Karnataka Times
Trending Stories, Viral News, Gossips & Everything in Kannada

Mahindra Car: ಕೇವಲ 8 ಲಕ್ಷ ರೂನಲ್ಲಿ ಬರಲಿದೆ ಥಾರ್ ರೀತಿಯ ಕಾರು! ನೋಡಿ ಫುಲ್ ಡಿಟೇಲ್ಸ್

advertisement

ಮಹಿಂದ್ರಾ ಸಂಸ್ಥೆಯ ಕಾರುಗಳು ಅತ್ಯಂತ ಹೆಚ್ಚು ಪವರ್ಫುಲ್ ಪರ್ಫಾರ್ಮೆನ್ಸ್ ಹಾಗೂ ಕಠಿಣ ಪರಿಸ್ಥಿತಿ ಹಾಗೂ ರೋಡ್ಗಳಲ್ಲಿ ಕೂಡ ಉತ್ತಮ ಎಕ್ಸ್ಪೀರಿಯನ್ಸ್ ನೀಡುವಂತಹ ಕಾರುಗಳನ್ನ ಗ್ರಾಹಕರಿಗೆ ನೀಡುವುದಕ್ಕೆ ಹೆಸರುವಾಸಿಯಾಗಿದೆ. ದೊಡ್ಡ ಕುಟುಂಬ ಸದಸ್ಯರನ್ನು ಹೊಂದಿರುವಂತಹ ಫ್ಯಾಮಿಲಿಗೆ ಹೇಳಿ ಮಾಡಿಸಿದ ರೀತಿಯಲ್ಲಿ ತಯಾರಾಗಿರುವ Mahindra Bolero ಕಾರಿನ ಬಗ್ಗೆ ಬನ್ನಿ ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳೋಣ ಹಾಗೂ ಇದರ 9 ಸೀಟರ್ ಕಾರಿನ ಬಗ್ಗೆ ಕೂಡ ಮಾಹಿತಿಯನ್ನು ಪಡೆದುಕೊಳ್ಳೋಣ.

Image Source: Mint

Mahindra Bolero ಪ್ರಮುಖ ಫೀಚರ್ ಗಳು

advertisement

  •  ಈ ಕಾರಿನಲ್ಲಿ 9 ಸೀಟರ್ ಗಳನ್ನು ಅಳವಡಿಸಿರುವ ಕಾರಣದಿಂದಾಗಿ 9 ಜನರು ಆರಾಮದಾಯಕವಾಗಿ ಕುಳಿತುಕೊಳ್ಳಬಹುದಾಗಿದ್ದು ಒಳಗೆ ಉತ್ತಮವಾದ ಸ್ಪೇಸ್ ಇದೆ. ಮೂರನೇ ಸಾಲನ್ನು ಮಡಚಿ ಹಿಂದೆ ಬೇರೆ ಬೇರೆ ವಸ್ತುಗಳನ್ನು ಇಟ್ಟುಕೊಳ್ಳುವುದಕ್ಕೆ ಕೂಡ ಸ್ಥಳವನ್ನು ಮಾಡಿಕೊಳ್ಳಬಹುದಾಗಿದೆ.
  • 1.5-litermHawk75 ಡೀಸೆಲ್ ಇಂಜಿನ್ ಅನ್ನು ನೀವು ಬೋಲೇರೋ ಕಾರಿನಲ್ಲಿ ಕಾಣಬಹುದಾಗಿದೆ. ಈ ಪವರ್ ಫುಲ್ ಎಂಜಿನ್ ಹೊಂದಿರುವಂತಹ ಕಾರು ನಿಮಗೆ ಯಾವುದೇ ರೀತಿಯ ವಸ್ತುಗಳನ್ನು ಕೊಂಡೊಯ್ಯುವುದಕ್ಕೆ ಕೂಡ ಸಹಾಯಕವಾಗಲಿದೆ.
  •  Mahindra Bolero ಪ್ರಮುಖವಾಗಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಆಫ್ ರೋಡ್ ಗಳಂತಹ ಕಠಿಣ ಪರಿಸ್ಥಿತಿಯಲ್ಲಿ ಕೂಡ ಜಗ್ಗದೆ ಮುಂದಕ್ಕೆ ಹೋಗುವಂತಹ ಸಾಮರ್ಥ್ಯವನ್ನು ಹೊಂದಿರುವ ವಾಹನಗಳಾಗಿವೆ. ಹೀಗಾಗಿ ಪ್ರತಿಯೊಂದು ಪರಿಸ್ಥಿತಿಯಲ್ಲಿ ಕೂಡ ಇದು ಬೆಸ್ಟ್ ರೈಡಿಂಗ್ ಎಕ್ಸ್ಪಿರಿಯನ್ಸ್ ನೀಡುತ್ತದೆ.
  •  Mahindra Bolero ಕಾರು ಬೇರೆ ಕಾರುಗಳಿಗೆ ಹೋಲಿಸಿದರೆ ಕೇವಲ ಖರೀದಿಸುವುದಕ್ಕೆ ಮಾತ್ರ ಕಡಿಮೆ ಬೆಲೆಯಲ್ಲಿ ಸಿಗುವುದಿಲ್ಲ ಬದಲಾಗಿ ಅದನ್ನು ಮೈನ್ಟೈನ್ ಮಾಡುವುದಕ್ಕಾಗಿ ಕೂಡ ನೀವು ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾದ ಅಗತ್ಯ ಇರುವುದಿಲ್ಲ. ಲೋ ಮೈಂಟೆನೆನ್ಸ್ ವಾಹನಗಳಲ್ಲಿ ಇದು ಕೂಡ ಒಂದಾಗಿ ಕಾಣಿಸಿಕೊಳ್ಳುತ್ತದೆ.
  •  ಕಾರಿನಲ್ಲಿ ಅಳವಡಿಸಲಾಗಿರುವಂತಹ ಸುರಕ್ಷತಾ ಕ್ರಮಗಳ ಬಗ್ಗೆ ಮಾತನಾಡುವುದಾದರೆ ABS,EBD, ಮುಂದಿನ ಭಾಗದಲ್ಲಿ ಡುಯಲ್ ಏರ್ ಬ್ಯಾಗ್, ಇದರ ಜೊತೆಗೆ ಪ್ರತಿಯೊಬ್ಬ ಪ್ಯಾಸೆಂಜರ್ಗೂ ಕೂಡ ಸೀಟ್ ಬೆಲ್ಟ್ ಗಳನ್ನು ಈ ಕಾರಣದಲ್ಲಿ ಅಳವಡಿಸಲಾಗಿದೆ. ತಮ್ಮ ಕುಟುಂಬ ಸದಸ್ಯರ ಸುರಕ್ಷತೆಯನ್ನು ಬಯಸುವಂತಹ ಗ್ರಹಗಳಿಗೆ ಇದು ಹೇಳಿ ಮಾಡಿಸಿದ ಕಾರ್.

Mahindra Bolero 9 ಸೀಟರ್ ಕಾರಿನ ಬೆಲೆ

Mahindra Bolero 9 ಸೀಟರ್ ಕಾರು 2 ವೇರಿಯಂಟ್ ಗಳಲ್ಲಿ ನಿಮಗೆ ದೊರಕಲಿದೆ. B4 ಹಾಗೂ B6. ಇವುಗಳ ಬೆಲೆ 8.74 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಿಂದ ಪ್ರಾರಂಭಿಸಿ 9.44 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯವರೆಗೆ ಕಾಣಬಹುದಾಗಿದೆ.

ಇದರಲ್ಲಿ ಕೆಲವೊಂದು ವಿಶೇಷ ಫೀಚರ್ ಗಳಾಗಿರುವ, ಪವರ್ ಸ್ಟೇರಿಂಗ್, ಎಸಿ, ಪವರ್ ವಿಂಡೋಸ್, ಸೆಂಟ್ರಲ್ ಲಾಕಿಂಗ್, ಬ್ಲೂಟೂತ್ ಕನೆಕ್ಟಿವಿಟಿಯ ಮ್ಯೂಸಿಕ್ ಸಿಸ್ಟಮ್ ಅನ್ನು ಕೂಡ ಕಾಣಬಹುದಾಗಿದೆ.

advertisement

Leave A Reply

Your email address will not be published.