Karnataka Times
Trending Stories, Viral News, Gossips & Everything in Kannada

Site: ಲೇಔಟ್ ಗಳಲ್ಲಿ ಸೈಟ್ ಖರೀದಿಸುವ ಮುನ್ನ ಇದನ್ನು ಮೊದಲು ಪರಿಶೀಲಿಸಿ, ಇಲ್ಲವಾದರೆ ಮೋಸ ಹೋಗ್ತೀರಾ!

advertisement

ಇತರೆ ವಸ್ತುಗಳ ಮೇಲೆ ಹೂಡಿಕೆ ಮಾಡುವ ಹಾಗೆ ಭೂಮಿಯಲ್ಲಿ ಹೂಡಿಕೆ ಮಾಡುವಾಗ ನಿರ್ಲಕ್ಷವನ್ನು ತೋರಬಾರದು, ಕಾನೂನಿನ ಎಲ್ಲಾ ಅಂಶಗಳನ್ನು ಪಾಲಿಸಿ ಅಗತ್ಯವಿರುವ ಎಲ್ಲಾ ಅನುಮತಿಯನ್ನು ಪಡೆದು ಭೂ ಖರೀದಿಗೆ (Land Purchase) ಮುಂದಾಗಬೇಕು. ಇಲ್ಲವಾದರೆ ಭೂಮಿ ಖರೀದಿಸಿದ ಬಳಿಕ ಸಮಸ್ಯೆಗೆ ಸಿಲುಕಿಕೊಳ್ಳುವ ಪ್ರಸಂಗ ಹೆಚ್ಚಾಗಿರುತ್ತದೆ. ಹೀಗೆ ನೀವೇನಾದರೂ ಬಾರಿ ಪ್ರಸಿದ್ಧಿ ಪಡೆದಿರುವಂತಹ ಲೇಔಟ್ಗಳಲ್ಲಿ ಸೈಟನ್ನು ಖರೀದಿ (Purchasing site in layout) ಮಾಡಲು ಯೋಚಿಸುತ್ತಿದ್ದೀರಾ? ಹಾಗಾದ್ರೆ ಭೂಮಿಯನ್ನು ಖರೀದಿಸುವ ಮುನ್ನ ಈ ಎಲ್ಲಾ ಅನುಮತಿ ಇದೆಯೇ ಎಂಬುದನ್ನು ಮೊದಲು ಪರಿಶೀಲಿಸಿ.

ಕೃಷಿ ಭೂಮಿಯಲ್ಲಿ ಗೃಹ ನಿರ್ಮಾಣ ಮಾಡುವಂತಿಲ್ಲ:

ಕಾನೂನಿನ ಆದೇಶದ ಪ್ರಕಾರ ಕೃಷಿ ಭೂಮಿಯಲ್ಲಿ (Agricultural Land) ಯಾವುದೇ ಕಾರಣಕ್ಕೂ ಸೈಟು ಅಥವಾ ಗೃಹ ನಿರ್ಮಾಣ ಮಾಡಲು ಸಾಧ್ಯವಿಲ್ಲ, ಈ ನಿಯಮ ರಾಜ್ಯದಿಂದ ರಾಜ್ಯಕ್ಕೆ ಬದಲಾವಣೆ ಆಗುತ್ತದೆ. ಕೆಲ ರಾಜ್ಯಗಳಲ್ಲಿ ಫಲವತ್ತಾದ ಕೃಷಿ ಭೂಮಿಯಲ್ಲಿ ಗೃಹ ನಿರ್ಮಾಣ (House Construction) ಮಾಡಲು ಅನುಮತಿ ನೀಡಿದರೆ, ಕೆಲ ರಾಜ್ಯಗಳಲ್ಲಿ ಇದಕ್ಕೆ ಒಪ್ಪಿಗೆ ಸಿಗುವುದಿಲ್ಲ. ಅದರಂತೆ ಕರ್ನಾಟಕ ರಾಜ್ಯದಲ್ಲಿ ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸಲು ಅನೇಕರ ಅನುಮತಿಯನ್ನು ಪಡೆಯಬೇಕಾಗುತ್ತದೆ.

ಲೇಔಟ್ ನಿರ್ಮಿಸಲು ಕೆಪಿಟಿಸಿ ಯೋಜನಾ ಪ್ರಾಧಿಕಾರದ ಅನುಮತಿ ಅಗತ್ಯ:

 

advertisement

Image Source: Nimbus Agro Farms

 

ಯೋಜನಾ ಪ್ರಾಧಿಕಾರ ಮಾಸ್ಟರ್ ಪ್ಲಾನ್ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿ ಭೂ ಪರಿವರ್ತನೆ ಮತ್ತು ಭೂ ಬಳಕೆ ಸಂಬಂಧಿಸಿದ ಕಾನೂನುಗಳನ್ನು ವಿಶ್ಲೇಸಿರುವ ಹೈಕೋರ್ಟ್, ‘ಕರ್ನಾಟಕ ಭೂ ಕಂದಾಯ ಕಾಯ್ದೆ (Land Revenue Act) ಅಡಿಯಲ್ಲಿ ಕೃಷಿ ಭೂಮಿಯನ್ನು ಕೃಷಿಯೇತರ (NA) ಉದ್ದೇಶಗಳಿಗೆ ಪರಿವರ್ತಿಸಿದ ನಂತರ ಕರ್ನಾಟಕ ಪಟ್ಟಣ ಮತ್ತು ಗ್ರಾಮ ಯೋಜನೆ ಕೆ ಟಿ ಸಿ ಪಿ ಕಾಯ್ದೆ 1961ರ ಅಡಿ ಸಂಬಂಧಿಸಿದ ಯೋಜನಾ ಪ್ರಾಧಿಕಾರದಿಂದಲೂ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು’ ಎಂದು ಆದೇಶಿಸಿದೆ.

ಜಿಲ್ಲಾಧಿಕಾರಿಯಿಂದ ಒಪ್ಪಿಗೆ ದೊರೆತರೆ ಮಾತ್ರ ಭೂ ಪರಿವರ್ತನೆ ಸಾಧ್ಯ:

ಕರ್ನಾಟಕ ರಾಜ್ಯ ಮಾಂಡವ್ಯ ಗೃಹ ನಿರ್ಮಾಣ ಸಹಕಾರ ಸಂಘ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ (Justice M Naga Prasanna) ಏಕ ಸದಸ್ಯ ಪೀಠ ಈ ತೀರ್ಪನ್ನು ನೀಡಿದ್ದು, ಆದೇಶದಲ್ಲಿ ‘ಯೋಜನಾ ಪ್ರಾಧಿಕಾರಗಳ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿ ಕೃಷಿ ಭೂಮಿಯನ್ನು ಇತರ ಉದ್ದೇಶಗಳಿಗೆ ಬಳಸಲು ಕರ್ನಾಟಕ ಭೂ ಕಂದಾಯ ಕಾಯ್ದೆ 1964, ಸೆಕ್ಷನ್ 95ರ ಅಡಿಯಲ್ಲಿ ಜಿಲ್ಲಾಧಿಕಾರಿಯಿಂದ ಭೂ ಪರಿವರ್ತನೆಗೆ ಅನುಮತಿ ಪಡೆದುಕೊಂಡಂತೆ, ಕೆ ಟಿ ಸಿ ಪಿ ಕಾಯ್ದೆಯ ಸೆಕ್ಷನ್ 14(ಎ) ಅಡಿಯಲ್ಲೂ ಅನುಮತಿ ಪಡೆದುಕೊಳ್ಳಬೇಕು.

ಜಿಲ್ಲಾಧಿಕಾರಿಯಿಂದ ಭೂ ಪರಿವರ್ತನೆಗೆ ಅನುಮತಿ ಪಡೆದುಕೊಂಡ ತಕ್ಷಣ ಕೆಪಿಸಿಪಿ ಕಾಯ್ದೆಯ ಸೆಕ್ಷನ್ 14(ಎ) ಅಡಿಯಲ್ಲಿಯೂ ಭೂ ಬಳಕೆಯ ಬದಲಾವಣೆಗೆ ಅನುಮತಿ ಸಿಕ್ಕಿದೆ ಎಂದರ್ಥವಲ್ಲ. ಬದಲಿಗೆ ಭೂಮಿ ಇನ್ನೂ ಯೋಜನಾ ಪ್ರಾಧಿಕಾರ ಮಾಸ್ಟರ್ ಪ್ಲಾನ್ ವ್ಯಾಪ್ತಿಗೆ ಒಳಪಟ್ಟಿದೆ ಎಂದರ್ಥ. ಹೀಗಾಗಿ ಜಿಲ್ಲಾಧಿಕಾರಿಯಿಂದ ಭೂ ಪರಿವರ್ತನೆಗೆ ಅನುಮೋದನೆ ಸಿಕ್ಕಿದರೂ, ಸಂಬಂಧಿತ ಸ್ಥಳೀಯ ಪ್ರಾಧಿಕಾರದಿಂದ ಅನುಮತಿ (Permission of Local Authority) ಪಡೆಯುವುದು ಕಡ್ಡಾಯ’ ಎಂಬ ತೀರ್ಪನ್ನು ನೀಡಿದ್ದಾರೆ.

advertisement

Leave A Reply

Your email address will not be published.