Karnataka Times
Trending Stories, Viral News, Gossips & Everything in Kannada

SBI: ನಿರ್ಧಾರ ಬದಲಿಸಿದ ಸ್ಟೇಟ್ ಬ್ಯಾಂಕ್! ಬ್ಯಾಂಕ್ ಖಾತೆ ಇದ್ದವರಿಗೆ ಗುಡ್ ನ್ಯೂಸ್

advertisement

ಇಂದು ಬ್ಯಾಂಕ್ ವ್ಯವಹಾರಗಳು ದಿನನಿತ್ಯ ಹೆಚ್ಚಳ ವಾಗಿದೆ. ಹಣದ ವಹಿವಾಟು ‌ಗಳನ್ನು ಜನರು ದಿನ‌ನಿತ್ಯ ಮಾಡುತ್ತಾರೆ.ಅದೇ ರೀತಿ ಗ್ರಾಹಕರ ಕಾರ್ಯ ವೈಖರಿ ಗೆ ಇಂದು ಹಲವು ರೀತಿಯ ಬ್ಯಾಂಕ್ ಗಳು ಸೇರಿದ್ದು ಅದರಲ್ಲಿ ಸ್ಟೇಟ್ ಬ್ಯಾಂಕ್ ‌ಕೂಡ ಮಹತ್ವದ ಬ್ಯಾಂಕ್ ಎಂದೆನಿಸಿಕೊಂಡಿದ್ದು ಇಂದು ಗ್ರಾಹಕರ ಹಿತ ದೃಷ್ಟಿಯಿಂದ ಹಲವು ರೀತಿಯ ಯೋಜನೆಗಳನ್ನು ರೂಪಿಸುತ್ತಾ ಹೊಸ ಹೊಸ ಅವಕಾಶ ಗಳನ್ನು ಗ್ರಾಹಕರಿಗೆ ನೀಡುತ್ತಲೇ ಬಂದಿದೆ. ಅದೇ ರೀತಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗಾಗಿ ಅಮೃತ್ ಕಲಶ ಠೇವಣಿ ಯೋಜನೆಯ ಅವಧಿಯನ್ನು ಮತ್ತೊಮ್ಮೆ ವಿಸ್ತರಣೆ ಮಾಡಿದ್ದು ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ.

ಏನಿದು ಅಮೃತ್ ಕಲಶ ಯೋಜನೆ?

 

Image Source: Zee News

 

ಈ ಅಮೃತ್ ಕಳಶ್ ಯೋಜನೆ (Amrit Kalash Scheme) ಯು ಎಸ್‌ಬಿಐನ ಇತರ ನಿಶ್ಚಿತ ಠೇವಣಿಯಂತೆಯೇ ಕಾರ್ಯ ನಿರ್ವಹಣೆ ಮಾಡಲಿದೆ. ಈ ಯೋಜನೆಯ‌ ಠೇವಣಿ ಅವಧಿ 400 ದಿನ ಇರಲಿದ್ದು ಸಾಮಾನ್ಯ ಗ್ರಾಹಕರಿಗೆ ಈ ಅವಧಿ ಠೇವಣಿಗೆ ಶೇ. 7.1ರಷ್ಟು ಬಡ್ಡಿ ಇರಲಿದ್ದು , ಹಿರಿಯ ನಾಗರಿಕರಿಗೆ ಶೇ. 7.6ರಷ್ಟು ಬಡ್ಡಿ ಕೂಡ ಇರಲಿದೆ.ಸುಮಾರು ಒಂದು ವರ್ಷ ಅವಧಿಗೆ ಹೂಡಿಕೆ ಮಾಡಲು ಇದು ಸೂಕ್ತ ಯೋಜನೆ ಕೂಡ ಆಗಿದೆ.

ಇಷ್ಟು ಬಡ್ಡಿ ಸಿಗಲಿದೆ?

 

Image Source: The Financial Express

 

advertisement

ಅಮೃತ್ ಕಲಶ್ ಯೋಜನೆ (Amrit Kalash Scheme) ಅವಧಿ 400 ದಿನಗಳು ಆಗಿದ್ದು ಈ ಯೋಜನೆಯಲ್ಲಿ ಹಿರಿಯ ನಾಗರಿಕರು 1ಲಕ್ಷ ರೂ. ಹೂಡಿಕೆ ಮಾಡಿದರೆ 8600 ಬಡ್ಡಿ ಪಡೆಯ ಬಹುದು. ಇತರರು 400 ದಿನಗಳ ಅವಧಿಗೆ 1ಲಕ್ಷ ರೂ. ಹೂಡಿಕೆ ಮೇಲೆ 8,017ರೂ. ಬಡ್ಡಿದರ ಕೂಡ ಪಡೆಯಬಹುದು.

ಅವಧಿ ವಿಸ್ತರಣೆ?

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಇದೀಗ ಅಮೃತ್ ಕಲಶದ ಅವಧಿಯನ್ನು ಮತ್ತೊಮ್ಮೆ ವಿಸ್ತರಣೆ ಮಾಡಿದ್ದು ಇದರ 400 ದಿನಗಳ ಅವಧಿಯು ಮಾರ್ಚ್ 31 ರಂದು ಮುಕ್ತಾಯಗೊಂಡಿದ್ದು ಈ ವರ್ಷ ಇದನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಿದೆ. ಈಗಾಗಲೇ ‌ಹಲವು ಭಾರಿ ವಿಸ್ತರಣೆ ಮಾಡಿದ್ದು ಬ್ಯಾಂಕ್ ಮತ್ತೊಮ್ಮೆ ಈ ವಿಶೇಷ ಎಫ್‌ಡಿ ಯೋಜನೆಯ ಸಮಯವನ್ನು 30 ಸೆಪ್ಟೆಂಬರ್ 2024 ರವರೆಗೆ ವಿಸ್ತರಣೆ ಮಾಡಿದೆ.

ಈ ಯೋಜನೆ ಮಾಡಲು ಈ ದಾಖಲೆ ಕಡ್ಡಾಯ:

ಈ ಖಾತೆಯನ್ನು ತೆರೆಯಲು ಕೆಲವು ದಾಖಲೆ ಕಡ್ಡಾಯವಾಗಿ ಬೇಕಿದ್ದು

  • ಆಧಾರ್ ಕಾರ್ಡ್
  • ಮೊಬೈಲ್ ಸಂಖ್ಯೆ
  • ಪ್ಯಾನ್ ಕಾರ್ಡ್
  • ಪಾಸ್‌ಪೋರ್ಟ್‌ ಗಾತ್ರದ ಫೋಟೋ,

ಇದಕ್ಕಾಗಿ ನೀವು ನಿಮ್ಮ ಹತ್ತಿರದ ಬ್ಯಾಂಕ್‌ಗೆ ಹೋಗಿ ಮತ್ತು ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ಎಸ್‌ಬಿಐ ಅಮೃತ್ ಕಲಶ್‌ ಯೋಜನೆ (SBI Amrit Kalash Scheme) ಯನ್ನು ಮಾಡಬಹುದು.

advertisement

Leave A Reply

Your email address will not be published.