Karnataka Times
Trending Stories, Viral News, Gossips & Everything in Kannada

Indian Railways: ರೈಲಿನಲ್ಲಿ ಪ್ರಯಾಣಿಸುವವರಿಗೆ ಗುಡ್ ನ್ಯೂಸ್! ಇನ್ಮೇಲೆ ಎಲ್ಲರಿಗೂ ಉಚಿತವಾಗಿ ಸಿಗಲಿವೆ ಈ ಸೇವೆ

advertisement

ಇಂದು ಪ್ರಯಾಣ ಅಂತ ಬಂದಾಗ ಹೆಚ್ಚಿನ‌ ಜನರು ಆಯ್ದು ಕೊಳ್ಳುವುದೇ ರೈಲು ಪ್ರಯಾಣ, ಬಸ್ ಪ್ರಯಾಣಕ್ಕಿಂತ ರೈಲು ಪ್ರಯಾಣ ಬಹಳ ಸುಲಭ ಮತ್ತು ತಲುಪುವ ಸ್ಥಳಕ್ಕೆ ಬೇಗನೆ ಸಹ ತಲುಪಬಹುದಾಗಿದೆ. ಅದರ ಜೊತೆ ರೈಲು‌ಪ್ರಯಾಣವು ಸುಖಕರ ವಾಗಿದ್ದು ಪರಿಸರದ ಆನಂದವನ್ನು ಸವಿಯುತ್ತಾ ರೈಲು ಪ್ರಯಾಣ ಮಾಡಬಹುದು.‌ ಇಂದು ರೈಲ್ವೇ ಇಲಾಖೆಯು (Indian Railways) ಪ್ರಯಾಣಿ ಕರಿಗಾಗಿ ಹಲವು ರೀತಿಯ ಸೌಲಭ್ಯ ವನ್ನು ಘೋಷಣೆ ಮಾಡಿದ್ದು ಈ ವಿಚಾರಗಳು ಕೂಡ ಪ್ರಯಾಣಿಕರಿಗೆ ಖುಷಿ ನೀಡಿದ್ದಂತಾಗಿದೆ.

ಈ ಸೌಲಭ್ಯ ಪಡೆಯಬಹುದು

ನಿಮ್ಮ ರೈಲು ಪ್ರಯಾಣದ ಟಿಕೆಟ್ ನಿಮಗೆ ಪ್ರಯಾಣಕ್ಕೆ ಅಷ್ಟೇ ಅಲ್ಲದೆ, ನೀವು ಇಂದು ಕೆಲವು ಉಚಿತ ವಸ್ತುಗಳನ್ನು ಸಹ ಪಡೆಯಬಹುದು

  • ಕೆಲವು ರೈಲುಗಳು ಪ್ರಯಾಣಿಕರಿಗೆ ಕೆಲವೊಂದು ‌ಸೌಲಭ್ಯ ಗಳನ್ನು‌ನೀಡಲಿದ್ದು ಪ್ರಯಾಣದ ಸಂದರ್ಭದಲ್ಲಿ ಸುಖಕರ ಎನಿಸಲು ಹೊದಿಕೆಗಳು, ದಿಂಬುಗಳು, ಹಾಳೆಗಳು ಮತ್ತು ಟವೆಲ್‌ಗಳಂತಹ ವಸ್ತುಗಳನ್ನು ಉಚಿತವಾಗಿ ಕೂಡ ನೀಡಲಿದೆ.
  • ಅಷ್ಟೆ ಅಲ್ಲದೆ ರೈಲ್ವೆ ಇಲಾಖೆಯು ತುರ್ತು ಸಂದರ್ಭದಲ್ಲಿ ಉಚಿತ ವೈದ್ಯಕೀಯ ಸಹಾಯವನ್ನೂ ಕೂಡ‌ ಒದಗಿಸಲಿದೆ.
  • ನಿಮ್ಮ ಪ್ರಯಾಣದ ರೈಲು 2 ಗಂಟೆಗಳಿಗಿಂತ ಹೆಚ್ಚು ತಡವಾಗಿದ್ದರೆ, ರೈಲು ಕಂಪನಿಯು ನಿಮಗೆ ಉಚಿತ ಆಹಾರವನ್ನು ನೀಡುತ್ತದೆ
  • ಅದೇ ರೀತಿ ಕೆಲವೊಂದು ರೈಲುಗಳು ಮಕ್ಕಳ ಆಟದ ಸಾಮಗ್ರಿಗಳನ್ನು, ಪ್ರಯಾಣದ ಸಂದರ್ಭದಲ್ಲಿ ಓದಿಗಾಗಿ ಪುಸ್ತಕ, ಮತ್ತು ಟ್ಯಾಕ್ಸಿ ಬುಕಿಂಗ್ ಸೇವೆಗಳಂತಹ ಹೆಚ್ಚುವರಿ ಉಚಿತ ಸೇವೆಗಳನ್ನು ಕೂಡ ನೀಡಲಿದೆ

ಆಹಾರ ಗುಣಮಟ್ಟ:

 

advertisement

Image Source: Hindustan Times

 

ಅದೇ ರೀತಿ ಆಹಾರ ವಿತರಿಸುವ ಕ್ರಮದ ಬಗ್ಗೆಯು ಈ ಸೂಚನೆಯನ್ನು ರೈಲು ಇಲಾಖೆ ‌ನೀಡಿದ್ದು ತಿಂಡಿ, ಆಹಾರ ಮತ್ತು ಇತರ ಆಹಾರ ಉತ್ಪನ್ನಗಳ ಮಾರಾಟದ ಮೇಲೆ ಕೂಡ ರೈಲ್ವೆ ಇಲಾಖೆ ಅನೇಕ‌ ನಿಯಮಗಳನ್ನು ಜಾರಿಗೆ ತಂದಿದೆ. ಯಾವುದೇ ಆಹಾರ ಮಾರಾಟ ಗಾರರು ಯಾವುದೇ ಆಹಾರ ಪದಾರ್ಥಗಳಿಗೆ ಹೆಚ್ಚಿನ ಶುಲ್ಕ ವಿಧಿಸಲು ಸಾಧ್ಯವಿಲ್ಲ. ಇದರೊಂದಿಗೆ ಆಹಾರದ ಗುಣಮಟ್ಟವೂ ಚೆನ್ನಾಗಿ ಇರಬೇಕು ಎಂದು ತಿಳಿಸಿದೆ.

ಈ ನಿಯಮ ಇರಲಿದೆ:

ಪ್ರಯಾಣಿಕರ ಹಿತದೃಷ್ಟಿಯಿಂದ ಯಾವುದೇ ಪ್ರಯಾಣಿಕರು ತಮ್ಮ ಆಯಾ ಸೀಟುಗಳಲ್ಲಿ ಅಥವಾ ಕೋಚ್‌ಗಳಲ್ಲಿ ಮೊಬೈಲ್‌ನಲ್ಲಿ ದೊಡ್ಡ ಧ್ವನಿಯಲ್ಲಿ ಮಾತನಾಡುವಂತಿಲ್ಲ ಇತರ ಪ್ರಯಾಣಿಕರಿಗೆ ತೊಂದರೆ ನೀಡುವಂತಿಲ್ಲ ಎಂದಿದೆ.

  • ಅದೇ ರೀತಿ ರಾತ್ರಿ 10 ಗಂಟೆಯ ನಂತರ ಯಾವುದೇ ಪ್ರಯಾಣಿಕರು ದೀಪಗಳನ್ನು ಉರಿಸುವಂತಿಲ್ಲ.
  • ರಾತ್ರಿ 10 ಗಂಟೆಯ ನಂತರ ಆಹಾರವನ್ನು ನೀಡಲು ಸಾಧ್ಯವಿಲ್ಲ. ರಾತ್ರಿ ಸಮಯದಲ್ಲಿ ಪ್ರಯಾಣಿಕರಿಗೆ ತೊಂದರೆ ಯಾಗಬಾರದೆಂದು ಈ ನಿಯಮ ಜಾರಿಗೆ ತರಲಾಗಿದೆ.

advertisement

Leave A Reply

Your email address will not be published.