Karnataka Times
Trending Stories, Viral News, Gossips & Everything in Kannada

Electric Bikes: 50 ನಿಮಿಷದಲ್ಲಿ ಚಾರ್ಜ್ ಆಗಿ 120Km ವರೆಗೆ ಓಡುತ್ತೆ ಈ ಎಲೆಕ್ಟ್ರಿಕ್ ಬೈಕ್! KTM ಗಿಂತ ಕಡಿಮೆ. ಬೆಲೆ

advertisement

ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವಂತಹ ಪೆಟ್ರೋಲ್(Petrol) ಹಾಗೂ ಡೀಸೆಲ್(Diesel) ಬೆಲೆ ಏರಿಕೆಯಿಂದಾಗಿ ಹಾಗೂ ಹೆಚ್ಚುತ್ತಿರುವ ಪರಿಸರ ಮಾಲಿನ್ಯದ ಕಾರಣದಿಂದಾಗಿ ಎಲೆಕ್ಟ್ರಿಕ್(Electric) ವಾಹನಗಳನ್ನು ಹೆಚ್ಚಾಗಿ ಜನರು ಬಳಸುವುದಕ್ಕೆ ಪ್ರಾರಂಭ ಮಾಡಿದ್ದಾರೆ. ಇದು ಜನರಲ್ಲಿ ಪರಿಸರದ ಬಗ್ಗೆ ಹಾಗೂ ಇಂಧನದ ಬಗ್ಗೆ ಹೆಚ್ಚಾಗಿರುವಂತಹ ಕಾಳಜಿ ಮತ್ತು ಎಲೆಕ್ಟ್ರಿಕ್ ವಾಹನಗಳ ಮೇಲೆ ಹೆಚ್ಚಾಗುತ್ತಿರುವ ಒಲವಿನ ಸಂಕೇತವಾಗಿದೆ ಎಂದು ಹೇಳಬಹುದಾಗಿದೆ. ಇದೇ ರೀತಿಯಲ್ಲಿ ಈಗ ಹೊಸದಾಗಿ ಮಾರುಕಟ್ಟೆಗೆ ಬಂದಿರುವಂತಹ ಎಲೆಕ್ಟ್ರಿಕ್ ಬೈಕ್ ನ ಬಗ್ಗೆ ಇವತ್ತಿನ ಈ ಲೇಖನದ ಮೂಲಕ ನಿಮಗೆ ಹೇಳುವುದಕ್ಕೆ ಹೊರಟಿದ್ದೇವೆ.

Maruthisan Racer
Image Source: HT Auto

Maruthisan Racer ಎಲೆಕ್ಟ್ರಿಕ್ ಬೈಕ್

advertisement

ಇವತ್ತಿನ ಲೇಖನದಲ್ಲಿ ನಾವು ಮಾತನಾಡುವುದಕ್ಕೆ ಹೊರಟಿರೋದು ಅಡ್ವಾನ್ಸ್ ಟೆಕ್ನಾಲಜಿ ಜೊತೆಗೆ ಮಾರುಕಟ್ಟೆಗೆ ಕಾಲಿಟ್ಟಿರುವಂತಹ ಎಲೆಕ್ಟ್ರಿಕ್ ಬೈಕ್ ಆಗಿರುವ Maruthisan Racer ಬೈಕ್ ಬಗ್ಗೆ. ಇದರಲ್ಲಿ ನೀವು ಏನೆಲ್ಲಾ ಪಡೆಯಬಹುದು ಅಥವಾ ಕಾಣಬಹುದು ಅನ್ನೋದನ್ನ ನೋಡೋದಾದ್ರೆ ABS ಸಿಂಗಲ್ ಚಾನೆಲ್, ಚಾರ್ಜಿಂಗ್ ಪಾಯಿಂಟ್, ಡಿಜಿಟಲ್ ಮೀಟರ್, ಎಲ್ಇಡಿ ಟೈಲ್ ಲೈಟ್, ಡಿಜಿಟಲ್ ಓಡೋಮೀಟರ್, ಸೇರಿದಂತೆ ಇನ್ನೂ ಸಾಕಷ್ಟು ಅಡ್ವಾನ್ಸ್ ಫೀಚರ್ಗಳನ್ನು ನೀವು ಈ ಬೈಕ್ ನಲ್ಲಿ ಕಾಣಬಹುದಾಗಿದ್ದು ಇದೇ ಕಾರಣದಿಂದಾಗಿ ಈ ಬೈಕ್ ಇನ್ನಷ್ಟು ಆಕರ್ಷಕವಾಗಿ ಕಾಣುತ್ತದೆ.

Maruthisan Racer ಬೈಕ್ ಅನ್ನು ನೀವು ಐವತ್ತೇಳು ನಿಮಿಷಗಳ ಕಾಲ ಚಾರ್ಜ್ ಮಾಡಿದರೆ ಸಾಕು ಚಾರ್ಜ್ ಫುಲ್ ಆಗುತ್ತದೆ. ಒಂದು ಬಾರಿ ಫುಲ್ ಚಾರ್ಜ್ ಮಾಡಿದ್ರೆ ನೀವು ಈ ಬೈಕಿನಲ್ಲಿ 120 ಕಿಲೋಮೀಟರ್ಗಳ ದೂರವನ್ನು ಕ್ರಮಿಸಬಹುದಾಗಿದೆ. ಕೇವಲ ಸ್ಟೈಲಿಶ್ ಹಾಗು ಡಿಸೈನ್ ವಿಚಾರದಲ್ಲಿ ಮಾತ್ರವಲ್ಲದೆ ಈ ಬೈಕ್ ಉತ್ತಮ ಮೈಲೇಜ್ ನೀಡುವುದಕ್ಕೆ ಕೂಡ ನಿಮಗೆ ಉಪಯುಕ್ತವಾಗಿದೆ.134.1bhp ಪವರ್ ಅನ್ನು ಈ ಬೈಕಿನ ಮೋಟಾರ್ ಒದಗಿಸುತ್ತದೆ ಎಂಬುದಾಗಿ ತಿಳಿದು ಬಂದಿದೆ.

Maruthisan Racer ಎಲೆಕ್ಟ್ರಿಕ್ ಬೈಕಿನ ಬೆಲೆ ಎಷ್ಟು ಗೊತ್ತಾ?

ಪ್ರತಿಯೊಬ್ಬರು ಕೂಡ ಇಷ್ಟೊಂದು ಅಡ್ವಾನ್ಸ್ ಪಿಚ್ಚರ್ ಗಳನ್ನು ಹೊಂದಿರುವಂತಹ ಸ್ಟೈಲಿಶ್ ಎಲೆಕ್ಟ್ರಿಕ್ ಬೈಕಿನ ಬೆಲೆ ದೊಡ್ಡ ಮಟ್ಟದಲ್ಲಿ ಇರಬಹುದು ದುಬಾರಿ ಆಗಿರಬಹುದು ಎಂಬುದಾಗಿ ಭಾವಿಸಿರಬಹುದು ಆದರೆ Maruthisan Racer ಎಲೆಕ್ಟ್ರಿಕ್ ಬೈಕಿನ ಬೆಲೆ 1.93 ಲಕ್ಷ ರೂಪಾಯ್ ಎಕ್ಸ್ ಶೋರೂಮ್ ಬೆಲೆಯಲ್ಲಿ ನೀವು ಖರೀದಿ ಮಾಡಬಹುದಾಗಿದೆ. ಖಂಡಿತವಾಗಿ ಈ ಬೈಕ್ ನಿಮಗೆ ಉತ್ತಮವಾದ ಪವರ್ಫುಲ್ ಪರ್ಫಾರ್ಮೆನ್ಸ್ ಜೊತೆಗೆ ನಿಮ್ಮ ಪ್ರತಿಯೊಂದು ರೈಡಿಂಗ್ ಅಗತ್ಯತೆಗಳನ್ನು ಒದಗಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಹೇಳಬಹುದಾಗಿದೆ. ಎಲೆಕ್ಟ್ರಿಕ್ ಬೈಕ್ ಕೂಡ ಸ್ಪೋರ್ಟ್ಸ್ ಬೈಕ್ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಮತ್ತೊಂದು ವಿಶೇಷವಾಗಿದೆ.

advertisement

Leave A Reply

Your email address will not be published.