Karnataka Times
Trending Stories, Viral News, Gossips & Everything in Kannada

Property: ಆಸ್ತಿಯ ಮಾಲಕ ಮರಣ ಹೊಂದಿದ್ದರೆ ಆ ಆಸ್ತಿ ವರ್ಗಾವಣೆ ಮಾಡಲು ಹೊಸ ರೂಲ್ಸ್!

advertisement

ಕೃಷಿ ಅಥವಾ ಇತರ ಭೂಮಿಯೇ ಇರಲಿ ಕಾನೂನು ನಿಯಮಗಳಿಗೆ ತಕ್ಕಂತೆ ಸರಿಯಾಗಿ ದಾಖಲೆ ಇರಬೇಕು. ಎಷ್ಟೊ ಸಲ ಭೂಮಿ ಹೊಂದಿರುವ ಮಾಲಕ ಅನಾರೋಗ್ಯ ಅಥವಾ ಇತರ ಕಾರಣದಿಂದ ಮರಣ ಹೊಂದಿದ್ದಾಗ ಅಂತಹ ಭೂಮಿಯನ್ನು ಆತನ ಮಕ್ಕಳು ಮತ್ತು ಕುಟುಂಬಸ್ಥರು ಪಾಲು ಪಡೆಯದೇ ಆಸ್ತಿ ವರ್ಗಾವಣೆ ಆಗದೆ ದೊಡ್ಡ ಮಟ್ಟದಲ್ಲಿ ಸಮಸ್ಯೆ ಆಗಲಿದೆ. ಭೂಮಿ ನಮ್ಮ ಹೆಸರಲ್ಲಿ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಈಗಿನ ಜಾಯಮಾನಕ್ಕೆ ಬಹಳ ಅಗತ್ಯವಿದ್ದು ಮರಣ ಹೊಂದಿದ್ದ ವ್ಯಕ್ತಿಯ ಭೂ ವರ್ಗಾವಣೆ ಹೇಗೆ ಮಾಡುವುದು ಎಂಬ ಬಗ್ಗೆ ನಾವು ಇಂದು ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ.

ಕೃಷಿ ಅಥವಾ ಜಮೀನು ಇತರ ಆಸ್ತಿ (Property) ಗಳು ಕುಟುಂಬದ ಹಿರಿಯರ ಹೆಸರಲ್ಲಿ ಇದ್ದು ಅದನ್ನು ಕಾಲಕ್ಕೆ ತಕ್ಕಂತೆ ಸರಿಯಾದ ಕ್ರಮದ ಮೂಲಕ ವರ್ಗಾವಣೆ ಮಾಡಿರಲಾರರು ಹಾಗಾಗಿ ಅನೇಕರಿಗೆ ಇದು ಸಮಸ್ಯೆ ಆಗಲಿದೆ.  ಸರಿಯಾದ ಕಾಲಕ್ಕೆ ಆಸ್ತಿ ವರ್ಗಾವಣೆ ಮಾಡಿಸದೆ ಹೋದರೆ ಭವಿಷ್ಯದಲ್ಲಿ ಇದು ದೊಡ್ಡ ಮಟ್ಟದಲ್ಲಿ ಸಮಸ್ಯೆ ನೀಡುವ ಸಾಧ್ಯತೆ ಇರಲಿದೆ. ಕುಟುಂಬದ ಸದಸ್ಯರ ಜೊತೆಗೆ ವೈಮನಸ್ಸು ಮೂಡುವ ಸಾಧ್ಯತೆ ಸಹ ಇರುತ್ತದೆ. ಇದಕ್ಕೆ ಕಾನೂನಿನ ಯಾವೆಲ್ಲ ನಿಯಮ ಅನ್ವಯ ಆಗಲಿದೆ ಎಂಬ ಅನೇಕ ಮಾಹಿತಿಯನ್ನು ನೀವು ಕೂಡ ತಿಳಿಯಿರಿ.

ಖಾತೆ ಬದಲಾವಣೆಗೆ ಈ ನಿಯಮ ಇದೆ

ಜಮೀನಿನ ಮಾಲಕ ಮರಣ ಹೊಂದಿದ್ದ ಸಂದರ್ಭಗಳಲ್ಲಿ ಇಂತಿಷ್ಟು ದಿನದ ಒಳಗೆ ಜಮೀನಿನ ದಾಖಲೆ ಖಾತೆ ವರ್ಗಾವಣೆ ಆಗಬೇಕು ಎಂಬ ನಿಯಮ ಇದೆ. ಆರು ತಿಂಗಳ ಒಳಗೆ ಜಮೀನಿನ ಖಾತೆ ವರ್ಗಾವಣೆ ಮಾಡಿಕೊಳ್ಳಬೇಕು. ಜಮೀನಿನ ವರ್ಗಾವಣೆಗೆ ಯಾವುದಾದರೂ ವಿವಾಧ ಇದ್ದರೆ ಆಗ ಪೌತಿ ಖಾತೆಯ ಮೂಲಕ ಹಕ್ಕಿನ ಬದಲಾವಣೆಯನ್ನು ಕಾನೂನಾತ್ಮಕವಾಗಿ ಮಾಡಲಾಗುವುದು.

advertisement

Image Source: Justdial

ಅನುಕೂಲತೆ ಏನು?

ಜಮೀನಿನ ಪಹಣಿ ಪತ್ರವನ್ನು ನಿಮ್ಮ ಹೆಸರಿಗೆ ವರ್ಗಾಯಿಸುವುದರಿಂದ ಬ್ಯಾಂಕ್ ನಲ್ಲಿ ಕೃಷಿ ಸಾಲವನ್ನು ಸುಲಭವಾಗಿ ಪಡೆಯಬಹುದು. ಕೆಲವೊಂದು ಸರಕಾರಿ ಕೃಷಿ ಯೋಜನೆಯ ಫಲಾನುಭವಿಗಳಾಗಲು ಅಗತ್ಯವಾಗಲಿದೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಸಹಾಯಧನ ಕೂಡ ಸಿಗಲಿದೆ. ರಾಜ್ಯ ಮತ್ತು ಕೇಂದ್ರ ಸರಕಾರದ ವಿವಿಧ ಕೃಷಿ ಯೋಜನೆಯ ಫಲಾನುಭವಿಗಳಾಗಬಹುದು. ಹೊಂಡ, ಬೀಜ, ರಸಗೊಬ್ಬರ ಪಡೆಯಲು, ಮೀನು ಸಾಕಾಣಿಕೆ, ಪಶುಸಂಗೋಪನೆ ಇತರೆ ಬಗ್ಗೆ ನಿಮಗೆ ಸಾಕಷ್ಟು ಅನುಕೂಲತೆ ಸಿಗಲಿದೆ.

ಈ ಹಂತಗಳನ್ನು ಅನುಸರಿಸಿ

  • ಜಮೀನಿನ ಮಾಲಕ ಮರಣಹೊಂದಿದರೆ ಮೊದಲು ಪೌತಿ ಖಾತೆಯನ್ನು ಮಾಡಿಸಬೇಕು. ಮರಣ ಹೊಂದಿದ್ದ ವ್ಯಕ್ತಿಯ ಹೆಸರನ್ನು ಪಹಣಿಯಿಂದ ತೆಗೆದು ಕುಟುಂಬದ ಎಲ್ಲ ಸದಸ್ಯರಿಗೆ ಅದರಲ್ಲೂ ನೇರವಾಗಿ ವಾರಸುದಾರರ ಹೆಸರಿಗೆ (ಹೆಂಡತಿ, ತಾಯಿ, ಮಕ್ಕಳಿಗೆ) ಜಂಟಿಯಾಗಿ ಖಾತೆ ಬದಲಾಗುವ ಪ್ರಕ್ರಿಯೆಯೇ ಈ ಪೌತಿ ಖಾತೆ ಆಗಿದೆ. ಪೌತಿ ಖಾತೆ ಬದಲಾಗಿದೆ ಎಂದ ಮಾತ್ರಕ್ಕೆ ಜಮೀನು ಅವರ ಹೆಸರಿಗೆ ಬಂದಿದೆ ಎಂದರ್ಥವಲ್ಲ ಬದಲಾಗಿ ಸೌಲಭ್ಯ ಪಡೆಯುವ ಜೊತೆಗೆ ಕಂದಾಯ ವಸೂಲಿ ಮಾಡಲು ಈ ಪೌತಿ ಖಾತೆ ವರ್ಗಾವಣೆ ಸಹಕಾರಿ ಆಗಲಿದೆ.
  • ಪೌತಿ ಖಾತೆ ಆದ ಬಳಿಕ ಜಮೀನಿಗೆ 11e ಅಡಿಯಲ್ಲಿ ಕಂದಾಯ ಇಲಾಖೆಯಲ್ಲಿ ಅರ್ಜಿ ಹಾಕಬೇಕು.ಜಮೀನಿನ ಪಹಣಿಗೆ ಎಲ್ಲ ದಾಖಲೆ ಸಮೇತ ನಿಮ್ಮ ಹತ್ತಿರದ ನಾಡಕಚೇರಿಗೆ ಭೇಟಿ ನೀಡಿ 11e ಸ್ಕೆಚ್ ಗೆ ಅರ್ಜಿ ಸಲ್ಲಿಸಿ.
  • ಯಾರಿಗೆ ಎಷ್ಟು ಜಮೀನು ಸಿಗುತ್ತದೆ ಎಂದು ಪಹಣಿಯಲ್ಲಿ ನಮೋದಿಸಲಾಗುತ್ತದೆ. ಪೌತಿಯ ಬದಲು ವಿಭಾಗ ಎಂದು ಹಕ್ಕು ಬದಲಾವಣೆ ಆಗಲಿದೆ.
  • ಜಮೀನಿನ 11e ಆದ ಬಳಿಕ ವಿಭಾಗ ಪತ್ರದ ಮೂಲಕ ತಮ್ಮ ತಮ್ಮ ಹೆಸರಿಗೆ ಜಮೀನು ಪತ್ರ ಪಡೆಯಲು ಅರ್ಜಿ ಸಲ್ಲಿಸಬೇಕು.
  • ವಂಶಾವಳಿ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಪ್ರತಿ ಇತರ ದಾಖಲಾತಿ ಸಮೇತ ಉಪನೋಂದಣಿ ಕಚೇರಿಯನ್ನು ಭೇಟಿ ಮಾಡಿ ಬಳಿಕ ಪಾರ್ಟಿಶನ್ ಡೀಡ್ ಮೂಲಕ ನೋಂದಣಿ ಮಾಡಿದರೆ ನೋಂದಣಿ ಪ್ರತಿಕ್ರಿಯೆ ಅಧಿಕೃತವಾಗಲಿದೆ. ವಿಎ ಅವರು ಸ್ಥಳ ಪರಿಶೀಲನೆ ಮಾಡಿ 20 ದಿನದ ಒಳಗೆ ಸಂಬಂಧ ಪಟ್ಟವರ ಹೆಸರಿಗೆ ಪಹಣಿ ಪತ್ರ ವರ್ಗಾವಣೆ ಕೂಡ ಆಗಲಿದೆ.

advertisement

Leave A Reply

Your email address will not be published.