Karnataka Times
Trending Stories, Viral News, Gossips & Everything in Kannada

SSLC PUC Exam 2024: ಎಸ್.ಎಸ್.ಎಲ್.ಸಿ , ದ್ವಿತೀಯ ಪಿಯು ಪರೀಕ್ಷೆ ವೇಳಾಪಟ್ಟಿ ಬಿಡುಗಡೆ, ಈ ನಿಯಮ ಕಡ್ಡಾಯ

advertisement

ಎಸೆಸೆಲ್ಸಿ ಮತ್ತು ಪಿಯು ಪರೀಕ್ಷೆ ಪ್ರತಿಯೊಬ್ಬರ ಜೀವನದಲ್ಲಿ ಬಹಳ ಮುಖ್ಯ ಸ್ಥಾನ ಹೊಂದಿದೆ. ಈಗಾಗಲೇ ಪರೀಕ್ಷೆಗೆ ಪೂರ್ವ ಸಿದ್ಧತೆ ನಡೆಯುತ್ತಿದ್ದು ಪರೀಕ್ಷೆಯ ವೇಳಾ ಪಟ್ಟಿ ಸಹ ಬಿಡುಗಡೆ ಆಗಿದೆ. ಈ ಮೂಲಕ ಮಾರ್ಚ್ 1ರಿಂದ 22 ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ಹಾಗೂ ಮಾರ್ಚ್ 25ರಿಂದ ಎಪ್ರಿಲ್ 6 ರ ವರೆಗೆ ಎಸೆಸೆಲ್ಸಿ ಪರೀಕ್ಷೆ ನಡೆಯಲಿದೆ ಎಂದು ತಿಳಿದು ಬಂದಿದ್ದು ಪರೀಕ್ಷೆ ಯಾವ ಯಾವ ದಿನಕ್ಕೆ ಯಾವ ಯಾವ ವಿಷಯದಲ್ಲಿ ನಡೆಯಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

SSLC Exam Time Table:

(ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30 ವರೆಗೆ)

  • ಮಾ.25: ಪ್ರಥಮ ಭಾಷೆಗಳು ಅಂದರೆ ಕನ್ನಡ, ಹಿಂದಿ, ಮರಾಠಿ, ತೆಲುಗು, ಉರ್ದು, ಇಂಗ್ಲೀಷ್, ತಮಿಳು ಪರೀಕ್ಷೆ ನಡೆಯಲಿದೆ.
  • ಮಾರ್ಚ್ 27: ಸಮಾಜ ವಿಜ್ಞಾನ
  • ಮಾರ್ಚ್: ವಿಜ್ಞಾನ, ರಾಜ್ಯಶಾಸ್ತ್ರ
  • ಎಪ್ರಿಲ್ 2: ಗಣಿತ, ಸಮಾಜಶಾಸ್ತ್ರ
  • ಎಪ್ರಿಲ್ 3: ಅರ್ಥ ಶಾಸ್ತ್ರ
  • ಎಪ್ರಿಲ್ 4: ತೃತೀಯ ಭಾಷೆ (ಹಿಂದಿ, ಕನ್ನಡ, ಅರೆಬಿಕ್, ಪರ್ಶಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು)
  • ಎಪ್ರಿಲ್ 6: ದ್ವಿತೀಯ ಭಾಷೆ (ಇಂಗ್ಲಿಷ್ , ಕನ್ನಡ)

PUC Exam Time Table:

advertisement

ದ್ವಿತೀಯ ಪಿಯುಸಿ ಯಲ್ಲಿ ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30 ವರೆಗೆ ನಡೆಯಲಿದೆ.

  • ಮಾರ್ಚ್1: ಕನ್ನಡ, ಅರೆಬಿಕ್
  • ಮಾ.4: ಗಣಿತ
  • ಮಾ. 5: ರಾಜ್ಯ ಶಾಸ್ತ್ರ, ಸಂಖ್ಯಾಶಾಸ್ತ್ರ
  • ಮಾ.7: ಇತಿಹಾಸ , ಭೌತಶಾಸ್ತ್ರ
  • ಮಾ.9: ಲೆಕ್ಕಶಾಸ್ತ್ರ, ಭೂಗರ್ಭ ಶಾಸ್ತ್ರ, ಐಚ್ಛಿಕ ಕನ್ನಡ, ಗೃಹ ವಿಜ್ಞಾನ
  • ಮಾ.11: ತರ್ಕ ಶಾಸ್ತ್ರ, ವ್ಯವಹಾರ ಅಧ್ಯಯನ
  • ಮಾ.13: ಇಂಗ್ಲಿಷ್
  • ಮಾ.15: ಹಿಂದುಸ್ಥಾನಿ ಸಂಗೀತ, ಮನಃ ಶಾಸ್ತ್ರ, ಮೂಲಗಣಿತ, ರಸಾಯನ ಶಾಸ್ತ್ರ
  • ಮಾ. 16: ಅರ್ಥಶಾಸ್ತ್ರ
  • ಮಾ.18: ಭೂಗೋಳ ಶಾಸ್ತ್ರ, ಜೀವ ಶಾಸ್ತ್ರ
  • ಮಾ. 20: ಸಮಾಜಶಾಸ್ತ್ರ,ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ
  • ಮಾ.21: ಸಂಸ್ಕೃತ, ತೆಲುಗು , ತಮಿಳು, ಮಲಯಾಳಂ, ಮರಾಠಿ, ಉರ್ದು,ಫ್ರೆಂಚ್
  • ಮಾ.22: ಹಿಂದಿ

ಪೋಷಕರ ಸಹಿ ಕಡ್ಡಾಯ:

ಆಂತರಿಕ ಪರೀಕ್ಷೆ ನಡೆಸಿದ್ದ ಬಳಿಕ ಪ್ರೊಗ್ರೆಸ್ ಕಾರ್ಡ್ ನೀಡಲಾಗುತ್ತಿದ್ದು ಅದಕ್ಕೆ ಪೋಷಕರ ಸಹಿಯನ್ನು ಎಸೆಸೆಲ್ಸಿ ಮಕ್ಕಳಿಗೆ ಕಡ್ಡಾಯ ಮಾಡಲಾಗಿದೆ. ಈ ಮೂಲಕ 80 ಅಂಕಕ್ಕೆ ವಾರ್ಷಿಕ ಪರೀಕ್ಷೆ ಹಾಗೂ 20 ಅಂಕದ ಆಂತರಿಕ ಪರೀಕ್ಷೆ ಅಂಕ ಇಲ್ಲಿ ಸೇರ್ಪಡೆ ಆಗಲಿದೆ. ಕರ್ನಾಟಕ ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಈ ಬಗ್ಗೆ ಶಾಲೆಗಳಿಗೆ ಸುತ್ತೋಲೆ ನೀಡಿದ್ದು ಆಂತರಿಕ ಪರೀಕ್ಷೆಯನ್ನು ಶಿಕ್ಷಕರೆ ಮಾಡಿ ಅಂಕ ನೀಡಬೇಕು ಮತ್ತು ಪೋಷಕರ ಸಹಿ ಕಡ್ಡಾಯ ಎಂದು ತಿಳಿಸಲಾಗಿದೆ.

ಕಡ್ಡಾಯ ಹಾಜರಾತಿ ಇರಲೇ ಬೇಕು:

ಮಕ್ಕಳಿಗೆ ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯು ಪರೀಕ್ಷೆಗೆ ಕಡ್ಡಾಯ 75% ಹಾಜರಾತಿ ಹೊಂದಿರಲೇ ಬೇಕೆಂದು ತಿಳಿಸಲಾಗಿದೆ. ಹಾಜರಾತಿ ಕಡ್ಡಾಯ ವಾಗಿರುವ ಕಾರಣ ಹಾಜರಾತಿ ಕೊರತೆ ಇದ್ದರೆ ಅಂಥವರು ಪರೀಕ್ಷೆ ಬರೆಯಲು ಸಾಧ್ಯವಿರಲಾರದು. ಅವರು ಮತ್ತೆ ಪುನಃ ಮುಂದಿಬಲನ ವರ್ಷಕ್ಕೆ ಸೇರಿ ಪರೀಕ್ಷೆ ಬರೆಯಬೇಕಾಗುತ್ತದೆ. ಹಾಗಾಗಿ ಪೋಷಕರು ಕೂಡ ಮಕ್ಕಳ ಹಾಜರಾತಿ ಬಗ್ಗೆ ಎಚ್ಚೆತ್ತುಕೊಳ್ಳುವುದು ಅತ್ಯವಶ್ಯಕವಾಗಿದೆ.

advertisement

Leave A Reply

Your email address will not be published.