Karnataka Times
Trending Stories, Viral News, Gossips & Everything in Kannada

Highest Sold Car: ವ್ಯಾಗನಾರ್, ನೆಕ್ಸಾನ್ ಅಥವಾ ಬ್ರೆಜಾ ಅಲ್ಲ, ಇದು ದೇಶದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರ್! ಮುಗಿಬಿದ್ದ ಬಡವರು

advertisement

ಇತ್ತೀಚಿನ ದಿನಗಳಲ್ಲಿ ಜನರಿಗೆ ಕಾರ್ ಮೇಲಿನ ಕ್ರೇಸ್ ಹೆಚ್ಚಾಗುತ್ತಿದೆ ಅವರ ಇಷ್ಟಾರ್ಥಗಳಿಗೆ ಹಾಗೂ ಅನುಕೂಲಕ್ಕೆ ತಕ್ಕ ಹಾಗೆ ಕಾರ್ ತಯಾರಿಕಾ ಕಂಪನಿಗಳು (Car Manufacturing Companies) ನೂತನ ಆವಿಷ್ಕಾರಗಳನ್ನು ಮಾಡಿ ವಿಭಿನ್ನವಾದ ಫೀಚರ್ಸ್ ಗಳನ್ನು ಅಳವಡಿಸಿ ವೆರೈಟಿ ಕಾರುಗಳನ್ನು ಪ್ರತಿದಿನ ಮಾರುಕಟ್ಟೆಗೆ ಪರಿಚಯಿಸುತ್ತಲಿರುತ್ತಾರೆ.

ಅದರಂತೆ ಮಾರುತಿ ಸುಜುಕಿ ವ್ಯಾಗನಾರ್, ಮಾರುತಿ ಸುಜುಕಿ ಬ್ರೆಜಾ ಅಥವಾ ಟಾಟಾ ನೆಕ್ಸಾನ್ ಕಾರುಗಳಿಗೆ ಸೆಡ್ಡು ಹೊಡೆಯುವಂತಹ ಅತ್ಯಾಕರ್ಷಕ ವೈಶಿಷ್ಟ್ಯತೆಗಳು (Amazing Features) ಹಾಗೂ ಮೈಲೇಜ್ ಸಾಮರ್ಥ್ಯವನ್ನು ಹೊಂದಿರುವ ಈ ಕಾರ್ ದೇಶದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಗ್ರ ಸ್ಥಾನವನ್ನು ಅಲಂಕರಿಸಿದೆ. ಅಷ್ಟಕ್ಕೂ ಈ ಕಾರ್ ಯಾವುದು? ಯಾವ ಕಂಪನಿಯದ್ದು? ಇದರ ವೈಶಿಷ್ಟ್ಯತೆಗಳೇನು ಎಂಬುದನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

ಭಾರತದಲ್ಲೇ ಅತಿ ಹೆಚ್ಚು ಮಾರಾಟವಾದ ಕಾರಿದು:

ಭಾರತೀಯ ಆಟೋಮೊಬೈಲ್ ಮಾರುಕಟ್ಟೆ ಪ್ರತಿದಿನವೂ ಹಲವು ಸೆಗ್ಮೆಂಟ್ಗಳ (Many Segments) ಕಾರಿನಿಂದ ವಿಸ್ತಾರ ಗೊಳ್ಳುತ್ತಲೇ ಇರುತ್ತದೆ. ಅದರಂತೆ ಜನರು ಕೂಡ ನೂತನ ಆವಿಷ್ಕಾರಗಳನ್ನು ಅಳವಡಿಸಿ ತಯಾರು ಮಾಡಲಾಗಿರುವ ಕಾರಿನತ್ತ ಹೆಚ್ಚು ಆಕರ್ಷಿತರಾಗಿ ಖರೀದಿ ಮಾಡಲು ಮುಂದಾಗುತ್ತಿದ್ದು, ಕಳೆದ ಏಪ್ರಿಲ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಟಾಟಾ ಪಂಚ್ (Tata Punch) ಕಾರು ಅಗ್ರಸ್ಥಾನವನ್ನು ಅಲಂಕರಿಸಿದೆ.

 

Image Source: CarWale

 

advertisement

ಒಂದು ತಿಂಗಳಲ್ಲಿ 19000 ಕಾರುಗಳ ಮಾರಾಟ:

ಟಾಟಾ ಕಂಪನಿ ಸಾಮಾನ್ಯ ಗ್ರಾಹಕರ ಕೈಗೆಟಿಕುವ ಬೆಲೆಯಲ್ಲಿ ನೂತನ ವೈಶಿಷ್ಟ್ಯಗಳನ್ನು ಅಳವಡಿಸಿ ಮಾರುಕಟ್ಟೆಗೆ ಪರಿಚಯಿಸಿರುವ ಟಾಟಾ ಪಂಚ್ (Tata Punch) ಕಾರು ಕಳೆದ ಏಪ್ರಿಲ್ ತಿಂಗಳಿನಲ್ಲಿ 19,158 ಕಾರುಗಳು ಮಾರಾಟವಾಗುವ ಮೂಲಕ ದೇಶದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗ್ರಾಹಕರಿಗೆ ಅನುಕೂಲವಾಗುವಂತಹ ಸೀಟುಗಳು ವಿಶಾಲವಾದ ಒಳಗಿನ ಸ್ಥಳ.

 

Image Source: CarWale

 

ಅತ್ಯುತ್ತಮ ವಿನ್ಯಾಸ ಗರಿಷ್ಠ ಸುರಕ್ಷತೆ ಹಾಗೂ ಸಾಮಾನ್ಯ ಗ್ರಾಹಕರ ಕೈಗೆಟಾಕುವಂತಹ ದರದಲ್ಲಿ ಲಭ್ಯವಿರುವ ಟಾಟಾ ಪಂಚ್ (Tata Punch) ಮಾರುತಿ ವ್ಯಾಗನಾರ್ ಮಾರುತಿ ಬ್ರೆಜಾ ಹಾಗೂ ಟಾಟಾ ನೆಕ್ಸಾನ್ (Tata Nexon)ನಂತಹ ಕಾರುಗಳಿಗೆ ನೇರವಾದ ಸ್ಪರ್ಧೆ ನೀಡಿದೆ. ಜನರು 6,13,000 ಹಣ ನೀಡಿ ಟಾಟಾ ಪಂಚ್ ಕಾರನ್ನು ಖರೀದಿ ಮಾಡಲು ಮುಂದಾಗುತ್ತಿದ್ದಾರೆ.

ಇನ್ನುಳಿದ ಕಾರುಗಳಿಗೆ ಯಾವ ಸ್ಥಾನ?

ಅದರಂತೆ 5.54 ಲಕ್ಷ ಬೆಲೆಬಾಳುವ ಮಾರುತಿ ಸುಜುಕಿ ಕಂಪನಿಯ ವ್ಯಾಗನಾರ್ ಕಾರು (WagonR Car) 17,850 ಯೂನಿಟ್ ಗಳಲ್ಲಿ ಮಾರಾಟವಾಗುವ ಮೂಲಕ ಎರಡನೆಯ ಸ್ಥಾನವನ್ನು ಅಲಂಕರಿಸಿದೆ. ಹಾಗೂ 8.34 ಲಕ್ಷ ಬೆಲೆಬಾಳುವ ಮಾರುತಿ ಬ್ರಿಜ್ಜಾ (Maruti Brezza) 17,113 ಕಾರುಗಳು ಮಾರಾಟವಾಗುವ ಮೂಲಕ ಮೂರನೇ ಸ್ಥಾನವನ್ನು ಅಲಂಕರಿಸಿದೆ. ಹಾಗೂ ನಾಲ್ಕನೇ ಸ್ಥಾನವನ್ನು ಮಾರುತಿ ಸುಜುಕಿ ಡಿಸೈನರ್ ಕಾರು ಪಡೆದುಕೊಂಡರೆ, 5 ನೇ ಸ್ಥಾನ ಹುಂಡೈ ಕ್ರೆಟಾ (Hyundai Creta)ಗೆ ತಲುಪಿದೆ.

advertisement

Leave A Reply

Your email address will not be published.