Karnataka Times
Trending Stories, Viral News, Gossips & Everything in Kannada

Electric Bike: 300Km ರೇಂಜ್ ನೀಡಲಿದೆ ಈ ಎಲೆಕ್ಟ್ರಿಕ್ ಬೈಕ್ ! ಕಡಿಮೆ ಬೆಲೆಗೆ BMW ಗಿಂತ ಬೆಂಕಿ ಲುಕ್

advertisement

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಲ್ಲಿ ಅತ್ಯಂತ ಜನಪ್ರಿಯ ಕಂಪನಿ ಆಗಿರುವಂತಹ ಓಲಾ ಹೊಸದಾಗಿ ಕ್ರೂಜರ್ ಎಲೆಕ್ಟ್ರಿಕ್ ಬೈಕ್ ಸೆಗ್ಮೆಂಟ್ ನಲ್ಲಿ ಹೊಸ ಎಲೆಕ್ಟ್ರಿಕ್ ಬೈಕ್ (Electric Bike) ಅನ್ನು ಲಾಂಚ್ ಮಾಡೋದಕ್ಕೆ ಹೊರಟಿದೆ. ಹೌದು ನಾವ್ ಮಾತಾಡ್ತಿರೋದು OLA Cruiser ಎಲೆಕ್ಟ್ರಿಕ್ ಬೈಕಿನ ಬಗ್ಗೆ. ಬಂದ್ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ ಹಾಗೂ ಇದು ಯಾವಾಗ ಲಾಂಚ್ ಆಗುತ್ತದೆ ಎಂದು ಮಾಹಿತಿಯನ್ನು ಕೂಡ ಕೊನೆಯಲ್ಲಿ ನಿಮಗೆ ನೀಡುತ್ತೇವೆ.

OLA Cruiser Electric Bike: 

 

Image Source: BikeWale

 

ಎಲೆಕ್ಟ್ರಿಕ್ ಬೈಕ್ ಎನ್ನುವುದು ಕ್ರೂಜರ್ ಬೈಕ್ ಪ್ರೇಮಿಗಳಿಗೆ ಖಂಡಿತವಾಗಿ ಇಷ್ಟ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಕಂಪನಿ ಭರವಸೆಯನ್ನು ವ್ಯಕ್ತಪಡಿಸಿದೆ. OLA Cruiser ಬೈಕ್ ಉತ್ತಮ ಕಲರ್ ಲಾಂಗ್ ರೇಂಜ್ ಬೆಸ್ಟ್ ಪರ್ಫಾರ್ಮೆನ್ಸ್ ಜೊತೆಗೆ ಖಂಡಿತವಾಗಿ ತನ್ನ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವುದರಲ್ಲಿ ಯಶಸ್ವಿಯಾಗಲಿದೆ.

ಕ್ರೂಸರ್ ಬೈಕ್ ನಲ್ಲಿ ಇರುವಂತಹ ಪ್ರತಿಯೊಂದು ಲಕ್ಷಣಗಳನ್ನು ನೀವು ಈ ಎಲೆಕ್ಟ್ರಿಕ್ ಬೈಕ್ (Electric Bike) ನಲ್ಲಿ ಕಾಣಬಹುದಾಗಿದೆ. ಸಿಂಗಲ್ ಫೀಚರ್ ಜೊತೆಗೆ ಆರಾಮಾಗಿ ಆಸನದ ವ್ಯವಸ್ಥೆ ನಿಮಗೆ ಸಿಗುತ್ತದೆ. ಡಿಸೈನ್ ನೋಡಿದರೆ ಸಂಪೂರ್ಣವಾಗಿ ಫ್ಯೂಚರಿಸ್ಟಿಕ್ ಆಗಿದೆ. ದುಕಾಟಿ ಸಂಸ್ಥೆಯ ಬೈಕ್ ಅನ್ನು ಪೂರ್ತಿಯಾಗಿ ಇರಿಸಿಕೊಂಡು ಈ ಎಲೆಕ್ಟ್ರಿಕ್ ಬೈಕ್ ಅನ್ನು ನಿರ್ಮಾಣ ಮಾಡಲಾಗಿದೆ.

advertisement

ಇದರ ಡಿಸೈನ್ ಹಾಕು ಇನ್ನಿತರ ವಿಚಾರಗಳ ಬಗ್ಗೆ ಅಧಿಕೃತವಾಗಿ ಯಾವುದೇ ರೀತಿಯಲ್ಲಿ ಮಾಹಿತಿ ಹೊರಬಂದಿಲ್ಲ ಆದರೂ ಕೂಡ ಎಲ್ಇಡಿ ಹೆಡ್ ಲೈಟ್ ಗಳನ್ನು ಇದರಲ್ಲಿ ಅಳವಡಿಸಲಾಗಿರುತ್ತದೆ ಎಂಬುದಾಗಿ ತಿಳಿದುಬಂದಿದೆ. ಡಿಜಿಟಲ್ ಇನ್ಸ್ಟ್ರುಮೆಂಟಲ್ ಕ್ಲಸ್ಟರ್ ಹಾಗೂ ಓಡೋಮೀಟರ್ ಜೊತೆಗೆ ಇನ್ನು ಸಾಕಷ್ಟು ಅಡ್ವಾನ್ಸ್ ಫೀಚರ್ ಗಳನ್ನು ಕಾಣಬಹುದಾಗಿದೆ.

 

Image Source: Jansatta

 

ಕನೆಕ್ಟೆಡ್ ಅಸಿಸ್ಟ್ ಜೊತೆಗೆ ನ್ಯಾವಿಗೇಶನ್ ಸ್ಮಾರ್ಟ್ ಫೋನ್ ಆಪ್ಲಿಕೇಶನ್ ಸೇರಿದಂತೆ ಸಾಕಷ್ಟು ಅಡ್ವಾನ್ಸ್ ಟೆಕ್ನಾಲಜಿಯನ್ನು ಇದರಲ್ಲಿ ಕಾಣಬಹುದಾಗಿದೆ. ಡಿಸ್ಕ್ ಬ್ರೇಕ್ ಜೊತೆಗೆ ABS ಅನ್ನು ಕೂಡ ನೀವು ಇದರಲ್ಲಿ ಕಾಣಬಹುದಾಗಿದೆ. ಕ್ರೂಸ್ ಕಂಟ್ರೋಲ್ ಜೊತೆಗೆ ಸಾಕಷ್ಟು ವಿಭಿನ್ನವಾಗಿರುವಂತಹ ರೈಡಿಂಗ್ ಮೋಡ್ ಗಳನ್ನು ಕೂಡ ನೀವು ಈ ಎಲೆಕ್ಟ್ರಿಕ್ ಬೈಕ್ (Electric Bike)  ನಲ್ಲಿ ಕಾಣಬಹುದಾಗಿದೆ.

OLA Cruiser Price:

ಹೈವೇ ಹಾಗೂ ಲಾಂಗ್ ಡ್ರೈವ್ಗೆ ಖಂಡಿತವಾಗಿ ಈ ಕ್ರೂಜರ್ ಬೈಕ್ ಹೇಳಿಮಾಡಿಸಿದಂತಾಗುತ್ತದೆ. ಪವರ್ ಫುಲ್ ಎಲೆಕ್ಟ್ರಿಕ್ ಮೋಟಾರ್ ಅನ್ನು ಇದರಲ್ಲಿ ಅಳವಡಿಸಲಾಗಿದೆ. 250 ಕಿಲೋ ಮೀಟರ್ ಗಳವರೆಗೆ ಕೆಲವೊಮ್ಮೆ 300 ಕಿಲೋಮೀಟರ್ಗಳ ವರೆಗೆ ಕೂಡ ರೇಂಜ್ ನೀಡಬಹುದು ಎಂಬುದಾಗಿ ತಿಳಿದುಬಂದಿದೆ.

ಅಧಿಕೃತವಾಗಿ ಇದು ಯಾವಾಗ ಲಾಂಚ್ ಆಗುತ್ತದೆ ಎಂಬುದಾಗಿ ತಿಳಿದು ಬಂದಿಲ್ಲ ಆದರೆ ಮುಂದಿನ ಒಂದರಿಂದ ಎರಡು ವರ್ಷಗಳ ಒಳಗೆ ನಾವು ಭಾರತದ ಮಾರುಕಟ್ಟೆಯಲ್ಲಿ OLA Cruiser Electric Bike ಅನ್ನು ನಾವು ಕಾಣಬಹುದಾಗಿದ್ದು ಇದರ ಬೆಲೆ 2 ರಿಂದ 3 ಲಕ್ಷ ರೂಪಾಯಿಗಳ ವರೆಗೆ ಇರಬಹುದು ಎಂಬುದಾಗಿ ಅಂದಾಜಿಸಲಾಗಿದೆ.

advertisement

Leave A Reply

Your email address will not be published.