Karnataka Times
Trending Stories, Viral News, Gossips & Everything in Kannada

Pahani: ವರ್ಷಗಳಿಂದ ಪಹಣಿಯಲ್ಲಿ ತಾತ ಮುತ್ತಾತನ ಹೆಸರೇ ಇದ್ದವರಿಗೆ ಹೊಸ ಅಪ್ಡೇಟ್

advertisement

ಇಂದು ಕೃಷಿ ಭೂಮಿ (Agricultural Land) ತುಂಬಾ ಕಡಿಮೆ ಆಗುತ್ತಿದೆ. ಇದ್ದಂತಹ ಕೃಷಿ ಭೂಮಿಯೆಲ್ಲ ಕಾರ್ಖಾನೆ, ಕೈಗಾರಿಕೋದ್ಯಮ ಮನೆ ನಿರ್ಮಾಣ ವೆಲ್ಲ ಆಗುತ್ತಿದೆ ಈ ನಡುವೆ ಇದ್ದ ಅಲ್ಪ ಸ್ವಲ್ಪ ಜಾಗ ಕೂಡ ಕೃಷಿ ಮಾಡುವ ಉದ್ದೇಶಕ್ಕಾಗಿ ಮೀಸಲು ಇಟ್ಟಿದ್ದರೆ ಸರಕಾರದ ನಿಯಮದ ಪ್ರಕಾರ ಆ ಒಂದು ಜಾಗದಲ್ಲಿ ಪಹಣಿ (Pahani) ಪತ್ರ ಸರಿಯಾಗಿ ಇಲ್ಲದೆ ತಾತ ಮುತ್ತಾತನ ಹೆಸರಲ್ಲಿ ಇರುವ ಕಾರಣ ನಿಮಗೆ ಅನೇಕ ರೀತಿಯ ತೊಂದರೆ ಕೂಡ ಆಗಲಿದೆ. ಪಹಣಿ ತಿದ್ದುಪಡಿ ಮಾಡಬೇಕು ಎಂದು ಬಯಸುವವರು ಕೆಲ ಅಗತ್ಯ ಮಾಹಿತಿ ಬಗ್ಗೆ ತಿಳಿಯಲೇ ಬೇಕಿದ್ದು ಈ ಬಗ್ಗೆ ಪೂರ್ತಿ ವಿಚಾರ ತಪ್ಪದೇ ಓದಿ.

ಪಹಣಿ ಪತ್ರ (Pahani Later) ದಲ್ಲಿ ನಮ್ಮ ಹೆಸರು ಇಲ್ಲದಿದ್ದರೆ ಅಥವಾ ತಾತ ಮುತ್ತಾತನ ಕಾಲದ ಪಿತ್ರಾರ್ಜಿತ ಆಸ್ತಿ ಆಗಿದ್ದು ಸರಿಯಾಗಿ ಡಾಕ್ಯುಮೆಂಟ್ ಇಲ್ಲದಿದ್ದರೆ ಕೆಲ ಸಂದರ್ಭದಲ್ಲಿ ಇಂತಹ ಜಾಗ ಸರಕಾರದ ಗೋಮಾಳ ಆಗಲೂ ಬಹುದು ಹಾಗೆಯೇ ಸರಕಾರದ ಅಧೀನದ ಆಸ್ತಿ ಅಕ್ರಮವಾಗಿ ನೀವು ಪಡೆದು ಬೇಸಾಯ ಮಾಡಿದಂತೆ ಆಗಲಿದೆ ಹಾಗಾಗಿ ನಿಮ್ಮನ್ನು ಒತ್ತು ವರಿ ಮಾಡುತ್ತಾರೆ ಎಂಬ ಭಯ ನಿಮಗೂ ಇರಬಹುದು.

ಈಗ ರಾಜ್ಯ ಸರಕಾರವು ಇಂತಹ ಸರಿಯಾದ ಡಾಕ್ಯುಮೆಂಟ್ ಇಲ್ಲದ ಹಾಗೂ ನಿಜವಾಗಿಯೂ ಸರಕಾರದ ಅಧೀನ ಜಾಗ ಇದ್ದರೂ ಅದರಲ್ಲಿ ವಾಸ್ತವ್ಯ ಹೊಂದಿದ್ದರೆ ಅಥವಾ ಕೃಷಿ ಮಾಡಿದ್ದರೆ ಅಂತವರಿಗೆ ಶುಭ ಸುದ್ದಿ ಒಂದನ್ನು ನೀಡಲಾಗುತ್ತಿದೆ.

ಕಂದಾಯ ಸಚಿವರಿಂದ ಘೋಷಣೆ:

 

Image Source: The New Indian Express

 

advertisement

ರಾಜ್ಯದ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ (Krishna Byre Gowda) ಅವರು ರಾಜ್ಯದ ಜನತೆಗೆ ಶುಭ ಸುದ್ದಿ ಒಂದನ್ನು ನೀಡಿದ್ದಾರೆ. ಅದರ ಪ್ರಕಾರ ಸರಕಾರದ ಹೆಸರಲ್ಲಿ ಇರುವ ಎಲ್ಲ ಭೂಮಿ, ಗೋಮಾಳ, ಇತರ ಸರಕಾರ ಜಾಗ ಹೊಂದಿದ್ದರೆ ಅದನ್ನು ಸಕ್ರಮ ಮಾಡಿಕೊಳ್ಳಲು ರಾಜ್ಯ ಸರಕಾರದಿಂದ ಸುವರ್ಣ ಅವಕಾಶ ನೀಡಲಾಗುತ್ತಿದ್ದು ಅದರ ಪ್ರಕಾರ ಅಕ್ರಮ ಸಕ್ರಮ ಯೋಜನೆ ಮೂಲಕ ಸರಕಾರ ಸ್ವಾದೀನದಲ್ಲಿ ಇರುವ ಭೂಮಿಯನ್ನು ರೈತರು ತಮ್ಮ ಹೆಸರಿಗೆ ವರ್ಗಾಯಿಸ ಬಹುದು. ಬಗರ್ ಹುಕ್ಕುಂ ಹಾಗೂ ಅಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ರೈತರ ಹೆಸರಿಗೆ ಪಹಣಿ (Pahani) ಪತ್ರ ನೀಡಲಾಗುವುದು ಎಂಬ ಮಾಹಿತಿಯೊಂದು ವೈರಲ್ ಆಗುತ್ತಿದೆ.

ಎಲ್ಲಿ ತಿಳಿಸಿದರು?

ಅಕ್ರಮ ಬಗರ್ ಹುಕ್ಕುಂ (Bagar Hukum) ಸಾಗುವಳಿಯನ್ನು ಅಧಿಕೃತ ಎಂಬಂತೆ ಕೃಷಿ ಮಾಡಲು ಅವಕಾಶ ಇರುವ ಕಾರಣ ಶೀಘ್ರವೇ ಭೂಮಿ ರೈತರ ಹೆಸರಿಗೆ ವರ್ಗಾಯಿಸಲು ಕಂದಾಯ ಇಲಾಖೆಯ ಸಚಿವರಾದ ಕೃಷ್ಣ ಬೈರೇಗೌಡ (Krishna Byre Gowda) ಅವರು ತಿಳಿಸಿದ್ದಾರೆ.

ಅವರು ಇತ್ತೀಚೆಗೆ ವಿಕಾಸ ಸೌಧದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳ ಜೊತೆಗೆ ಬಗರ್ ಹುಕ್ಕುಂ ತಂತ್ರಾಂಶದ ಬಗ್ಗೆ ಪ್ರಾತ್ಯಕ್ಷಿಕೆಯನ್ನು ತೋರಿಸಲಾಗಿತ್ತು ಆಗ ಅವರು ರೈತರ ಹೆಸರಿಗೆ ಪಹಣಿ ಪತ್ರ ವಿತರಿಸುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಈ ವೇಳೆ ಮಾಹಿತಿ ಪಡೆದ ಸಚಿವರು ಅನಧಿಕೃತ ಬಗರ್ ಹುಕ್ಕುಂ ಭೂಮಿಯನ್ನು ತಂತ್ರಾಂಶದ ಸಹಾಯದಿಂದ ಅಧಿಕೃತ ಮಾಡಿಸಲು ಹಾಗೂ ಪರಿಶೀಲನೆ ಮಾಡಲು ಬಗರ್ ಹುಕ್ಕುಂ ತಂತ್ರಾಂಶ ಸಕ್ರಿಯವಾಗಿ ಬಳಸಬೇಕು. ಅದೇ ರೀತಿ ಭೂಮಿ ಈಗಾಗಲೇ ಇದ್ದು ಕೂಡ ಸರಕಾರದ ಭೂಮಿಯನ್ನು ಅನಧಿಕೃತ ಒತ್ತುವರಿ ಪಡೆದರೆ ಶೀಘ್ರ ತೆರವು ಗೊಳಿಸಲಾಗುವುದು ಎಂದು ಸಚಿವರು ಈಗಾಗಲೇ ತಿಳಿಸಿದ್ದಾರೆ.

advertisement

Leave A Reply

Your email address will not be published.