Karnataka Times
Trending Stories, Viral News, Gossips & Everything in Kannada

Pahani: ಪಹಣಿಯಲ್ಲಿ ತಂದೆ ತಾಯಿ ಮುತ್ತಾತನ ಹೆಸರಿದ್ದ ರೈತರಿಗೆ ಕಂದಾಯ ಸಚಿವರಿಂದ ಶುಭ ಸುದ್ದಿ

advertisement

ಮನೆ ಕಟ್ಟಬೇಕು ಆಸ್ತಿ ಮಾಡಬೇಕು ಎಂಬ ಆಸೆ ಅನೇಕರಿಗೆ ಇದ್ದರೂ ಕೂಡ ಅದಕ್ಕೆ ಸಾಕಷ್ಟು ಹಣಕಾಸಿನ ಅಗತ್ಯವಿದ್ದು ಅಷ್ಟು ಪ್ರಮಾಣದ ಹಣ ಇಲ್ಲದಿರುವುದೇ ಒಂದು ದೊಡ್ಡ ಸಮಸ್ಯೆಯಾಗಿದೆ. ಸ್ವಂತ ಆಸ್ತಿ ಪಾಸ್ತಿ ಇಲ್ಲದೇ ಇರುವವರು ತಮ್ಮ ತಾತ ಮುತ್ತಾತನ ವಂಶಾವಳಿ ಆಸ್ತಿ ಪಡೆಯಲು ಮುಂದಾಗುತ್ತಾರೆ. ಅದರಲ್ಲಿ ಪಹಣಿ (Pahani) ಪತ್ರ ಎಲ್ಲವೂ ಕೂಡ ತೊಂದರೆಯಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಇದ್ದವರು ಇನ್ನು ಮುಂದೆ ಯೋಚನೆ ಮಾಡಬೇಕಾಗಿಲ್ಲ. ವಂಶಾವಳಿ ಆಸ್ತಿ ಹೊಂದಿದ್ದವರಿಗೆ ಕಂದಾಯ ಸಚಿವರು ಶುಭ ಸುದ್ದಿ ನೀಡಿದ್ದಾರೆ.

ರಾಜ್ಯದ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ (Minister Krishna Byre Gowda) ಅವರು ರಾಜ್ಯದ ಜನತೆಗೆಲ್ಲ ಒಂದು ಶುಭ ಸುದ್ದಿಯನ್ನು ನೀಡಿದ್ದಾರೆ. ಸಾಗುವಳಿ ಮಾಡಲು ಮನಸ್ಸಿದ್ದರೂ ಸಾಕಷ್ಟು ಪ್ರಮಾಣದ ಭೂಮಿ ಇಲ್ಲದೆ ಇರುವ ಹಿನ್ನೆಲೆಯಲ್ಲಿ ಸಾಗುವಳಿ ಮಾಡಲು ಭೂಮಿ ಒದಗಿಸುವಂತೆ ಅನೇಕ ರೈತರು ಬೇಡಿಕೆಯನ್ನು ಮುಂದಿಟ್ಟಿದ್ದು ಭೂಮಿ ಬಗ್ಗೆ ಇರುವ ಅನೇಕ ಸಮಸ್ಯೆ ಬಗೆಹರಿಸಲು ಸರಕಾರ ಮುಂದಾಗಿದೆ. ರಾಜ್ಯದ ಕಂದಾಯ ಸಚಿವರು ಈ ನೆಲೆಯಲ್ಲಿ ಹೊಸದೊಂದು ನಿರ್ಧಾರಕ್ಕೆ ಬಂದಿದ್ದು ಅನೇಕರಿಗೆ ಈ ಕ್ರಮ ಸಹಕಾರಿ ಆಗಲಿದೆ.

ಸಮಸ್ಯೆ ಬಗೆಹರಿಸಲು ತೀರ್ಮಾನ:

 

Image Source: Deccan Herald

 

advertisement

ಪೂರ್ವಜರ (Ancestors) ಆಸ್ತಿಯನ್ನು ಈಗಿನ ಜಾಯಮಾನದವರ ಹೆಸರಿಗೆ ಕನ್ವರ್ಶನ್ ಮಾಡುವುದು ಸುಲಭದ ಮಾತಲ್ಲ. ಹಳೆ ಆಸ್ತಿಗೆ ಸರಿಯಾದ ದಾಖಲೆ ಪತ್ರ ಇಲ್ಲದಿದ್ದಾಗ ಪಹಣಿ (Pahani) ವರ್ಗಾಯಿಸುವುದು ತುಂಬಾ ಕಷ್ಟ. ಸಾಗುವಳಿ ನಡೆಸುವ ಸಲುವಾಗಿ ಕಾಯುತ್ತಿರುವ ರೈತರಿಗೆ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಅವರು ಆಶ್ವಾಸನೆ ನೀಡಿದ್ದಾರೆ‌. ಕಂದಾಯ ದಾಲತ್ ಕ್ರಮ ಜಾರಿಗೆ ತರುವ ಮೂಲಕ ಸಾಗುವಳಿ ಭೂಮಿಯ ಸಮಸ್ಯೆಯನ್ನು ಸ್ಥಳದಲ್ಲಿ ಬಗೆಹರಿಸಲು ತೀರ್ಮಾನಿಸಲಾಗಿದೆ ಎಂದು ಕಂದಾಯ ಸಚಿವರು ತಿಳಿಸಿದ್ದಾರೆ.

ಮರುಪರಿಶೀಲನೆ:

ಸಾಗುವಳಿ ಮಾಡುವ ಉದ್ದೇಶಕ್ಕೆ ಭೂಮಿ ಒದಗಿಸುವಂತೆ ಕೋರಿ ಮತ್ತು ತಮ್ಮ ಪೂರ್ವಜರ ಆಸ್ತಿಯನ್ನು ತಮ್ಮ ಹೆಸರಿಗೆ ವರ್ಗಾಯಿಸುವಂತೆ ಅನೇಕ ಅರ್ಜಿ ಕಂದಾಯ ಇಲಾಖೆಗೆ ಬಂದಿದೆ ಇವುಗಳಲ್ಲಿ ಬಹುತೇಕ ತಿರಸ್ಕೃತವಾಗಿದೆ. ಸಾಗುವಳಿ ಭೂಮಿ ಮಂಜೂರಾತಿ ಅಡಿಯಲ್ಲಿ ತಿರಸ್ಕೃತ ಆದ ಅರ್ಜಿಯನ್ನು ಮರು ಪರಿಶೀಲನೆ ಮಾಡಲಾಗುವುದು ಎಂದು ಸಚಿವ ಕೃಷ್ಣ ಬೈರೇ ಗೌಡ ಅವರು ಸದನದಲ್ಲಿ ತಿಳಿಸಿದ್ದಾರೆ.

ಅರ್ಹರೆಂಬ ಫಲಾನುಭವಿಗಳಿಗೆ ಭೂಮಿಯನ್ನು ಮಂಜೂರು ಮಾಡಿದ್ದಾರೆ. ಅನರ್ಹರೆಂದು ಅನೇಕ ಅರ್ಹತೆ ಇರುವವರು ತಪ್ಪಾಗಿ ಅಲ್ಲಿ ಅನರ್ಹರ ಸಾಲಿಗೆ ಸೇರಿ ಹೋಗಿದೆ. ಹಾಗಾಗಿ ಅರ್ಜಿ ಪುನರ್ ಪರಿಶೀಲಿಸುವ ಮೂಲಕ ಅರ್ಹರಿಗೆ ಭೂಮಿ ಮಂಜೂರು ನೀಡಲಾಗುತ್ತದೆ. ಈ ಒಂದು ವಿಚಾರವು ರೈತರಿಗೆ ಬಹಳ ಖುಷಿ ನೀಡಿದ್ದು ತಮ್ಮ ತಾತ ಮುತ್ತಾತನ ಕಾಲದ ಭೂಮಿಯನ್ನು ತಮ್ಮ ಹೆಸರಿಗೆ ವರ್ಗಾಯಿಸಲು ಬಹಳ ಸಹಕಾರಿ ಆಗಲಿದೆ.

advertisement

Leave A Reply

Your email address will not be published.