Karnataka Times
Trending Stories, Viral News, Gossips & Everything in Kannada

Ration Card: ರೇಶನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವವರಿಗೆ ಇನ್ನೊಂದು ಗುಡ್ ನ್ಯೂಸ್! ಸಿದ್ದು ಘೋಷಣೆ

advertisement

ರೇಶನ್ ಕಾರ್ಡ್ (Ration Card)ಇಂದು ಅಗತ್ಯ ದಾಖಲೆಯ ಸಾಲಿನಲ್ಲಿ ಇದೆ. ಸರಕಾರಿ ಯೋಜನೆಯ ಫಲಾನುಭವಿಗಳಾಗುವುದರ ಜೊತೆಗೆ ಕೆಲವೊಂದು ಬಡ ವರ್ಗದ ಸೌಲಭ್ಯವನ್ನು ಪಡೆಯಲು ಈ ರೇಶನ್ ಕಾರ್ಡ್ ಬಹಳ ಪ್ರಾಮುಖ್ಯತೆ ಪಡೆಯಲಿದೆ. ಅದರಲ್ಲೂ ಅನ್ನಭಾಗ್ಯ ಯೋಜನೆ ಮೂಲಕ ಅಕ್ಕಿ ವಿತರಣೆ ಜೊತೆಗೆ ಅಕ್ಕಿಯ ಬದಲಿಗೆ ಹಣದ ವಿತರಣೆ ಕೂಡ ನೀಡುತ್ತಿದ್ದು ಅದಕ್ಕೂ ರೇಶನ್ ಕಾರ್ಡ್ ಬೇಕು.

ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಸಿಗುವ ಸೌಲಭ್ಯ ಪಡೆಯುವ ಸಲುವಾಗಿ ಅನೇಕ ಕಡೆಗಳಲ್ಲಿ ರೇಶನ್ ಕಾರ್ಡ್ ನಲ್ಲಿ ಅಗತ್ಯ ತಿದ್ದುಪಡಿ ಮಾಡಲು ಮತ್ತು ಹೊಸ ರೇಶನ್ ಕಾರ್ಡ್ (Ration Card) ನೀಡುವಂತೆ ಕೂಡ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಹೆಚ್ಚಿನವರಿಗೆ ಇನ್ನೂ ಕೂಡ ರೇಶನ್ ಕಾರ್ಡ್ ಸಿಕ್ಕಿಲ್ಲ ಎಂಬುದು ಸಮಸ್ಯೆ ಆದರೆ ಇನ್ನೂ ಕೆಲವರಿಗೆ ರೇಶನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಲು ಸಾಧ್ಯ ಆಗುತ್ತಿಲ್ಲ ಎಂಬುದು ಸಮಸ್ಯೆಯಾಗಿದೆ. ಹಾಗಾಗಿ ನೀವು ಮನೆಯಲ್ಲಿ ಕೂತು ಅರ್ಜಿಯನ್ನು ಸಲ್ಲಿಸಬಹುದಾಗಿದ್ದು ಈ ಬಗ್ಗೆ ಮಾಹಿತಿ ಇಲ್ಲಿದೆ.

ನೀವು ಸಲ್ಲಿಸಬಹುದು?

ಹಿಂದೆಲ್ಲ ರೇಶನ್ ಕಾರ್ಡ್ ಕೊಳ್ಳುವ ಪ್ರಕ್ರಿಯೆ ತುಂಬಾ ಕ್ಲಿಷ್ಟಕರವಾಗಿತ್ತು. ರೇಶನ್ ಕಾರ್ಡ್ ಅನ್ನು ಕೊಳ್ಳುವ ಸಲುವಾಗಿ ಗ್ರಾಮ ಪಂಚಾಯತ್ ಹಾಗೂ ಸಂಬಂಧ ಪಟ್ಟ ಕಚೇರಿಗಳಿಗೆ ತೆರಳಬೇಕಿತ್ತು ಆದರೆ ಈಗ ಸಂಪೂರ್ಣ ವ್ಯವಸ್ಥೆ ಬದಲಾಗಿದೆ. ನೀವು ಸೈಬರ್ ಸೆಂಟರ್ ನಲ್ಲಿ ಕೂಡ ರೇಶನ್ ಕಾರ್ಡ್ ಗಾಗಿ ಅರ್ಜಿ ಹಾಕಬಹುದು ಅದೇ ರೀತಿ ನೀವು ಸ್ವತಃ ಯಾವುದೇ ಕಚೇರಿಗೆ ಹೋಗದೆ ಕೂಡ ರೇಶನ್ ಕಾರ್ಡ್ ಪಡೆಯಬಹುದು. ನಿಮ್ಮ ಮೊಬೈಲ್ ನಲ್ಲೇ ಅರ್ಜಿ ಸಲ್ಲಿಸಲು ಅವಕಾಶ ಇದ್ದು ಇದನ್ನು ಸದುಪಯೋಗ ಪಡಿಸಿಕೊಳ್ಳಿ.

advertisement

Image Source: Mint

ಈ ದಾಖಲೆ ಅಗತ್ಯ

ರೇಶನ್ ಕಾರ್ಡ್ (Ration Card) ಪಡೆಯಲು ಕೆಲವೊಂದು ಅಗತ್ಯ ದಾಖಲೆ ಹೊಂದಿರಬೇಕು. ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡ್ ಅನ್ನು ಹೊಂದಿರಬೇಕು. ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಮೊಬೈಲ್ ಸಂಖ್ಯೆ ಅಗತ್ಯ, ಜಾತಿ ಮತ್ತು ಆದಾಯ ಸರ್ಟಿಫಿಕೇಟ್ ಬೇಕು. ವಿಳಾಸದ ಕೆಲವು ಮಾಹಿತಿಯ ದಾಖಲಾತಿ ಹೊಂದಿರಬೇಕು. ಹೊಸ ರೇಶನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಮಾತ್ರವಲ್ಲದೆ ಇದ್ದ ರೇಶನ್ ಕಾರ್ಡ್ ನಲ್ಲಿ ಹೊಸ ಸದಸ್ಯರ ಸೇರ್ಪಡೆ  ಇತರ ಪ್ರಕ್ರಿಯೆಯನ್ನು ಸಹ ಮಾಡಬಹುದು.

ಹೇಗೆ ಅರ್ಜಿ ಸಲ್ಲಿಸುವುದು?

ಮೊಬೈಲ್ ಮೂಲಕ ನೀವು ಅರ್ಜಿ ಸಲ್ಲಿಸಲು ಮೊದಲು ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಭೇಟಿ ನೀಡಿ. https://ahara.kar.nic.in ಗೆ ಭೇಟಿ ನೀಡಿ ಬಳಿಕ ಅದರಲ್ಲಿ e ration card ಎಂಬ ಆಯ್ಕೆ ಇರಲಿದೆ. ಅದರ ಒಳಗೆ ನೀವು ಕೆಲ ಅಗತ್ಯ ದಾಖಲೆಯ ವಿವರಣೆ, ಆಧಾರ್ ಸಂಖ್ಯೆ ಎಲ್ಲ ನೀಡಬೇಕು ಎಲ್ಲ ಪ್ರಕ್ರಿಯೆ ಮುಗಿದು ಸಬ್ಮಿಟ್ ನೀಡಿದರೆ ಅದು ಅರ್ಜಿ ಸಲ್ಲಿಕೆ ಆಗಿರಲಿದೆ‌. ಅದರ ಜೊತೆಗೆ ನೀವು ತಂಬ್ ಅನ್ನು ಕೂಡ ನೀಡಬೇಕಾಗಲಿದೆ. ಸ್ಕ್ಯಾನ್ ಮಾಡಿದ್ದನ್ನು ಎಲ್ಲ ದಾಖಲಾತಿ ಅಟ್ಯಾಚ್ ನೀಡಿ ಸಲ್ಲಿಸಿದರೆ ನಿಮಗೆ ಶೀಘ್ರವೇ ನಿಮ್ಮ ಆದಾಯಕ್ಕೆ ಅನುಗುಣವಾಗಿ ರೇಶನ್ ಕಾರ್ಡ್ ಸಿಗಲಿದೆ.

advertisement

Leave A Reply

Your email address will not be published.