Karnataka Times
Trending Stories, Viral News, Gossips & Everything in Kannada

Manaswini Scheme: ಗ್ರಹಲಕ್ಷ್ಮಿ ಯೋಜನೆ ಪಡೆಯುತ್ತಿರುವ ಮಹಿಳೆಯರಿಗೆ ಸಿಹಿ ಸುದ್ದಿ, ಇನ್ಮುಂದೆ ಮಾಸಿಕ 2,000 ಹಣದೊಂದಿಗೆ 800 ಹೆಚ್ಚುವರಿ ಹಣ ಸಿಗಲಿದೆ!

advertisement

ಕರ್ನಾಟಕ ಸರ್ಕಾರವು ಮಹಿಳೆಯರ ಅಭಿವೃದ್ಧಿಯತ್ತ ಹೆಚ್ಚಿನ‌ ಒತ್ತು ನೀಡುತ್ತ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದು, ಇದರಿಂದಾಗಿ ರಾಜ್ಯದ ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ನಡೆಸುತ್ತಿದ್ದಾರೆ. ಕಳೆದ ಕೆಲವು ತಿಂಗಳ ಹಿಂದಷ್ಟೇ, ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗಾಗಿ ಸಾಕಷ್ಟು ಗ್ಯಾರಂಟಿ ಯೋಜನೆಗಳನ್ನು(Guarantee Schemes) ಜಾರಿಗೊಳಿಸಿದ್ದು ಗೃಹಲಕ್ಷ್ಮಿ ಯೋಜನೆಯಂತಹ ಮತ್ತೊಂದು ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಅದುವೇ ಮನಸ್ವಿನಿ ಯೋಜನೆ (Manaswini Scheme), ಇದರಿಂದಾಗಿ ಮಹಿಳೆಯರು ಪ್ರತಿ ತಿಂಗಳು 800 ಹಣವನ್ನು ಪಿಂಚಣಿಯ ರೀತಿ ಪಡೆಯಲಿದ್ದಾರೆ. ಹಾಗಾದ್ರೆ ಈ ಯೋಜನೆಗೆ ಯಾರೆಲ್ಲಾ ಅರ್ಹರು? ಅರ್ಜಿ ಸಲ್ಲಿಸುವುದು ಹೇಗೆ? ಎಂಬ ವಿವರವನ್ನು ಈ ಲೇಖನದ ಮುಖಾಂತರ ತಿಳಿದುಕೊಳ್ಳಿ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ:

 

 

ಕರ್ನಾಟಕ ರಾಜ್ಯ ಸರ್ಕಾರವು ಇತ್ತೀಚಿಗಷ್ಟೇ, ಮನಸ್ವಿನಿ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದ್ದು, ಇದರಿಂದ ರಾಜ್ಯದ ಮಹಿಳೆಯರಿಗೆ ಪ್ರತಿ ತಿಂಗಳು ಪೆನ್ಷನ್ ರೂಪದಲ್ಲಿ 800 ರೂಪಾಯಿ ಹಣವನ್ನು ನೀಡಲಾಗುತ್ತದೆ. ಯೋಜನೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವಂತಹ ಮಹಿಳೆಯರು ಆನ್ಲೈನಲ್ಲಿ ಲಭ್ಯವಿರುವ ಅಫೀಷಿಯಲ್ ವೆಬ್ಸೈಟ್ಗೆ (Official Website) ಭೇಟಿ ನೀಡಿ ಕೇಳಲಾಗುವ ದಾಖಲಾತಿಗಳನ್ನು ಸರಿಯಾದ ಕ್ರಮದಲ್ಲಿ ನಮೂದಿಸುವ ಮೂಲಕ ಮನೆಯಲ್ಲಿ ಕುಳಿತು ಅರ್ಜಿ ಸಲ್ಲಿಸಬಹುದು. ಮಹಿಳೆಯರು ಆಫ್ ಲೈನ್ನಲ್ಲಿಯೂ ಅರ್ಜಿ ಸಲ್ಲಿಸಲು ಅವಕಾಶವಿದ್ದು ನಾಡಕಚೇರಿ ಕೇಂದ್ರಗಳಲ್ಲಿ ಅಥವಾ ಬಾಪೂಜಿ ಸೇವಾ ಕೇಂದ್ರಗಳಲ್ಲಿಯೂ (Bapuji Service Centre) ಅರ್ಜಿ ಸಲ್ಲಿಸಬಹುದು.

advertisement

ಬೇಕಾಗುವ ದಾಖಲಾತಿಗಳು:

ಮನಸ್ವಿನಿ ಯೋಜನೆಗೆ (Manaswini Scheme) ಅರ್ಜಿ ಸಲ್ಲಿಸಲು ಮಹಿಳೆಯರ ಬಳಿ ಕಡ್ಡಾಯವಾಗಿ ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ (Caste Certificate) ಹಾಗೂ ಆದೇಶವಾಹಿಯ ನಕಲು ಪತ್ರಗಳಿರಬೇಕು

ಮನಸ್ವಿನಿ ಯೋಜನೆ ಪಡೆಯಲು ಅರ್ಹತೆ:

ಕರ್ನಾಟಕ ಸರ್ಕಾರವು ಅವಿವಾಹಿತ, ವಿಚ್ಛೇದಿತ ಹಾಗೂ ಬಡ ಮಹಿಳೆಯರಿಗೆ ಪ್ರತಿ ತಿಂಗಳು ಪಿಂಚಣಿಯ ರೂಪದಲ್ಲಿ ಅರ್ಥಿಕ ನೆರವನ್ನು ನೀಡುವ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತಂದಿದ್ದು, 40 ರಿಂದ 64 ವರ್ಷದೊಳಗಿನ ಅವಿವಾಹಿತ ಮಹಿಳೆಯರು ಹಾಗೂ ಪತಿಯಿಂದ ದೂರಾಗಿ ಒಬ್ಬಂಟಿಯಾಗಿ ಜೀವನ ನಡೆಸುತ್ತಿರುವ ಮಹಿಳೆಯರು ಮನಸ್ವಿನಿ ಯೋಜನೆಗೆ (Manaswini Scheme) ಅರ್ಹರಾಗಿರುತ್ತಾರೆ ಹಾಗೂ ಯಾವ ಮಹಿಳೆಯರು ಬಡತನದ ರೇಖೆಗಿಂತ ಕೆಳಗಿರುತ್ತಾರೋ ಅವರು ಸಹ ಮನಸ್ವಿನಿ ಯೋಜನೆಗೆ ಅರ್ಜಿ ಸಲ್ಲಿಸಿ ಆರ್ಥಿಕ ನೆರವನ್ನು ಪಡೆದುಕೊಳ್ಳಬಹುದು.

advertisement

Leave A Reply

Your email address will not be published.