Karnataka Times
Trending Stories, Viral News, Gossips & Everything in Kannada

Fixed Deposit: SBI ಬ್ಯಾಂಕ್ ಗ್ರಾಹಕರಿಗೆ ಸಿಹಿಸುದ್ದಿ, FD ಮೇಲಿನ ಬಡ್ಡಿದರ ಹೆಚ್ಚಳ!

advertisement

ನಮ್ಮ ಭಾರತ ದೇಶದ ಅತ್ಯಂತ ದೊಡ್ಡ ಮಟ್ಟದ ಗ್ರಾಹಕರನ್ನು ಹೊಂದಿರುವಂತಹ ಅತ್ಯಂತ ದೊಡ್ಡ ಸರ್ಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮೇ 15ರಿಂದ ಜಾರಿಯಾಗುವ ರೀತಿಯಲ್ಲಿ ಕೆಲವೊಂದು ಅವಧಿಯ ಫಿಕ್ಸೆಡ್ ಡೆಪಾಸಿಟ್ ಮೇಲೆ ಬಡ್ಡಿ ದರವನ್ನು ಹೆಚ್ಚಿಸಿದೆ ಎಂಬ ಮಾಹಿತಿ ಸಿಕ್ಕಿದೆ. ಎರಡು ಕೋಟಿ ರೂಪಾಯಿಗಳಿಗಿಂತ ಕಡಿಮೆ ಇನ್ವೆಸ್ಟ್ಮೆಂಟ್ ನಲ್ಲಿ ಮಾಡುವಂತಹ ಫಿಕ್ಸಿಡ್ ಡೆಪಾಸಿಟ್ (Fixed Deposit) ಮೇಲೆ ಈ ನಿಯಮವನ್ನು ಜಾರಿಗೆ ತರಲಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 46 ರಿಂದ 179 ದಿನಗಳ ನಡುವಿನ ಅವಧಿಯ ಮೇಲೆ, 180 ರಿಂದ 210 ದಿನಗಳ ಅವಧಿಯ ಮೇಲೆ, 211 ರಿಂದ ಒಂದು ವರ್ಷಗಳ ಅವಧಿಯ ಮೇಲೆ ಬಡ್ಡಿದರವನ್ನು ಹೆಚ್ಚಿಸಿದೆ. 25 ರಿಂದ 75 ಬೇಸಿಸ್ ಪಾಯಿಂಟ್ ಗಳನ್ನ ಈ ಅವಧಿಯಲ್ಲಿ ಹೆಚ್ಚಿಸಲಾಗಿದೆ ಎಂಬುದಾಗಿ ತಿಳಿದುಬಂದಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಫಿಕ್ಸೆಡ್ ಡೆಪಾಸಿಟ್ ಬಡ್ಡಿದರದ ವಿವರ:

 

Image Source: India TV News

 

advertisement

  • ಏಳು ದಿನಗಳಿಂದ 45 ದಿನಗಳ ನಡುವಿನ ಫಿಕ್ಸ್ಡ್ ಡೆಪಾಸಿಟ್ (Fixed Deposit) ಹೂಡಿಕೆ ಮೇಲೆ 3.50 ಪ್ರತಿಶತ ಬಡ್ಡಿದರ.
  • 46 ದಿನಗಳಿಂದ 179 ದಿನಗಳ ಫಿಕ್ಸೆಡ್ ಡೆಪಾಸಿಟ್ ಹೂಡಿಕೆ ಮೇಲೆ 5.50 ಪ್ರತಿಶತ ಬಡ್ಡಿ ದರ
  • 180 ರಿಂದ 210 ದಿನಗಳ ಹೂಡಿಕೆಯ ಮೇಲೆ ಆರು ಪ್ರತಿಶತ ಬಡ್ಡಿದರ.
  • ಒಂದು ವರ್ಷದಿಂದ ಎರಡು ವರ್ಷದ ಒಳಗಿನ ಹೂಡಿಕೆ ಮೇಲೆ 6.80 ಪ್ರತಿಶತ
  • ಎರಡು ವರ್ಷದಿಂದ ಮೂರು ವರ್ಷದ ಒಳಗಿನ ಹೂಡಿಕೆ ಮೇಲೆ ಏಳು ಪ್ರತಿಶತ ಬಡ್ಡಿದರ
  • ಮೂರು ವರ್ಷದಿಂದ ಐದು ವರ್ಷದ ಒಳಗಿನ ಹೂಡಿಕೆ ಮೇಲೆ 6.75 ಪ್ರತಿಶತ ಬಡ್ಡಿದರ
  • 10 ವರ್ಷಗಳವರೆಗಿನ ಹೂಡಿಕೆಯ ಮೇಲೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಮಗೆ 6.50% ಬಡ್ಡಿ ದರವನ್ನು ನಿಮಗೆ ನೀಡುತ್ತದೆ.

ಇವಿಷ್ಟು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಇತ್ತೀಚಿಗಷ್ಟೇ ಜಾರಿಗೆ ತಂದಿರುವಂತಹ ಹೊಸ ಬಡ್ಡಿ ದರದ ಲಿಸ್ಟ್ ಆಗಿದೆ. ಈ ಮೇಲೆ ಉಲ್ಲೇಖಿಸಲಾಗಿರುವಂತಹ ಸಮಯಾವಧಿಗೆ ಸಂಬಂಧಪಟ್ಟಂತೆ ನೀವು ಹಣವನ್ನು ಹೂಡಿಕೆ ಮಾಡಿದರೆ ಅಷ್ಟು ನಿಮಗೆ ಬಡ್ಡಿದರವನ್ನ ರಿಟರ್ನ್ ರೂಪದಲ್ಲಿ ನೀಡಲಾಗುತ್ತದೆ. ಇದರ ಜೊತೆಗೆ ಪ್ರಮುಖವಾಗಿ ತಿಳಿದುಕೊಳ್ಳಬೇಕಾಗಿರುವಂತಹ ಮತ್ತೊಂದು ವಿಚಾರ ಕೂಡ ಇದೆ.

ಸಾಮಾನ್ಯರಿಗಿಂತ ಹಿರಿಯ ನಾಗರಿಕರಿಗೆ ಫಿಕ್ಸೆಡ್ ಡೆಪಾಸಿಟ್ ಮೇಲೆ ಹೆಚ್ಚಿನ ಬಡ್ಡಿ:

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಹಿರಿಯ ನಾಗರಿಕರಿಗೆ ವಿಶೇಷವಾದ ಆಫರ್ ಅನ್ನು ನೀಡುತ್ತದೆ. ಈ ಮೇಲೆ ಉಲ್ಲೇಖಿಸಲಾಗಿರುವಂತಹ ಪ್ರತಿಯೊಂದು ಸಮಯಾವಧಿಯ ಹೂಡಿಕೆ ಮೇಲೆ 0.50 ಪ್ರತಿಶತ ಬಡ್ಡಿಯನ್ನು ಹೆಚ್ಚುವರಿ ಯಾಗಿ ನೀಡುವಂತಹ ಕೆಲಸವನ್ನು ಮಾಡುತ್ತದೆ.

advertisement

Leave A Reply

Your email address will not be published.