Karnataka Times
Trending Stories, Viral News, Gossips & Everything in Kannada

Bounce Infinity E1: ಬೌನ್ಸ್ ಕಂಪೆನಿಯ E1 ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಭರ್ಜರಿ 24,000 ರೂಪಾಯಿ ಆಫರ್, 85KM ಮೈಲೇಜ್!

advertisement

ಎಲೆಕ್ಟ್ರಾನಿಕ್ ಕಾರು, ಬೈಕ್ ಗಳಿಗೆ ಇತ್ತೀಚಿನ ದಿನದಲ್ಲಿ ತುಂಬಾ ಬೇಡಿಕೆ ಇದ್ದು ದೊಡ್ಡ ಕಂಪೆನಿಗಳಿಂದ ಸಾಮಾನ್ಯ ಕಂಪೆನಿ ವರೆಗೆ ಇದರ ಉತ್ಪನ್ನ ನಡೆಯುತ್ತಿದ್ದು ಮಾರುಕಟ್ಟೆಯಲ್ಲಿ ಪ್ರಬಲ ಪೈಪೋಟಿ ನೀಡುತ್ತಿದೆ. ಈಗ ಇಂತಹದ್ದೇ ಒಂದು ಬೆಂಗಳೂರಿನ ಕಂಪೆನಿಯಲ್ಲಿ ತಯಾರದ ಎಲೆಕ್ಟ್ರಾನಿಕ್ ಸ್ಕೂಟರ್ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಕಡಿಮೆ ಹಣಕ್ಕೆ ಎಲೆಕ್ಟ್ರಾನಿಕ್ ಸ್ಕೂಟರ್ ಖರೀದಿ ಮಾಡಬೇಕು ಎಂದು ಕಾದವರಿಗೆ ಈ ಸುದ್ದಿ ಶುಭ ಸೂಚನೆ ನೀಡಲಿದೆ‌. ಹಾಗಾದರೆ ಯಾವ ಸ್ಕೂಟರ್, ವೈಶಿಷ್ಟ್ಯ ಹೇಗಿದೆ, ಬೆಲೆ ಎಷ್ಟು ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಯಾವುದು ಈ ಸ್ಕೂಟರ್?

ಬೆಂಗಳೂರಿನ ಎಲೆಕ್ಟ್ರಾನಿಕ್ ವಾಹನ ತಯಾರಿಕಾ ಕಂಪೆನಿಯಾದ ಬೌನ್ಸ್ ಇನ್ಫಿನಿಟಿ ಸ್ಕೂಟರ್ ಬೆಲೆಯಲ್ಲಿ ಮಹಾ ಆಫರ್ ನೀಡುತ್ತಿದೆ‌. ಬೌನ್ಸ್ ಕಂಪೆನಿಯ Bounce Infinity E1  ಶ್ರೇಣಿಯ ಎಲೆಕ್ಟ್ರಾನಿಕ್ ಸ್ಕೂಟರ್ ಗಳ ಮೇಲೆ 21% ಭರ್ಜರಿ ಆಫರ್ ಅನ್ನು ನೀಡುತ್ತಿದೆ. ಹಾಗಾಗಿ ಕಡಿಮೆ ಬಜೆಟ್ ನಲ್ಲಿ ನಿಮಗೆ ಈ ಒಂದು ಸ್ಕೂಟರ್ ಪಡೆಯಬಹುದು. ಉತ್ತಮ ಕಾರ್ಯ ದಕ್ಷತೆಯ ಜೊತೆಗೆ ಶೀಘ್ರ ಚಾರ್ಜಿಂಗ್ ಕೆಪಾಸಿಟಿ ಸಹ ಇದು ಹೊಂದಿದೆ ಎನ್ನಬಹುದು.

Bounce Infinity E1 Features:

 

 

advertisement

Bounce Infinity E1 ಶ್ರೇಣಿಯಲ್ಲಿ ವಿವಿಧ ಸಂದರ್ಭದಲ್ಲಿ ಒಗ್ಗಿಕೊಳ್ಳುವ ಕಾರ್ಯಕ್ಷಮತೆ ಹೊಂದಿದೆ. 15Amp ವಾಲ್ ಸೆಕೆಟ್ ಬಳಸಿ ಸುಲಭಕ್ಕೆ ಚಾರ್ಜ್ ಮಾಡಬಹುದು. ಶೀಘ್ರವೇ ಚಾರ್ಜ್ ಆಗಲಿದೆ. 2.2 K.W. ಎಲೆಕ್ಟ್ರಾನಿಕ್ ಮೋಟಾರ್ ನಿಂದ 65kmph ಗರಿಷ್ಠ ವೇಗ ನೀಡಲಿದೆ. NMC ಸೆಲ್ ಗಳೊಂದಿಗೆ 2KWH ಲಿಥಿಯಂ- ಐಯಾನ್ ಬ್ಯಾಟರಿ ಪ್ಯಾಕ್ ಇದರಲ್ಲಿಇದೆ. ಒಂದೆ ಚಾರ್ಜ್ ನಲ್ಲಿ 85km ಗಿಂತ ಅಧಿಕವ್ಯಾಪ್ತಿ ಪ್ರಯಾಣ ಮಾಡಬಹುದು. ಪೋರ್ಟಲ್ ಬ್ಯಾಟರಿ, ಚಾರ್ಜಿಂಗ್ ಹೊಂದಿದೆ.

Bounce Infinity E1 Price:

 

 

Bounce Infinity E1 ನಲ್ಲಿ 21% ಆಫರ್ ನೀಡಿದ್ದು 1.13ಲಕ್ಷಕ್ಕೆ ದೊರೆಯುತ್ತಿದ್ದ ಕಾರು ಇದೀಗ 89,999ರೂಪಾಯಿಗೆ ಈ ಕಾರನ್ನು ಮಾರಾಟ ಮಾಡಲಾಗುತ್ತಿದೆ. ಎಕ್ಸ್ ಶೋ ರೂಮಿನಲ್ಲಿ ಇದೆ ದರಕ್ಕೆ ನಿಮಗೆ ಎಲೆಕ್ಟ್ರಾನಿಕ್ ಸ್ಕೂಟರ್ ಲಭ್ಯವಾಗಲಿದ್ದು ಮಾರ್ಚ್ 31ರ ವರೆಗೆ ಆಫರ್ ನಿಮಗೆ ಸಿಗಲಿದೆ. ಈ ಮೂಲಕ ಪ್ರಕೃತಿ ಪ್ರೇಮಿಗಳು ಕಡಿಮೆ ಬಜೆಟ್ ಗೆ ಎಲೆಕ್ಟ್ರಾನಿಕ್ ಸ್ಕೂಟರ್ ಹುಡುಕುವವರಿಗೆ ಉತ್ತಮ ಆಯ್ಕೆ ಎನ್ನಬಹುದು.

CEO ಪ್ರಶಂಸೆ:

ಬೌನ್ಸ್ ಇನ್ಫಿನಿಟಿ ಕಂಪೆನಿಯ CEO ಆದ ಅನಿಲ್ ಜಿ. ಅವರು ಈ ಆಫರ್ ಬಗ್ಗೆ ಮಾಧ್ಯಮದ ಮುಂದೆ ಮಾತನಾಡಿದ್ದಾರೆ. ಬೌನ್ಸ್ ಕಂಪೆನಿ ಮೂಲಕ ಪ್ರತಿಯೊಬ್ಬ ನಾಗರಿಕರಿಗೂ ಎಲೆಕ್ಟ್ರಾನಿಕ್ ಸ್ಕೂಟರ್ ಪಡೆಯುವ ಆಸೆಗೆ ಸಹಕಾರ ನೀಡುವ ಮೂಲಕ ಹಸಿರು ಉಳುವಿಗೆ ನೆರವು ನೀಡುವ ಉದ್ದೇಶ ಹೊಂದಿದೆ. ಬೆಲೆ ಕಡಿತದ ಮೂಲಕ ಗ್ರಾಹಕರಿಗೆ ಇ ಸ್ಕೂಟರ್ ಕೈಗೆಟಕುವ ದರಕ್ಕೆ ಲಭ್ಯವಾಗಲಿದೆ. ಇದರ ಬಳಕೆ ತುಂಬಾ ಸುಲಭವಾಗಿದ್ದು ಗ್ರಾಹಕರು ತೃಪ್ತರಾಗಲಿದ್ದಾರೆ ಎಂದು ಹೇಳಿದ್ದಾರೆ.

advertisement

Leave A Reply

Your email address will not be published.