ ತರದ್ದು ಎಂದು ತಿಳಿದಿರಬೇಕು. ಅಂದರೆ ಅದು ತಂದೆಯ ಸ್ವಯಾರ್ಜಿತವೇ ಅಥವಾ ಪಿತ್ರಾರ್ಜಿತ ಆಸ್ತಿ (Inherited Property) ಯೇ ಎಂಬುದು ತಿಳಿಯಬೇಕು. ಸ್ವಯಾರ್ಜಿತ ಆಸ್ತಿಯಾಗಿದ್ದು ತಂದೆ ಆದವರು ಆಸ್ತಿ ಹಂಚಿಕೆ ಮಾಡದೆ ಇದ್ದರೆ Hindu Succession Act ಪ್ರಕಾರ ಆತನ ಎಲ್ಲ ಮಕ್ಕಳಿಗೂ ಆಸ್ತಿಯಲ್ಲಿ ಸಮಾನ ಹಕ್ಕು ಸಿಗಲಿದೆ.

ಹಕ್ಕು ಇದೆ:

 

Image Source: Goodreturns

 

advertisement

ಆಸ್ತಿಯೂ ಯಾರಾದರೂ ಒಬ್ಬರ ಹೆಸರಿಗೆ ಅಂದರೆ ತಾಯಿ ಅಥವಾ ಹಿರಿಯ ಅಣ್ಣನ ಖಾತೆಗೆ ವರ್ಗಾವಣೆ ಆಗಿದ್ದರೆ Karnataka Land Revenue act 1964ರ ಪ್ರಕಾರ ಖಾತೆ ಇದ್ದವರೇ ಮಾಲಿಕರು ಎಂದು ಪರಿಗಣಿಸಲು ಸಾಧ್ಯವಿಲ್ಲ. ಇಲ್ಲಿ ತಾಯಿ ಮತ್ತು ಮಕ್ಕಳು ಸಮಾನ ಹಕ್ಕುದಾರರಾಗಿರುತ್ತಾರೆ. 2005ರ ನಂತರದಲ್ಲಿ ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನವಾದ ಹಕ್ಕಿದೆ ಎಂದು ಹೇಳಲಾಗುವುದು.

ಹಿಂದಿನ ನಿಯಮ ಏನಿತ್ತು?

ಹಿಂದಿನ ನಿಯಮದಲ್ಲಿ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಹಕ್ಕು ಇರಲಾರದು. ಹಿಂದೆ ಪಿತ್ರಾರ್ಜಿತ ಆಸ್ತಿ (Inherited Property) ಯಲ್ಲಿ ಗಂಡು ಮಕ್ಕಳಿಗೆ ಮಾತ್ರ ಅಧಿಕಾರ ಇತ್ತು ಹಾಗಾಗಿ 2005ರ ಒಳಗೆ ಪಿತ್ರಾರ್ಜಿತ ಆಸ್ತಿ ಹಂಚಿಕೆ ಆಗಿದ್ದರೆ ಅದನ್ನು ಅನೇಕ ವರ್ಷದ ನಂತರ ಕೇಳುವ ಅಧಿಕಾರ ಹೆಣ್ಣು ಮಕ್ಕಳಿಗೆ ಇರಲಾರದು. ತಂದೆಯ ಆಸ್ತಿ ಸ್ವಯಾರ್ಜಿತವಾಗಿದ್ದರೆ ಆಸ್ತಿ ವಿಭಾಗ ಆದ ಬಳಿಕ ಕೂಡ ಹೆಣ್ಣುಮಕ್ಕಳು ತಮ್ಮ ಹಕ್ಕು ಕೇಳಬಹುದು.

ಬಿಟ್ಟು ಆಸ್ತಿ (Property) ಹಂಚಿಕೆ ಮಾಡಿದರೆ?

 

Image Source: RERA Registration

 

ತಂದೆಯ ಸ್ವಯಾರ್ಜಿತ ಆಸ್ತಿ (Father’s Owned Property) ಹಂಚುವಾಗ ಹೆಣ್ಣುಮಕ್ಕಳನ್ನು ಬಿಟ್ಟು ಹಂಚಿಕೊಂಡರೆ ಮುಂದಿನ ದಿನದಲ್ಲಿ ಉಳಿದವರಿಗೆ ತೊಂದರೆ ಆಗಲಿದೆ. ಇಂತಹ ಪ್ರಕರಣವನ್ನು ದಾಖಲಿಸುವ ಅಧಿಕಾರ ಮಹಿಳೆಗೆ ಇರಲಿದ್ದು ಮುಂದೊಂದು ದಿನ ದೊಡ್ಡ ಪರಿಣಾ‌ಮ ಎದುರಿಸಬೇಕಾಗುವುದು. ಹಾಗಾಗಿ ಆಸ್ತಿ ಹಂಚುವಾಗ ಎಲ್ಲರೂ ಸಮಾನವಾಗಿ ಹಂಚಿಕೊಳ್ಳಿ ಒಂದು ವೇಳೆ ಹೆಣ್ಣು ಮಗಳು ಆಸ್ತಿ ಬದಲು ಹಣ ಬಯಸಿದರೆ ಆ ಆಸ್ತಿಗೆ ತಗಲುವ ಮೊತ್ತವನ್ನೇ ನೀಡಿ ಲಿಖಿತ ದಾಖಲೆ ಮೂಲಕ ಹಕ್ಕು ವರ್ಗಾಯಿಸುವ ಆಯ್ಕೆ ಸಹ ಇರಲಿದೆ.

advertisement

Leave A Reply

Your email address will not be published.