Karnataka Times
Trending Stories, Viral News, Gossips & Everything in Kannada

Electric Bike: ಹಳೆಯ ಹೀರೋ ಹೋಂಡಾ ಲುಕ್ ನಲ್ಲಿ ಬಂತು ಈ ಎಲೆಕ್ಟ್ರಿಕ್ ಬೈಕ್! 170 km ಮೈಲೇಜ್, ಅತೀ ಕಡಿಮೆ ಬೆಲೆ

advertisement

ಇತ್ತೀಚಿಗಷ್ಟೇ ಭಾರತೀಯರು ಆಟೋಮೊಬೈಲ್ ಮಾರುಕಟ್ಟೆಯಲ್ಲಿ 170 ಕಿಲೋಮೀಟರ್ ಮೈಲೇಜ್ ನೀಡುವ ರೆಡ್ ಎಕ್ಸ್ಪೋಸಿವ್(Red Xplosive) ಎಲೆಕ್ಟ್ರಿಕ್ ವಾಹನವನ್ನು ಲಾಂಚ್ ಮಾಡಲಾಗಿದೆ. ಇತರ ಕಂಪನಿಯ ಎಲೆಕ್ಟ್ರಿಕ್ ಬೈಕು (Electric Bike) ಗಳಿಗೆ ಟಕ್ಕರ್ ಕೊಡುವಂತಹ ಆಧುನಿಕ ವೈಶಿಷ್ಟ್ಯತೆಗಳು, ವಿನ್ಯಾಸ, ಬಣ್ಣ ಹಾಗೂ ಸಾಮಾನ್ಯ ಗ್ರಾಹಕರ ಕೈಗೆಟಕುವ ಬೆಲೆಯಲ್ಲಿ ಲಭ್ಯವಿರುವ ರೆಡ್ ಎಕ್ಸ್ಪ್ಲೋಸಿವ್ ಡಿಸೈನ್ನಲ್ಲಿ ಇತರ ಬೈಕ್ ಗಳಿಗಿಂತ ಕೊಂಚ ವಿಭಿನ್ನವಾಗಿದ್ದು, ಕಡಿಮೆ ಬಜೆಟ್(Low Budget) ನಲ್ಲಿ ಎಲೆಕ್ಟ್ರಿಕ್ ವಾಹನವನ್ನು ಖರೀದಿಸಲು ಯೋಚಿಸುತ್ತಿದ್ದರೆ ಈ ಬೈಕ್ ಅತ್ಯುತ್ತಮ ಆಯ್ಕೆಯಾಗಿರಲಿದೆ.

ರೆಡ್ ಎಕ್ಸ್ಪೋಸಿವ್ ಎಲೆಕ್ಟ್ರಿಕ್ ಬೈಕಿನ-ವೈಶಿಷ್ಟ್ಯತೆಗಳು

ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿ ತಯಾರು ಮಾಡಲಾಗಿರುವ ರೆಡ್ ಎಕ್ಸ್ಪೋಸಿವ್ ಎಲೆಕ್ಟ್ರಿಕ್ ಬೈಕ್ ನಲ್ಲಿ ಡಿಜಿಟಲ್ ಡಿಸ್ಪ್ಲೇ, ಎಲ್ಇಡಿ ಹೆಡ್ ಲೈಟ್, ಯುಎಸ್ಬಿ ಚಾರ್ಜಿಂಗ್ ಪೋರ್ಟ್, ಕ್ರೂಸಿ ಕಂಟ್ರೋಲ್ ಹಾಗೂ ಸ್ಟ್ಯಾಂಡ್ ಸೆನ್ಸಾರ್(Stand Sensor) ನಂತಹ ಫೀಚರ್ಸ್ ಗಳಿದೆ. ವಿನ್ಯಾಸದಲ್ಲಿ ಇತರೆ ಎಲೆಕ್ಟ್ರಿಕ್ ಬೈಕ್ ಗಳಿಗಿಂತ ಬಹಳ ವಿಭಿನ್ನವಾಗಿರುವ ರೆಡ್ ಎಕ್ಸ್ಕ್ಲೂಸಿವ್, ನೋಡಲು ಸ್ವಲ್ಪ ರೆಟ್ರೋ ಲುಕ್ ನೀಡುತ್ತದೆ. ಹೀಗಾಗಿ ಗ್ರಾಹಕರು ಬೈಕಿನತ್ತ ಹೆಚ್ಚು ಆಕರ್ಷಿತರಾಗಿ ಖರೀದಿ ಮಾಡಲು ಮುಂದಾಗಿದ್ದಾರೆ.

Image Source: IndiaMart

advertisement

ಶಕ್ತಿಯುತ ಬ್ಯಾಟರಿ ಹಾಗೂ ಮೈಲೇಜ್ ಸಾಮರ್ಥ್ಯ

ರೆಡ್ಡಿ ಎಕ್ಸ್ಪೋಸಿವ್(Red Xplosive) ಬೈಕ್ ನಲ್ಲಿ ಶಕ್ತಿಯುತ 2000 ವಾಟ್ BLDC ಮೊಟರನ್ನು ಅಳವಡಿಕೆ ಮಾಡಲಾಗಿದ್ದು ಇದು ಅತಿ ಹೆಚ್ಚಿನ ರೇಂಜ್ ನೀಡಲು ಸಹಕರಿಸುತ್ತದೆ. ಹೀಗಾಗಿ ಈ ಎಲೆಕ್ಟ್ರಿಕ್ ಬೈಕನ್ನು ಒಮ್ಮೆ 5 ಗಂಟೆಗಳ ಕಾಲ ೦ ಯಿಂದ 100% ವರೆಗೂ ಸಂಪೂರ್ಣ ಚಾರ್ಜ್(Complete Charge) ಮಾಡಿದರೆ 170 ಕಿಲೋಮೀಟರ್ ಮೈಲೇಜ್ ನೀಡುವ ಕೆಪ್ಯಾಸಿಟಿಯನ್ನು ಹೊಂದಿದೆ. ಅದರಂತೆ ಟಾಪ್ ಸ್ಪೀಡ್(Top speed) ನಲ್ಲಿ ಗಾಡಿಯನ್ನು ಚಲಾವಣೆ ಮಾಡಿದರೆ ಪ್ರತಿ ಗಂಟೆಗೆ 70 ಕಿಲೋ ಮೀಟರ್ ವ್ಯಾಪ್ತಿಯನ್ನು ತಲುಪುವ ಸಾಮರ್ಥ್ಯವಿದೆ.

ಅಗ್ಗದ ಬೆಲೆಯಲ್ಲಿ ರೆಡ್ ಎಕ್ಸ್ಪೋಸಿವ್ ಲಭ್ಯ

ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಬೈಕ್ ಮತ್ತು ಸ್ಕೂಟರ್ಗಳ ಡಿಮ್ಯಾಂಡ್ ಹೆಚ್ಚಾಗಿರುವ ಕಾರಣ ಎಲ್ಲಾ ಕಂಪನಿಗಳು ಏರಿಕೆಯ ಬೆಲೆಯಲ್ಲಿ ವಾಹನಗಳನ್ನು ಮಾರಾಟ ಮಾಡುತ್ತಿದ್ದಾರೆ. ಆದರೆ ಎಕ್ಸ್ಪೋಸಿವ್ ಕಂಪನಿಯು ಇಷ್ಟೆಲ್ಲಾ ಅತ್ಯಾಕಾಶಕ ವೈಶಿಷ್ಟ್ಯತೆಗಳನ್ನು(Amazing Features) ಒಳಗೊಂಡಿರುವ ವಾಹನವನ್ನು ಬಹಳ ಕಡಿಮೆ ಬೆಲೆಗೆ ನೀಡುತ್ತಿದ್ದಾರೆ. ಹಲವು ಬಣ್ಣದ ರೂಪಾಂತರಗಳಲ್ಲಿ ಲಭ್ಯವಿರುವ ರೆಡ್ ಎಕ್ಸ್ಪೋಸಿವ್(Red Xplosive) ಎಲೆಕ್ಟ್ರಿಕ್ ಬೈಕ್ ಇಂಡಿಯಾ ಮಾರ್ಟ್ಸ್ ಇ-ಕಾಮರ್ಸ್ ವೆಬ್ಸೈಟ್ನಲ್ಲಿ(India Marts e-Commerce Website) ₹56,000 ಎಕ್ಸ್ ಶೋರೂಮ್ ಬೆಲೆಗೆ ಲಭ್ಯವಿದೆ.

advertisement

Leave A Reply

Your email address will not be published.