Karnataka Times
Trending Stories, Viral News, Gossips & Everything in Kannada

SBI Accounts: ಸ್ಟೇಟ್ ಬ್ಯಾಂಕ್ ನಲ್ಲಿ ಖಾತೆ ಇದ್ದವರಿಗೆ ಬೆಳ್ಳಂಬೆಳಿಗ್ಗೆ 3 ಹೊಸ ರೂಲ್ಸ್! ಬ್ಯಾಂಕ್ ಆದೇಶ ಪ್ರಕಟ

advertisement

State Bank Of India : ಹೊಸ ಹಣಕಾಸು ವರ್ಷ ಪ್ರಾರಂಭವಾಗಿರುವ ಕಾರಣ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ನಿಯಮದಲ್ಲಿ ಕೆಲ ಬದಲಾವಣೆಗಳನ್ನು ಮಾಡಿ ಗ್ರಾಹಕರಿಗೆ ಅದರ ಅಧಿಸೂಚನೆಯನ್ನು ನೀಡಿದ್ದು, SBI ನ ಯಾವೆಲ್ಲ ನಿಯಮಗಳಲ್ಲಿ ಬದಲಾವಣೆಯಾಗಿದೆ? ಯಾವ ಹೊಸ ಯೋಜನೆಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜಾರಿಗೆ ತಂದಿದ್ದಾರೆ? ಇದರಿಂದ ಗ್ರಾಹಕರಿಗೆ ಏನೆಲ್ಲಾ ಅನುಕೂಲವಾಗಲಿದೆ? ಎಂಬ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

ಅಮ್ರೀತ್ ಕಲಾಷ್ ಯೋಜನೆ ಬಡ್ಡಿದರ ಏರಿಕೆ!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹಲವು ಯೋಜನೆಗಳಲ್ಲಿ ಬಹು ಜನಪ್ರಸಿದ್ಧಿ ಅಮ್ರೀತ್ ಕಲಾಶ್ ಯೋಜನೆ(Amrit Kalash Scheme) ಕೂಡ ಒಂದು‌. 400 ದಿನಗಳ ಸ್ಕೀಮ್ ಇದಾಗಿದ್ದು, ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಗ್ರಾಹಕರಿಗೆ ಎಸ್‌ಬಿಐ ಹೆಚ್ಚಿನ ಬಡ್ಡಿ ದರ(interest rate) ನೀಡಲು ನಿರ್ಧರಿಸಿದ್ದಾರೆ. ಸಾಮಾನ್ಯ ನಾಗರಿಕರ ಹೂಡಿಕೆಯಲ್ಲಿ ಗರಿಷ್ಠ 7.10% ಬಡ್ಡಿ, ಅದರಂತೆ ಹಿರಿಯ ನಾಗರಿಕರ ಹೂಡಿಕೆಗೆ ಇದಕ್ಕಿಂತ 0.5% ಹೆಚ್ಚಿನ ಬಡ್ಡಿಗೆ ಅಂದರೆ 7.6% ನಿಗದಿಪಡಿಸಿದ್ದಾರೆ. ಏಪ್ರಿಲ್ 12, 2018 ರಂದು ಎಸ್ ಬಿ ಐ ಪರಿಚಯಿಸಿರುವ ಈ ಅಮ್ರೀತ್ ಕಲಾಶ್ ಯೋಜನೆಯಡಿ ಹೂಡಿಕೆದಾರರು ಗರಿಷ್ಠ ಎರಡು ಕೋಟಿ ಹಣವನ್ನು 400 ದಿನಗಳ ವರೆಗೂ ಹೂಡಿಕೆ ಮಾಡಬಹುದು.

new rules of SBI Bank?
Image Source: ANI News

ವಾಟ್ಸಪ್ ಮೂಲಕ ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ

ಎಸ್ ಬಿ ಐ ತನ್ನ ಗ್ರಾಹಕರಿಗೆ ಅನುಕೂಲವಾಗುವಂತಹ ಸಾಕಷ್ಟು ನಿಯಮಗಳನ್ನು ಜಾರಿಗೆ ತರುತ್ತಲೇ ಇರುತ್ತಾರೆ. ಅದರಂತೆ SBIನಲ್ಲಿ ವಾಟ್ಸಪ್ ಬ್ಯಾಂಕಿಂಗ್(WhatsApp banking) ಕೂಡ ಪ್ರಾರಂಭವಾಗಿದ್ದು, ನಿಮ್ಮ ಬ್ಯಾಂಕ್ ಖಾತೆಗೆ ನೋಂದಣಿ ಯಾಗಿರುವ ಮೊಬೈಲ್ ಸಂಖ್ಯೆಯ ಮೂಲಕ 90226890226 ಈ ದೂರವಾಣಿ ಸಂಖ್ಯೆಗೆ(Mobile Number) ಎಂದು HI ಎಂದು ಮೆಸೇಜ್ ಮಾಡಿ ಇದರ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಬ್ಯಾಂಕ್ ಕುರಿತಾದ ನಿಮ್ಮ ಸಮಸ್ಯೆಗಳನ್ನು ವಾಟ್ಸಾಪ್ ಮೂಲಕವೇ ಬಗ್ಗೆ ಹರಿಸಿಕೊಳ್ಳುವ ಅನುಕೂಲವನ್ನು SBI ಗ್ರಾಹಕರಿಗೆ ಮಾಡಿಕೊಟ್ಟಿದ್ದಾರೆ.

ಲಭ್ಯವಿರುವ ಸೇವೆಗಳು
•ಬ್ಯಾಲೆನ್ಸ್ ಎನ್ಕ್ವರಿ/balance enquiry
•ಮಿನಿ ಸ್ಟೇಟ್ಮೆಂಟ್/mini statement

advertisement

ಡೆಬಿಟ್ ಕಾರ್ಡ್ ಸರ್ವಿಸ್  Charges  ಹೆಚ್ಚಳ

Image Source: ANI News

SBI ಈ ಹೊಸ ಹಣಕಾಸು ವರ್ಷಕ್ಕೆ ಗ್ರಾಹಕರು ಬಳಸುವಂತಹ ಡೆಬಿಟ್ ಕಾರ್ಡ್(Debit card) ನ SBI ವಾರ್ಷಿಕ ಶುಲ್ಕವನ್ನು ಏರಿಕೆ ಮಾಡಿದ್ದಾರೆ. ಬ್ಯಾಂಕ್ ವತಿಯಿಂದ ಲಭ್ಯವಾಗಿರುವ ಅಧಿಸೂಚನೆಯ ಪ್ರಕಾರ ಡೆಬಿಟ್ ಕಾರ್ಡ್ಗಳ ಮೇಲಿನ ವಾರ್ಷಿಕ ಶುಲ್ಕವನ್ನು 75 ರೂಪಾಯಿಗಳಿಗೂ + ಜಿ ಎಸ್ ಟಿ ಹಣವನ್ನು ಏರಿಕೆ ಮಾಡಿದ್ದಾರೆ.

ಡೆಬಿಟ್ ಕಾರ್ಡ್ ವಾರ್ಷಿಕ ನಿರ್ವಹಣೆ ಶುಲ್ಕಗಳು

1. ಕ್ಲಾಸಿಕ್/ ಸಿಲ್ವರ್/ಗ್ಲೋಬಲ್/ ಕಾಂಟಾಕ್ಟ್ ಲೆಸ್ ಡೆಬಿಟ್ ಕಾರ್ಡ್- ಹಳೆಯ ಶುಲ್ಕ- 125+ GST, ಹೆಚ್ಚಳದ ಶುಲ್ಕ- 200+GST.

2. ಯುವ ಗೋಲ್ಡ್/ಕಾಂಬೋ ಡೆಬಿಟ್ ಕಾರ್ಡ್/ಮೈ ಕಾರ್ಡ್- ಹಳೆಯ ಶುಲ್ಕ 175+ GST, ಹೆಚ್ಚಳದ ಶುಲ್ಕ- 250 + GST.

3. ಪ್ಲಾಟಿನಂ ಡೆಬಿಟ್ ಕಾರ್ಡ್- ಹಳೆಯ ಶುಲ್ಕ 250 + GST, ಏರಿಕೆಯಾದ ಶುಲ್ಕ- 325 + GST.

4. ಪ್ರೈಡ್/ ಪ್ಲಾಟಿನಮ್/ ಪ್ರೀಮಿಯಂ ಬಿಸಿನೆಸ್ ಡೆಬಿಟ್ ಕಾರ್ಡ್- ಹಳೆಯ ಶುಲ್ಕ 350 + GST, ಹೆಚ್ಚುವರಿ ಮಾಡಲಾದ ಶುಲ್ಕ 425+GST.

advertisement

Leave A Reply

Your email address will not be published.