Karnataka Times
Trending Stories, Viral News, Gossips & Everything in Kannada

Agricultural Land: ಕೃಷಿ ಭೂಮಿಯಲ್ಲಿ ಮನೆ, ಫಾರ್ಮ್ ಹೌಸ್ ಕಟ್ಟಿಸುವ ಎಲ್ಲರಿಗೂ ಹೊಸ ಸೂಚನೆ

advertisement

ಕೃಷಿ ಭೂಮಿಗೆ ಸಂಬಂಧ ಪಟ್ಟಂತೆ ಸರಕಾರ ಆಗಾಗ ಹೊಸ ಹೊಸ ನೀತಿ ನಿಯಮವನ್ನು ಜಾರಿಗೆ ತರುತ್ತಲೇ ಇರುತ್ತದೆ, ಇಂದು ಸರಕಾರ ಕೃಷಿ ಭೂಮಿಯ ಅಭಿವೃದ್ಧಿ ಮಾಡುವ ಮೂಲಕ ಅಧಿಕ ಬೆಳೆಯ ಲಾಭವನ್ನು ರೈತರಿಗೆ ನೀಡುವಂತೆ ಮಾಡುವ ಮಹತ್ವದ ಯೋಚನೆ ಹೊಂದಿರುವುದನ್ನು ನಾವು ಕಾಣಬಹುದು.ಅದೇ ರೀತಿ ಕೃಷಿ ಮಾಡಿಕೊಂಡು ಇರುವ ರೈತರು ತಮ್ಮ ಜಮೀನಿನಲ್ಲಿ ಮನೆ, ಕಟ್ಟಡ ಅಥವಾ ಫಾರ್ಮ್ ಹೌಸ್ (Farm House) ಕೊಟ್ಟಿಗೆ ನಿರ್ಮಾಣ ಮಾಡಬೇಕು ಎಂದು ಕೊಂಡಿದ್ದರೆ ರಾಜ್ಯ ಸರಕಾರದ ಒಂದು ಮಹತ್ವದ ಆದೇಶ ಪಾಲನೆ ಮಾಡಬೇಕಾಗಲಿದೆ.

ಇಂದು ಮನೆ ಅಥವಾ ಫಾರ್ಮ್ ಹೌಸ್ ಅನ್ನು ತಮ ಜಮೀನಿನಲ್ಲಿ ಮಾಡಿಸಬೇಕು ಎಂದು ಅನೇಕ ಜನರು ಅಂದುಕೊಳ್ಳುತ್ತಾರೆ.ಕೃಷಿ ಇದ್ದಲ್ಲಿಯೇ ಸಣ್ಣ ಮನೆ ನಿರ್ಮಾಣ ಮಾಡಿದರೆ ಅದನ್ನು ಕಾಯ್ದುಕೊಳ್ಳಲು ಬಹಳ ಅನುಕೂಲ ಆಗುತ್ತದೆ ಎಂಬುದು ಅನೇಕ ಜನರ ಚಿಂತನೆ ಆಗಿದೆ. ಹಾಗಿದ್ದರೂ ಜಮೀನು ಅಥವಾ ಕೃಷಿ ಭೂಮಿ (Agricultural Land) ಯಲ್ಲಿ ಮನೆ ಕಟ್ಟುವ ಮುನ್ನ ಸರಕಾರದ ಕೆಲವೊಂದು ನೀತಿ ಕ್ರಮಗಳು ಅನ್ವಯವಾಗಲಿದೆ ಈ ಬಗ್ಗೆ ಮಾಹಿತಿ ಹೊಂದಿರುವುದು ಬಹಳ‌ ಮುಖ್ಯ ಎನ್ನಬಹುದು.

ಕಟ್ಟು ನಿಟ್ಟಿನ ನಿಯಮ:

 

Image Source: YT-TRUSTED HOMES

 

ಇತ್ತೀಚಿನ ವರ್ಷದಲ್ಲಿ ಕೃಷಿ ಭೂಮಿ (Agricultural Land) ಯನ್ನು ಕಟ್ಟಡ ನಿರ್ಮಾಣ ಅಥವಾ ಇತರೆ ಕಾರ್ಯ ಚಟುವಟಿಕೆಗೆ ಬಳಸುವ ಪ್ರಮಾಣ ಅಧಿಕವಾಗುತ್ತಿದ್ದು ಅದನ್ನು ತಡೆಗಟ್ಟುವ ಸಲುವಾಗಿ ಸರಕಾರ ಕೆಲ ನೀತಿ ನಿಯಮ ಜಾರಿಗೆ ತರಲು ಮುಂದಾಗಿದೆ. ಭೂ ಪರಿವರ್ತನೆ ಹಾಗೂ ಕಬಳಿಕೆ ಸಂಖ್ಯೆ ಹೆಚ್ಚಾಗುತ್ತಿದೆ ಹಾಗಾಗಿ ಇತ್ತೀಚೆಗಷ್ಟೇ ಹೈಕೋರ್ಟ್ (High Court) ಮಹತ್ವದ ಆದೇಶ ಒಂದನ್ನು ನೀಡಿದೆ.

advertisement

ಯಾವುದು ಆ ಕೇಸ್:

ಗೃಹ ನಿರ್ಮಾಣ ಸಹಕಾರಿ ಸಂಘ ಮಂಡ್ಯ ಅಭಿವೃದ್ಧಿ ಯೋಜನಾಧಿಕಾರದ ವಿರುದ್ಧ ಹೈಕೋರ್ಟ್ (High Court) ಗೆ ಅರ್ಜಿ ಸಲ್ಲಿಸಲಾಗಿದೆ. ಅದರಲ್ಲಿ ಲೇ ಔಟ್ ಮಾಡಲು ಅವಕಾಶ ಸಿಗದೆ ಇರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮಂಡ್ಯ ಗೃಹ ನಿರ್ಮಾಣ ಸಹಕಾರಿ ಸಂಘವು ಮಂಡ್ಯ ಅಭಿವೃದ್ಧಿ ಯೋಜನಾಧಿಕಾರದ ವಿರುದ್ಧ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದೆ ಹಾಗಾಗಿ ಈ ಬಗ್ಗೆ ತೀರ್ಪೊಂದನ್ನು ನೀಡಲಾಗಿದೆ ಎಂದು ಹೇಳಬಹುದು.

ತೀರ್ಪಿನಲ್ಲಿ ಏನಿದೆ?

ಈ ಒಂದು ತೀರ್ಪಿನಲ್ಲಿ ಕೃಷಿಯೇತರ ಭೂಮಿಯಾಗಿ ಕೃಷಿ ಭೂಮಿ ಪರಿವರ್ತಿಸುವುದಾದರೆ ಭೂ ಕಂದಾಯ ಕಾಯ್ದೆ 1965 ಸೆಕ್ಷನ್ 95ರ ಅಡಿಯಲ್ಲಿ ಜಿಲ್ಲಾಧಿಕಾರಿಗಳ ಅನುಮತಿ ಪಡೆಯಬೇಕು ಅದರೊಂದಿಗೆ ಸೆಕ್ಷನ್ 14 A ಅಡಿಯಲ್ಲಿ KTCP ನಿಯಮ ಕೂಡ ಪಾಲಿಸಬೇಕು ಎಂದು ತಿಳಿಸಲಾಗಿದೆ. ಸಾಮಾನ್ಯವಾಗಿ ಕೃಷಿ ಭೂಮಿಯನ್ನು ಮನೆ ನಿರ್ಮಾಣ ಅಥವಾ ಇತರ ಕಾರಣಕ್ಕಾಗಿ ಒಪ್ಪಿಗೆ ನೀಡಲಾಗುವುದಿಲ್ಲ ಒಂದು ವೇಳೆ ಮಾಡಲೇ ಬೇಕಾದ ಅನಿವಾರ್ಯ ಕಂಡು ಬಂದರೆ ಕೃಷಿಯೇತರ ಭೂಮಿಯಾಗಿ ಪರಿವರ್ತನೆ ಮಾಡಿ ಬಳಕೆ ಮಾಡಬಹುದು.

ಇದಕ್ಕೆ ಜಿಲ್ಲಾಧಿಕಾರಿ ಅವರ ಅನುಮತಿ ಪಡೆದು ಆ ಬಳಿಕ ಸೆಕ್ಷನ್ 14 A ಅಡಿಯಲ್ಲಿ ಭೂ ಕಬಳಿಕೆ ಬಗ್ಗೆ ಪ್ರಾಧಿಕಾರದ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು. ಈ ಹಿಂದೆ ಕೃಷಿ ಭೂಮಿಯಲ್ಲಿ ಮನೆ ಇತರ ನಿರ್ಮಾಣ ಮಾಡಿದ್ದರೆ ಅದನ್ನು ಶೀಘ್ರ ಪರಿವರ್ತನೆ ಮಾಡಿಸಿಕೊಳ್ಳಬೇಕು ಎಂದು ಹೈಕೋರ್ಟ್ ತೀರ್ಮಾನ ಕೂಡ ನೀಡಿದೆ.

advertisement

Leave A Reply

Your email address will not be published.