Karnataka Times
Trending Stories, Viral News, Gossips & Everything in Kannada

SSLC Exam: SSLC ಪರೀಕ್ಷೆಗೆ ಸಿಬ್ಬಂದಿಯಾಗಿ ಕಾರ್ಯ ಮಾಡುವ ಎಲ್ಲರಿಗೂ ಸರ್ಕಾರದ ಗುಡ್ ನ್ಯೂಸ್!

advertisement

ಮಾರ್ಚ್ 25ರಿಂದ ಎಸೆಸೆಲ್ಸಿ ಪರೀಕ್ಷೆ ನಡೆಯಲಿದ್ದು, ಈಗಾಗಲೇ ಮಕ್ಕಳಿಗೆ ಪೂರ್ವ ಸಿದ್ಧತೆಯ ಪರೀಕ್ಷೆಗಳೆಲ್ಲವೂ ಮುಕ್ತಾಯವಾಗಿದ್ದು, ನಾಳೆ ಪರೀಕ್ಷೆ ಸಿದ್ಧತೆಯಾಗಿ ಓದುತ್ತಿದ್ದಾರೆ. ಈ ನಡುವೆ ಪರೀಕ್ಷೆಗೆ ಬೇಕಾದ ಬೇರೆ ಇತರ ಸಿದ್ಧತೆಯನ್ನು ಕೂಡ ಮಾಡಲಾಗುತ್ತಿದೆ. ಎಸೆಸೆಲ್ಸಿ ಪರೀಕ್ಷೆ (SSLC Exam) ಮೇಲ್ವಿಚಾರಣೆ ನಡೆಸಲೆಂದೇ ಸಿಬ್ಬಂದಿ ನೇಮಕವನ್ನು ಮಾಡಲಾಗುತ್ತಿದ್ದು ಹಾಗೆ ನೇಮಕ ಆದವರಿಗೆ ಈ ಬಾರಿ ಭರ್ಜರಿ ಗುಡ್ ನ್ಯೂಸ್ ಇದೆ. ಹಾಗಾದರೆ ಆ ಶುಭ ಸುದ್ದಿ ಯಾವುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಯಾವುದು ಆ ಶುಭ ಸುದ್ದಿ:

 

Image Source: DNA India

 

ಎಸೆಸೆಲ್ಸಿ ಪರೀಕ್ಷಾ (SSLC Exam) ಕಾರ್ಯಕ್ಕೆ ನೇಮಕ ಆಗಿರುವ ನಿಯೋಜಿತ ಸಿಬ್ಬಂದಿಗಳಿಗೆ ಸಂಭಾವನೆಯನ್ನು 5% ಏರಿಸಲು ಸರಕಾರ ತೀರ್ಮಾನಿಸಿದ್ದು ಸಿಬ್ಬಂದಿಗೆ ಈ ವಿಚಾರ ತುಂಬಾ ಖುಷಿ ನೀಡಲಿದೆ. ಆ ಪ್ರಕಾರ 2024ರ ಪರೀಕ್ಷೆಗೆ ನಿಯೋಜನೆಗೊಂಡ ಸಿಬ್ಬಂದಿಗೆ ಸಂಭಾವನೆ 5% ನಷ್ಟು ಏರಿಕೆ ಆಗಲಿದೆ. ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರ ಉಳಿತಾಯ ಖಾತೆಗೆ ಹಣ ಜಮೆ ಆಗಿದ್ದು ಅವರ ಮೂಲಕ ಉಳಿದ ಸಿಬ್ಬಂದಿಗೆ ಹಣ ವರ್ಗಾವಣೆ ಆಗಲಿದೆ.

ಮುಖ್ಯ ಅಧೀಕ್ಷಕರು ಬದಲಾದರೆ?

advertisement

ಪರೀಕ್ಷಾ ಮುಖ್ಯ ಅಧೀಕ್ಷಕರು ಅನಿವಾರ್ಯ ಸಂದರ್ಭಗಳಲ್ಲಿ ಬದಲಾಗುವ ಸಾಧ್ಯತೆ ಇದೆ. ಅಧೀಕ್ಷಕರ ಮಂಡಳಿಯಿಂದ ಬದಲಾವಣೆ ಆದ ಮುಖ್ಯ ಅಧೀಕ್ಷಕರ ಖಾತೆಗೆ ನೆಫ್ಟ್ ಮೂಲಕ ಹಣವನ್ನು ರವಾನಿಸಲಾಗುತ್ತದೆ. ಹಾಗೆ ಸಿಬ್ಬಂದಿಗೆ ಸಂಭಾವನೆ ಮೊತ್ತವನ್ನು ನೀಡಲಾಗುವುದು. ಹಣ ಬಿಡುಗಡೆ ಆಗುವ ವಿಚಾರದಲ್ಲಿ ವ್ಯತ್ಯೆಯವಾದರೆ ಒಂದು ತಿಂಗಳ ಒಳಗೆ ಮಂಡಳಿಗೆ ಅಗತ್ಯ ದಾಖಲೆಗಳ ಜೊತೆಗೆ ಪತ್ರ ಮುಖೇನ ಮನವಿ ಮಾಡಬೇಕು ಎಂದು ಸೂಚಿಸಲಾಗಿದೆ.

ಕಾರ್ಯವಿಧಾನ ಹೇಗೆ?

ಎಸೆಸೆಲ್ಸಿ ಪರಿಕ್ಷೆ (SSLC Exam) ಯಲ್ಲಿ 24 ವಿದ್ಯಾರ್ಥಿಗಳಿಗೆ ಒಬ್ಬರು ಕೊಠಡಿ ಮೇಲ್ವಿಚಾರಕರಂತೆ ನೇಮಕ ಆಗಲಿದ್ದಾರೆ. 10 ಮೇಲ್ವಿಚಾರಕರಿಗೆ ಒಬ್ಬರು ರಿಲೀವರ್ ಅನ್ನು ನೇಮಿಸಲಾಗುವುದು. ಎಲ್ಲರಿಗೂ ಸರಕಾರದ ಆದೇಶ 1ರ ಅನ್ವಯ ಉಲ್ಲೇಖ 5ರ ಅಡಿಯಲ್ಲಿ ಕಳೆದ ಬಾರಿಗೆ ಹೊಲಿಸಿದರೆ ಈ ಬಾರಿ ಸಂಭಾವನೆಯಲ್ಲಿ 5% ಏರಿಸಲು ತೀರ್ಮಾನಿಸಲಾಗಿದೆ.

ಅನಗತ್ಯ ವೆಚ್ಚಕ್ಕೆ ಕಡಿವಾಣ:

ಪರೀಕ್ಷೆ ಕೊಠಡಿಗೆ ಬೇಕಾದ ಸಮಾಗ್ರಿ ಖರೀದಿ ಮಾಡಿದ್ದಕ್ಕೆ ಸರಿಯಾದ ಲೆಕ್ಕಾಚಾರದ ರಶೀದಿ ಹೊಂದಿರಬೇಕು. ಅದರ ಜೊತೆಗೆ ಬಿಲ್ಲುಗಳನ್ನು ಲಗತ್ತಿಸುವಾಗ ಅದು ಮುಖ್ಯ ಅಧೀಕ್ಷಕರಿಂದ ಹಣ ಸಂದಾಯ ಆಗಿದೆ ಅಥವಾ ಆಗಿಲ್ಲ ಎಂಬ ಬಗ್ಗೆ ದೃಢೀಕರಿಸಿ ಇರಬೇಕು. ಅನಗತ್ಯ ಖರ್ಚು ವೆಚ್ಚ ಕಂಡು ಬಂದರೆ ಸಂಬಂಧಪಟ್ಟ ವ್ಯಕ್ತಿಯೇ ಆ ಖರ್ಚನ್ನು ಭರಿಸಬೇಕು. ಈ ಮೂಲಕ ಅನಗತ್ಯ ಖರ್ಚಿಗೆ ಕಡಿವಾಣ ಹಾಕಬೇಕು ಎಂದು ಚಿಂತಿಸಲಾಗಿದೆ.

advertisement

Leave A Reply

Your email address will not be published.