Karnataka Times
Trending Stories, Viral News, Gossips & Everything in Kannada

SSLC Exam: SSLC ಪರೀಕ್ಷೆಯಲ್ಲಿ ಕಡಿಮೆ ಅಂಕ ಸಿಕ್ಕ ಎಲ್ಲಾ ಮಕ್ಕಳಿಗೂ ಗುಡ್ ನ್ಯೂಸ್! ಅಧಿಕೃತ ವರದಿ

advertisement

ಶಿಕ್ಷಣ ಇಂದು ಭವಿಷ್ಯದ ಮುಖ್ಯ ಬುನಾದಿ‌ಯಾಗಿದ್ದು ಪ್ರತಿಯೊಬ್ಬರ ಮನೆಯಲ್ಲೂ ಮಕ್ಕಳ ಶಿಕ್ಷಣ ಕ್ಕೆ ಹೆಚ್ಚಿನ ಒತ್ತನ್ನು ನೀಡುತ್ತಾರೆ.ಇಂದು ಕಲಿಕೆಗೆ ಸಂಬಂಧಿಸಿದಂತೆ ಸರಕಾರ ಕೂಡ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಲೇ ಬಂದಿದೆ.ಅದರಲ್ಲೂ ಎಸ್ ಎಸ್ ಎಲ್ ಸಿ ಶಿಕ್ಷಣ ದ ಪ್ರಮುಖ ಹಂತ ವಾಗಿದ್ದು ಈ ತರಗತಿಯ ಕಲಿಕೆಗೆ ಹೆಚ್ಚು ಒತ್ತು ನೀಡುತ್ತಾರೆ.‌ SSLC ಮತ್ತು PUC ಯ ಮಾರ್ಕ್ ಅನ್ನೋದು ಮುಂದಿನ ಭವಿಷ್ಯ ಕ್ಕೆ ಬಹಳ ಪ್ರಮುಖ ‌ಕೂಡ ಆಗಿದೆ.ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯ (SSLC Exam) ರಿಸಲ್ಟ್ ಈಗಾಗಲೇ ಬಂದಿದ್ದು ವಿದ್ಯಾರ್ಥಿಗಳು ಮುಂದಿನ‌ ಶಿಕ್ಷಣದ ತಯಾರಿಯಲ್ಲಿ ಇದ್ದಾರೆ.

ತೇರ್ಗಡೆ ಯಾಗಿದ್ದಾರೆ:

ಕರ್ನಾಟಕದ ಒಟ್ಟು 2,750 ಪರೀಕ್ಷಾ ಕೇಂದ್ರಗಳಲ್ಲಿ 8,59,967 ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆ ಬರೆದಿದ್ದು ಇದರಲ್ಲಿ 6,31,204 ಮಂದಿ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.ಈ ಬಾರಿಯ ಪರೀಕ್ಷೆಯಲ್ಲಿ ಉಡುಪಿ ಮೊದಲ ಸ್ಥಾನ, ದಕ್ಷಿಣ ಕನ್ನಡ ಜಿಲ್ಲೆ ಎರಡನೇ ಸ್ಥಾನ, ಶಿವಮೊಗ್ಗ ಮೂರನೇ ಸ್ಥಾನ ಕೂಡ ಪಡೆದಿದೆ.625 ಅಂಕಕ್ಕೆ 625 ಅಂಕವನ್ನು ಬಾಗಲಕೋಟೆಯ ಅಂಕಿತ ಬಸಪ್ಪ ಎನ್ನುವ ವಿದ್ಯಾರ್ಥಿನಿ ಪಡೆದಿದ್ದು ಇವರು ರಾಜ್ಯದಲ್ಲಿ ಅತಿ ಹೆಚ್ಚು ಅಂಕ ಪಡೆದ ಏಕೈಕ ವಿದ್ಯಾರ್ಥಿಯಾಗಿದ್ದಾರೆ.

ಈ ಅವಕಾಶ ನೀಡಿದೆ:

ಈ ಭಾರಿ ಎಸ್ ಎಸ್ ಎಲ್ ಸಿ ಪರೀಕ್ಷೆ (SSLC Exam) ಬರೆಯಲು ವಿದ್ಯಾರ್ಥಿಗಳಿಗೆ ಹೊಸ ಅವಕಾಶ ವನ್ನು ನೀಡಲಾಗಿದೆ. ಪಾಸಾಗಲಿ ಅಥವಾ ಫೇಲಾಗಲಿ ಮೂರು ಬಾರಿ ಪರೀಕ್ಷೆ ಬರೆಯಲು ಅವಕಾಶ ನೀಡಿದೆ. ಒಂದು ವೇಳೆ ಪಾಸಾಗಿದ್ದು ಕಡಿಮೆ ಅಂಕ ಬಂದಿದ್ದರೆ ವಿದ್ಯಾರ್ಥಿಗಳು ಮತ್ತೆ ಪರೀಕ್ಷೆ ಬರೆಯ ಬಹುದಾಗಿದೆ.

advertisement

ಮರು ಪರೀಕ್ಷೆ ಯಾವಾಗ?

 

Image Source: Scroll.in

 

ಎಸ್‌ಎಸ್‌ಎಲ್‌ಸಿ ಪರೀಕ್ಷೆ (SSLC Exam) 1 ಅನ್ನು ಮಾರ್ಚ್, ಏಪ್ರಿಲ್‌ನಲ್ಲಿ ನಡೆಸಲಾಯಿತು.ಕರ್ನಾಟಕ ಶಿಕ್ಷಣ ಇಲಾಖೆ ಇದೀಗ ಮರು ಪರೀಕ್ಷೆ ದಿನಾಂಕವನ್ನು ಪ್ರಕಟಿಸಿದ್ದು, ಜೂನ್ 7ರಿಂದ 14ನೇ ತಾರೀಖಿನವರೆಗೆ ಮರು ಪರೀಕ್ಷೆ ನಡೆಯಲಿದೆ. ಹಾಗಾಗಿ ವಿದ್ಯಾರ್ಥಿಗಳು ಮತ್ತೆ ತಯಾರಿ‌ ಸುರು ಮಾಡಬಹುದಾಗಿದೆ

ಯಾವ ದಿನಾಂಕ? ಯಾವ ಪರೀಕ್ಷೆ?

  • ಜೂನ್ 07, ಶುಕ್ರವಾರ: ಪ್ರಥಮ ಮತ್ತು ತೃತೀಯ ಭಾಷೆ
  • ಜೂನ್ 8 ಶನಿವಾರ, ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್ ಇತರೆ
  • ಜೂನ್ 10 ಸೋಮವಾರ: ಕೋರ್ ಸಬ್ಜೆಕ್ಟ್ (ಗಣಿತ, ಸಮಾಜ ವಿಜ್ಞಾನ)
  • ಜೂನ್ 11 ಮಂಗಳವಾರ: ಅರ್ಥಶಾಸ್ತ್ರ
  • ಜೂನ್ 12 ಬುಧವಾರ: ವಿಜ್ಞಾನ, ರಾಜ್ಯಶಾಸ್ತ್ರ
  • ಜೂನ್ 13 ಗುರುವಾರ: ದ್ವಿತೀಯ ಭಾಷೆ (ಕನ್ನಡ, ಇಂಗ್ಲಿಷ್)
  • ಜೂನ್ 14 ಶುಕ್ರವಾರ: ಸಮಾಜಶಾಸ್ತ್ರ ಇರಲಿದೆ.

advertisement

Leave A Reply

Your email address will not be published.