Karnataka Times
Trending Stories, Viral News, Gossips & Everything in Kannada

HSRP: ಈ ರೀತಿಯ ವಾಹನಗಳಿಗೆ HSRP ನಂಬರ್ ಪ್ಲೇಟ್ ನಿಂದ ವಿನಾಯಿತಿ ಸಿಗುವ ಸಾಧ್ಯತೆ ಇದೆ! ಹೊಸ ಟ್ವಿಸ್ಟ್

advertisement

ಈಗಾಗಲೇ ರಾಜ್ಯ ಸಾರಿಗೆ ಇಲಾಖೆಯಲ್ಲಿ ಮೇ 31ರ ಒಳಗೆ ನೀಡಿರುವಂತಹ ಕೊನೆಯ ದಿನಾಂಕದ ಗಡುವಿನ ನಿಯಮದ ಪ್ರಕಾರ ಪ್ರತಿಯೊಬ್ಬರು ಕೂಡ ತಮ್ಮ ವಾಹನಗಳ ಮೇಲೆ HSRP ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳುವುದು ಅತ್ಯಂತ ಕಡ್ಡಾಯವಾಗಿದೆ ಎಂಬುದು ಈಗಾಗಲೇ ಪ್ರತಿಯೊಬ್ಬರಿಗೂ ಕೂಡ ಸ್ಪಷ್ಟಪಡಿಸಿರುವಂತಹ ವಿಚಾರವಾಗಿದೆ. ವಿಶೇಷವಾಗಿ ಈ ನಿಯಮದ ಅಡಿಯಲ್ಲಿ 2019ರ ಒಳಗೆ ಖರೀದಿ ಮಾಡಲಾಗಿರುವಂತಹ ವಾಹನಗಳ ಮೇಲೆ HSRP ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳಬೇಕು ಈ ಮೂಲಕ ನಕಲಿ ನಂಬರ್ ಪ್ಲೇಟ್ ಬಳಕೆ ಹಾಗೂ ನಂಬರ್ ಪ್ಲೇಟ್ ಸುರಕ್ಷತೆಯ ವಿಚಾರದಲ್ಲಿ ಸರ್ಕಾರ ಸಾರಿಗೆ ಕ್ಷೇತ್ರದಲ್ಲಿ ಒಂದು ಅರಿವನ್ನು ಮೂಡಿಸುವಂತಹ ಕೆಲಸವನ್ನು ಮಾಡುವುದಕ್ಕೆ ಹೊರಟಿದೆ.

ಈ ವಾಹನಗಳ ಮೇಲೆ HSRP ನಂಬರ್ ಪ್ಲೇಟ್ ಅಳವಡಿಸುವುದರ ಮೇಲೆ ಸಿಗಲಿದೆ ರಿಯಾಯಿತಿ

ಹೊಸದಾಗಿ ಖರೀದಿ ಮಾಡಲಾಗಿರುವಂತಹ ವಾಹನಗಳ ಮೇಲೆ ಗ್ರಾಹಕರಿಗೆ ಶೋರೂಮ್ ನಿಂದಲೇ HSRP ನಂಬರ್ ಪ್ಲೇಟ್ ಅನ್ನು ಅಳವಡಿಸಿಯೇ ಡೆಲಿವರಿ ನೀಡಲಾಗುತ್ತದೆ. ಆದರೆ ಕೆಲವು ವಾಹನಗಳ ಮೇಲೆ ಕರ್ನಾಟಕ ರಾಜ್ಯದಲ್ಲಿ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವುದರ ಮೇಲೆ ರಿಯಾಯಿತಿ ನೀಡಬಹುದು ಎಂಬುದಾಗಿ ತಿಳಿದುಬಂದಿದೆ.

ವೆಬ್ಸೈಟ್ನಲ್ಲಿ ಆಯಾಯ ಕಂಪನಿಯ ಶೋರೂಮ್ ನವರು ರಿಜಿಸ್ಟರ್ ಮಾಡಿಕೊಂಡಿರುವಂತಹ ವಾಹನಗಳ ಮೇಲೆ HSRP ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳುವಂತಹ ಪ್ರಕ್ರಿಯೆ ಮಾತ್ರ ನಡೆಯುತ್ತಿದೆ. ಸಾಕಷ್ಟು ಹಳೆಯ ಕಂಪನಿಗಳ ಕಾರುಗಳ ಯಾವುದೇ ರೀತಿಯ ಮಾಹಿತಿ ವೆಬ್ಸೈಟ್ನಲ್ಲಿ ಕಾಣುತ್ತಿಲ್ಲ ಹೀಗಾಗಿ ಅವುಗಳಿಗೆ HSRP ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳುವಂತಹ ಆಯ್ಕೆ ಕೂಡ ಕಂಡು ಬರದೆ ಇರುವ ಕಾರಣದಿಂದಾಗಿ ಈ ವಾಹನಗಳಿಗೆ ನಂಬರ್ ಪ್ಲೇಟ್ ಅನ್ನು ಅಳವಡಿಸಿದಂತಹ ಪ್ರಕ್ರಿಯೆಯಿಂದ ರಿಯಾಯಿತಿ ನೀಡಬಹುದು ಎಂಬುದಾಗಿ ತಿಳಿದು ಬಂದಿದೆ.

advertisement

Image Source: Zee Business

ಉದಾಹರಣೆಗೆ cielo, Matiz, Hero Puch, ಅಂಬಾಸಿಡರ್ ಸೇರಿದಂತೆ ಸಾಕಷ್ಟು ಕಂಪನಿಯ ಕಾರುಗಳ ಆಪರೇಷನ್ ಭಾರತ ದೇಶದಲ್ಲಿ ಸಂಪೂರ್ಣವಾಗಿ ಸ್ಥಗಿತಗೊಂಡಿದೆ ಹೀಗಾಗಿ ಇವುಗಳ ಮೇಲಿನ HSRP ನಂಬರ್ ಪ್ಲೇಟ್ ಪಡೆದುಕೊಳ್ಳುವುದು ಅಸಾಧ್ಯವೇ ಸರಿ ಎಂದು ಹೇಳಬಹುದಾಗಿದೆ. ಈ ವಿಚಾರದ ಬಗ್ಗೆ ಸಾಕಷ್ಟು ಕಂಪ್ಲೇಂಟ್ಗಳನ್ನು ಕೂಡ ಗ್ರಾಹಕರ ಕಡೆಯಿಂದ ಸಾರಿಗೆ ಸಂಸ್ಥೆಗೆ ಹೇಳಲಾಗಿದೆ.

transport.karnataka.gov.in ಇದು ಅಧಿಕೃತ ವೆಬ್ಸೈಟ್ ಆಗಿದ್ದು ಎಲ್ಲಿ ಹೋಗಿ ನಂಬರ್ ಪ್ಲೇಟ್ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಬೇಕಾಗಿರುತ್ತದೆ. ಇನ್ನು ಸಾಕಷ್ಟು ಹಳೆಯ ಕಂಪನಿಗಳ ಕಾರುಗಳನ್ನು ಇದರ ಅಡಿಯಲ್ಲಿ ರಿಜಿಸ್ಟರ್ ಮಾಡಿಸಿಕೊಳ್ಳುವ ಸಾಧ್ಯವಾಗುತ್ತಿಲ್ಲ ಯಾಕೆಂದರೆ ಆ ಕಂಪನಿಗಳು ಭಾರತವನ್ನು ಬಿಟ್ಟು ಈಗಾಗಲೇ ತಮ್ಮ ಆಪರೇಷನ್ ಗಳನ್ನು ಸ್ಥಗಿತಗೊಳಿಸಿವೆ. ಹೀಗಾಗಿ ಇಂತಹ ಕಾರುಗಳ ಸುರಕ್ಷಿತ ನಂಬರ್ ಪ್ಲೇಟ್ ಅನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಮಾತನ್ನು ಕೂಡ ಸಾರಿಗೆ ಇಲಾಖೆಗೆ ಸಂಬಂಧಪಟ್ಟಂತಹ ಅಧಿಕಾರಿಗಳು ಗ್ರಾಹಕರ ಕೋರಿಕೆಯ ಮೇರೆಗೆ ಹೇಳಿಕೊಂಡಿದ್ದಾರೆ.

ಈ ವಿಚಾರದ ಕುರಿತು ಅಂತ ನಾವು ಇಲಾಖೆಗೆ ಪತ್ರ ಬರೆದಿದ್ದು ಇಂತಹ ವಾಹನಗಳಿಗೂ ಕೂಡ HSRP ನಂಬರ್ ಪ್ಲೇಟ್ ಅನ್ನು ಅಳವಡಿಸುವ ಅವಕಾಶವನ್ನು ಕಂಪನಿಗಳಿಗೆ ನೀಡುವಂತಹ ಅವಕಾಶ ನೀಡಿ ಎಂಬುದಾಗಿ ಕೇಳಿದ್ದಾರೆ. ಈಗಾಗಲೇ ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳುವಂತಹ ಗಡುವನ್ನು ಸಾಕಷ್ಟು ಬಾರಿ ವಿಸ್ತರಿಸಲಾಗಿದ್ದು ಮೇ 31 ಈಗ ಕೊನೆ ದಿನಾಂಕವಾಗಿದೆ. ಈ ರೀತಿ ಹಳೆಯ ವಾಹನಗಳ ಮೇಲೆ ನಂಬರ್ ಪ್ಲೇಟ್ ಅನ್ನು ಅಳವಡಿಸುವಂತಹ ವಿಚಾರದ ಬಗ್ಗೆ ಸಾರಿಗೆ ಇಲಾಖೆ ಯಾವ ನಿರ್ಧಾರವನ್ನು ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

advertisement

Leave A Reply

Your email address will not be published.