Karnataka Times
Trending Stories, Viral News, Gossips & Everything in Kannada

Property Rights: ಹೆಣ್ಣು ಮಕ್ಕಳು ತಮ್ಮ ಆಸ್ತಿಯ ಹಕ್ಕನ್ನು ಅಣ್ಣ ತಮ್ಮಂದಿರಿಗೆ ಬಿಟ್ಟು ಕೊಡಬಹುದಾ? ಹೊಸ ರೂಲ್ಸ್ ಘೋಷಣೆ

advertisement

ನಮ್ಮ ಭಾರತ ದೇಶದಲ್ಲಿ ಆಸ್ತಿ (Property) ಕಾನೂನಿನ ಕುರಿತಂತೆ ಸಾಕಷ್ಟು ಜನರಿಗೆ ಸರಿಯಾದ ಮಾಹಿತಿ ಇರುವುದಿಲ್ಲ. ಇನ್ನು ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಕೆಲವೊಂದು ಪ್ರಮುಖ ಆಸ್ತಿಯ ನಿಯಮಗಳು ಅದರಲ್ಲೂ ವಿಶೇಷವಾಗಿ ಮನೆಯಲ್ಲಿ ಇರುವಂತಹ ಹೆಣ್ಣು ಮಗು ಮದುವೆಯಾಗಿ ಗಂಡನ ಮನೆಗೆ ಹೋದ ನಂತರ ಒಂದು ವೇಳೆ ಆಕೆ ತನ್ನ ಪಾಲಿಗೆ ಬರಬೇಕಾಗಿರುವಂತಹ ಆಸ್ತಿಯ ಹಕ್ಕು ಬಿಡುಗಡೆ ಮಾಡುವುದರ ಬಗ್ಗೆ ಯೋಚನೆ ಮಾಡಬೇಕಾದರೆ ನಿಯಮಗಳು ಏನು ಇರುತ್ತವೆ ಅನ್ನೋದನ್ನ ಇವತ್ತಿನ ಈ ಲೇಖನದ ಮೂಲಕ ತಿಳಿಯೋಣ.

ಹೆಣ್ಣು ಮಕ್ಕಳ ಆಸ್ತಿಯ ಹಕ್ಕಿನ ಬಿಡುಗಡೆ:

 

Image Source: Housing

 

ಮಹಿಳೆಯರು ತಮ್ಮ ಪಾಲಿಗೆ ಬರಬೇಕಾಗಿರುವಂತಹ ಪಿತ್ರಾರ್ಜಿತ ಆಸ್ತಿ (Inherited Property) ಯನ್ನು ಒಂದು ವೇಳೆ ತಮ್ಮ ಸಹೋದರ ಸಹೋದರಿಯರಿಗೆ ರಿಜಿಸ್ಟರ್ ಮಾಡಿಕೊಡುವ ಮೂಲಕ ಬಿಟ್ಟುಕೊಡುತ್ತಾರೆ ಅಂದ್ರೆ ಅದನ್ನು ಆಸ್ತಿ ಹಕ್ಕು (Property Rights) ಬಿಡುಗಡೆ ಎಂಬುದಾಗಿ ಕಾನೂನು ಭಾಷೆಯಲ್ಲಿ ಹೇಳಲಾಗುತ್ತದೆ.

ಒಂದು ಲೆಕ್ಕದಲ್ಲಿ ಹೇಳುವುದಾದರೆ ತನಗೆ ಬರಬೇಕಾಗಿರುವ ಆಸ್ತಿಯನ್ನು ತನ್ನ ಅಣ್ಣಂದಿರು ಅಥವಾ ಸಹೋದರರಿಗೆ ಮಹಿಳೆ ಬಿಟ್ಟುಕೊಳ್ಳುವುದು ಎಂದು ಹೇಳಬಹುದಾಗಿದೆ. ಇದನ್ನು ಕೇವಲ ಹೆಣ್ಣು ಮಕ್ಕಳೇ ಮಾಡಬೇಕಾದ ಅಗತ್ಯವಿಲ್ಲ ಗಂಡು ಮಕ್ಕಳು ಕೂಡ ಮಾಡಬಹುದಾಗಿದೆ.

  • ಉದಾಹರಣೆಗೆ ಬೇರೆ ಏನನ್ನು ಪಡೆಯುವ ನಿರೀಕ್ಷೆಯಲ್ಲಿ ಈ ರೀತಿ ಆಸ್ತಿ ಹಕ್ಕು ಬಿಡುಗಡೆ ಮಾಡುವುದನ್ನು ಕೂಡ ಮಾಡಬಹುದಾಗಿದೆ.

advertisement

ಸಾಮಾನ್ಯವಾಗಿ ಹೆಣ್ಣು ಮಕ್ಕಳು ಮದುವೆಯಾದ ನಂತರ ಗಂಡನ ಮನೆಗೆ ಹೋಗುತ್ತಾರೆ ಹೀಗಾಗಿ ಆ ಮದುವೆಯಲ್ಲಿ ಮಾಡಿದ ಖರ್ಚಿನ ಸಲುವಾಗಿ ಅಥವಾ ಗಂಡನ ಮನೆಗೆ ಹೋದ ನಂತರ ತಮ್ಮ ತಂದೆ ತಾಯಿಯನ್ನು ತಾನು ಸಾಕುವುದಕ್ಕೆ ಆಗುವುದಿಲ್ಲ ಎನ್ನುವ ಕಾರಣಕ್ಕಾಗಿ ಅನಾದಿಕಾಲದಿಂದಲೂ ಕೂಡ ತಮ್ಮ ಪಾಲಿಗೆ ಬರಬೇಕಾಗಿರುವಂತಹ ಆಸ್ತಿಯನ್ನು ಹೆಣ್ಣು ಮಕ್ಕಳು ಮನೆಯಲ್ಲಿ ನಿಜವಾದ ಯಜಮಾನರಾಗಿರುವಂತಹ ಗಂಡು ಮಕ್ಕಳಿಗೆ ಅಂದರೆ ತಂದೆ ತಾಯಿಯನ್ನು ಸಾಕುವಂತಹ ವಾರಿಸುದಾರರಿಗೆ ಹಕ್ಕು ಬಿಡುಗಡೆಯ ಮೂಲಕ ಆಸ್ತಿಯನ್ನು ಬಿಟ್ಟುಕೊಡೋದು ನಡೆದುಕೊಂಡು ಬಂದಿದೆ. ಅವಿಭಾಜಿತ ಕುಟುಂಬಗಳಲ್ಲಿ ಈ ರೀತಿಯ ಘಟನೆಗಳು ಹೆಚ್ಚಾಗಿ ನಡೆಯುತ್ತವೆ. ನಮ್ಮ ದೇಶದಲ್ಲಿ 80% ಕ್ಕು ಹೆಚ್ಚಿನ ಹೆಣ್ಣು ಮಕ್ಕಳು ಇದೇ ಕೆಲಸವನ್ನು ಮಾಡುತ್ತಿದ್ದಾರೆ.

ಹಕ್ಕು ಬಿಡುಗಡೆ ಮಾಡುವ ವಿಧಾನ:

 

Image Source: Housing

 

ಯಾರು ಹಕ್ಕನ್ನು ಬಿಡುಗಡೆ ಮಾಡುತ್ತಿದ್ದಾರೆ ಆ ಮಹಿಳೆಯರ ಅಥವಾ ಆ ವ್ಯಕ್ತಿಗಳ ಹಾಗೂ ಅದನ್ನು ಪಡೆದುಕೊಳ್ಳುವವರ ಆಧಾರ್ ಕಾರ್ಡ್ (Aadhaar Card), ಆ ಜಮೀನಿನ ಪಹಣಿ (Pahani), ಆಕಾರ್ ಬಂದ, 11E ಸ್ಕೆಚ್, ವಂಶಾವಳಿ ಪ್ರಮಾಣ ಪತ್ರ (Genealogy Certificate), ಇಬ್ಬರು ಸಾಕ್ಷಿಗಳ ಜೊತೆಗೆ ನಿಮಗೆ ಸಂಬಂಧಪಟ್ಟಂತಹ ಸಬ್ ರಿಜಿಸ್ಟರ್ ಆಫೀಸ್ ಗೆ ಹೋಗಬೇಕಾಗಿರುತ್ತದೆ. ಈ ಮೂಲಕ ನೀವು ಹಕ್ಕು ಬಿಡುಗಡೆಯನ್ನು ರಿಜಿಸ್ಟರ್ ಮಾಡಬಹುದಾಗಿದೆ.

ಈ ಸಂದರ್ಭದಲ್ಲಿ ಪ್ರಮುಖವಾಗಿ ಗಮನಿಸಬೇಕಾಗಿರುವ ಅಂಶಗಳು:

  • ಹಕ್ಕು ದಾನವನ್ನು ಕೇವಲ ಬಾಯಿಮಾತಿಗೆ ಹೇಳಿ ವರ್ಗಾವಣೆ ಮಾಡಲು ಸಾಧ್ಯವಿಲ್ಲ ಅದನ್ನು ನೇರವಾಗಿ ಸಬ್ ರಿಜಿಸ್ಟರ್ ಆಫೀಸ್ ಗೆ ಹೋಗಿ ನೋಂದಾವಣೆ ಮಾಡಿಸಿಕೊಳ್ಳುವ ಮೂಲಕವಷ್ಟೇ ಅಧಿಕೃತವಾಗಿ ಮಾಡಬಹುದಾಗಿದೆ.
  • ಈ ಸಂದರ್ಭದಲ್ಲಿ ಸ್ಟ್ಯಾಂಪ್ ಡ್ಯೂಟಿ ಚಾರ್ಜ್ ಅನ್ನು ಕಟ್ಟಬೇಕಾಗಿರುತ್ತದೆ. ಹಾಗೂ ಈ ಸಂದರ್ಭದಲ್ಲಿ ಕಟ್ಟಬೇಕಾಗಿರುವಂತಹ ಇತರ ಶುಲ್ಕಗಳನ್ನು ಕೂಡ ಕಟ್ಟಬೇಕಾಗಿದೆ.

advertisement

Leave A Reply

Your email address will not be published.