Karnataka Times
Trending Stories, Viral News, Gossips & Everything in Kannada

Budget Car: 27Km ಮೈಲೇಜ್ ನೀಡುವ ಕಾರು 6.13 ಲಕ್ಷಕ್ಕೆ ಲಭ್ಯ! ಭರ್ಜರಿ ಡಿಸ್ಕೌಂಟ್

advertisement

ಮೇ ತಿಂಗಳಿನಲ್ಲಿ ಹುಂಡೈ ಕಂಪನಿಯು ತನ್ನ ಎಲ್ಲಾ ಕಾರುಗಳ ಮೇಲೆ ಅತ್ಯಾಕರ್ಷಕ ಡಿಸ್ಕೌಂಟ್ (Amazing Discount) ಅನ್ನು ನೀಡುತ್ತಿದ್ದು, ಈ ತಿಂಗಳಿನಲ್ಲಿ ಕಾರ್ ಖರೀದಿ ಮಾಡುವಂತಹ ಗ್ರಾಹಕರಿಗೆ 10,000 ವರೆಗಿನ ರಿಯಾಯಿತಿಯನ್ನು ನೀಡಲಾಗುವ ಮಾಹಿತಿಯನ್ನು ಕಂಪನಿ ತನ್ನ ಅಧಿಕೃತ ವೆಬ್ಸೈಟ್ನಲ್ಲಿ (Official Website) ಹಂಚಿಕೊಂಡಿದ್ದಾರೆ.

ಭಾರತೀಯ ಆಟೋ ಮೊಬೈಲ್ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯನ್ನು ಪಡೆದುಕೊಂಡಿರುವ SUV ಕಾರುಗಳು 6.13 ಲಕ್ಷ ಬೆಲೆಯಲ್ಲಿ ದೊರಕುತ್ತಿದೆ ಇದಾಗಿ ನೀವೇನಾದರೂ ಖರೀದಿ ಮಾಡಲು ಯೋಜನೆ ಹೂಡಿದ್ದರೆ ಈ ತಿಂಗಳಿನಲ್ಲೇ ಹುಂಡೈ ಕಂಪನಿಯ ಕಾರ್ ಖರೀದಿಸುವುದು ಉತ್ತಮ.

ಒಂದು ತಿಂಗಳಿನಲ್ಲಿ 7756 ಕಾರ್ ಮಾರಾಟ:

ಹುಂಡೈ ಕ್ರೆಟಾ ಹಾಗೂ i10 (Hyundai Creta and i10) ಕಾರುಗಳ ಬಳಿಕ ಹುಂಡೈ ಮಾರುಕಟ್ಟೆಗೆ ಪರಿಚಯಿಸಿದ ಎಕ್ಸೆಟರ್ ಅತಿ ಹೆಚ್ಚು ಮಾರಾಟವಾಗುವ ಮೂಲಕ ಕಂಪನಿಯ ಮೂರನೇ ಬೆಸ್ಟ್ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೀಗಾಗಿ ಏಪ್ರಿಲ್ ತಿಂಗಳಿನಲ್ಲಿ ಎಕ್ಸೀಟರ್ ಕಾರಿಗೆ ಎಲ್ಲಿಲ್ಲದಂತಹ ಡಿಮ್ಯಾಂಡ್ ಹೆಚ್ಚಾಗಿದ್ದು (Increased Demand) 7756 ಯೂನಿಟ್ಗಳಲ್ಲಿ ಕಾರುಗಳನ್ನು ಮಾರಾಟ ಮಾಡಲಾಗುತ್ತಿದೆ. ಕಾರು ಪ್ರಿಯರ ವಲಯದಲ್ಲಿ ಭಾರಿ ಜನಪ್ರಿಯತೆ ಪಡೆದುಕೊಂಡಿರುವ ಹುಂಡೈ ಎಕ್ಸಿಟರ್ (Hyundai Exter) ಕಾರನ್ನು ಕಂಪನಿ ₹6,12,800ಗಳ ಎಕ್ಸ್ ಶೋರೂಮ್ ಬೆಲೆಗೆ ಮಾರಾಟ ಮಾಡಿದೆ.

ಹುಂಡೈ ಎಕ್ಸಿಟರ್ನ ಹೆಚ್ಚಿನ ಬೇಡಿಕೆಯಿಂದಾಗಿ ಕಾಯುವ ದಿನಾಂಕವು ಹೆಚ್ಚಾಗಿದೆ:

 

Image Source: carandbike

 

advertisement

ನಿರೀಕ್ಷೆಗೂ ಮೀರಿದ ರೀತಿ ಹುಂಡೈ ಎಕ್ಸಿಟರ್ (Hyundai Exter) ಕಾರು ಮಾರುಕಟ್ಟೆಯಲ್ಲಿ ಅತಿ ಹೆಚ್ಚಾಗಿ ಮಾರಾಟವಾಗುತ್ತಿದೆ. ಇದರಿಂದಾಗಿ ಗ್ರಾಹಕರ ವೇಟಿಂಗ್ ಪಿರಿಯಡ್ ಕೂಡ ಹೆಚ್ಚಾಗುತ್ತದ್ದು, ಕಾರನ್ನು ಖರೀದಿಸಲು 16 ವಾರಗಳ ಕಾಲ ಕಾಯಲೇ ಬೇಕಾಗುತ್ತದೆ.

ಹುಂಡೈ ಸಿ ಎನ್ ಜಿ ವೆರಿಯಂಟ್ ಕಾರ್ ಖರೀದಿಸಲು ಮೂರರಿಂದ ನಾಲ್ಕು ವಾರಗಳ ಕಾಲ ವೈಟಿಂಗ್ ಪಿರಿಯಡ್ (CNG Variant- Waiting Period) ಇದ್ದರೆ, ಬಾರಿ ಬೇಡಿಕೆ ಪಡೆದುಕೊಂಡಿರುವ EX(O) ಪೆಟ್ರೋಲ್ ಮಾನ್ಯುಯಲ್ ಟ್ರಾನ್ಸ್ ಮಿಷನ್ ಕಾರ್ ಖರೀದಿ ಮಾಡಲು 14 ರಿಂದ 16 ವಾರಗಳ ಕಾಲ ಕಾಯಬೇಕಾಗುತ್ತದೆ ಹಾಗೂ ಆಟೋಮೆಟಿಕ್ ಪೆಟ್ರೋಲ್ ಟ್ರಾನ್ಸ್ ಮಿಷನ್ (Automatic Petrol Transmission) ಕಾರನ್ನು ಖರೀದಿ ಮಾಡಲು ನಾಲ್ಕರಿಂದ ಆರು ವಾರಗಳು ಬೇಕಾಗುತ್ತದೆ.

Hyundai Exeter Features: 

 

Image Source: HT Auto

 

ಹುಂಡೈ ಕಂಪನಿಯ ಎಕ್ಸಿಟರ್ ಕಾರನ್ನು ಇಂಧನ ವ್ಯವಸ್ಥೆಯ ಆಧಾರದ ಮೇಲೆ ಹಲವು ವೇರಿಯಂಟ್ ಗಳಲ್ಲಿ ಬಿಡುಗಡೆ ಮಾಡಿದ್ದಾರೆ. ಹುಂಡೈ ಎಕ್ಸಿಟರ್ SX(O), ಹುಂಡೈ ಎಕ್ಸಿಟರ್ SX, ಹುಂಡೈ ಎಕ್ಸಿಟರ್ S, ಹುಂಡೈ ಎಕ್ಸಿಟರ್ EX, ಹುಂಡೈ ಎಕ್ಸಿಟರ್ EX(O) ರೂಪಾಂತರಗಳಲ್ಲಿ ಲಭ್ಯವಿದೆ

ಇದರೊಂದಿಗೆ ಸುರಕ್ಷತಾ ದೃಷ್ಟಿಕೋನದಿಂದ 6 ಏರ್ ಬ್ಯಾಗ್ ಗಳ ಅಳವಡಿಕೆ EBDಯೊಂದಿಗೆ ಎಬಿಎಸ್ ಸಿಸ್ಟಮ್, ಸೆಂಟ್ರಲ್ ಲಾಕಿಂಗ್ ಸಿಸ್ಟಮ್, ಕೀ ಇಲ್ಲದ ಎಂಟ್ರಿ, ಎಲ್ಲಾ ಸೀಟುಗಳಿಗೂ 3 ಪಾಯಿಂಟ್ ಸೀಟ್ ಬೆಲ್ಟ್, ಎಲ್ಇಡಿ ಹೆಡ್ ಲ್ಯಾಂಪ್ ಮತ್ತು ಟೇಲ್ ಲ್ಯಾಂಪ್, ರೇರ್ ಪಾರ್ಕಿಂಗ್ ಸೆನ್ಸರ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಇನ್ಫೋಟೈನ್ಮೆಂಟ್ ಸಿಸ್ಟಮ್, ಗಾಳಿಯಾಡುವ ಕಿಟಕಿಗಳು (Ventilated Window) ಹೀಗೆ ಮುಂತಾದ ಅತ್ಯುತ್ತಮ ವೈಶಿಷ್ಟ್ಯತೆಗಳಿಂದ ಕೂಡಿದೆ.

advertisement

Leave A Reply

Your email address will not be published.