Karnataka Times
Trending Stories, Viral News, Gossips & Everything in Kannada

Most Selling Cars: ಭಾರತದಲ್ಲಿ ಅತಿಹೆಚ್ಚು ಮಾರಾಟವಾಗುತ್ತಿದೆ ಈ 3 ಕಾರುಗಳು! ಒಂದೇ ತಿಂಗಳಲ್ಲಿ ಲಕ್ಷಕ್ಕೂ ಹೆಚ್ಚಿನ ಖರೀದಿ! ಕಡಿಮೆ ಬೆಲೆ

advertisement

Most Selling Cars: ಎಲೆಕ್ಟ್ರಿಕ್ ವಾಹನಗಳ ಪಟ್ಟಿಯಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವಂತಹ ಭಾರತದ 3 ಬ್ರಾಂಡ್ ಕಾರುಗಳ ಕುರಿತು ನಾವಿವತ್ತು ಕೆಲ ಆಸಕ್ತಿಕರ ಮಾಹಿತಿಯನ್ನು ನಿಮ್ಮ ಮುಂದಿಡಲಿದ್ದೇವೆ. ಹೌದು ಗೆಳೆಯರೇ ಕಳೆದ ಮಾರ್ಚ್ ಒಂದೇ ತಿಂಗಳಲ್ಲಿ ಬರೋಬ್ಬರಿ 1,56,294ಕ್ಕೂ ಅಧಿಕ ಮಾರಾಟವಾದ ಭಾರತೀಯ ಕಾರುಗಳಿವು. ಹಾಗಾದ್ರೆ ಆ ಕಾರುಗಳು ಯಾವ್ಯಾವು? ಏನೇನೆಲ್ಲ ಪ್ರೀಮಿಯಂ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ? ಎಂಬ ವಿವರವನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

Tata Punch:

 

Image Source: CarWale

 

ಇತರೆ ಕಾರು ತಯಾರಿಕಾ ಬ್ರಾಂಡ್ ಕಂಪನಿಗಳಿಗೆ ತಕ್ಕನಾದ ಸ್ಪರ್ಧೆ ನೀಡುತ್ತಾ, ಅದ್ಬುತ ವೈಶಿಷ್ಟತೆಗಳುಳ್ಳ ಕಾರುಗಳನ್ನು ಮಾರುಕಟ್ಟೆಗೆ ತರುವಲ್ಲಿ ಯಶಸ್ವಿಯಾಗಿ, ಕಾರ್ ಪ್ರಿಯರನ್ನು ಸೆಳೆಯುತ್ತಿರುವ ಟಾಟಾ ಕಂಪನಿ ಕಳೆದ ಕೆಲ ತಿಂಗಳ ಹಿಂದಷ್ಟೇ ಟಾಟಾ ಪಂಚ್ (Tata Punch) ಮತ್ತು ಎಲೆಕ್ಟ್ರಿಕ್ ಅವತಾರ್ ಟಾಟಾ ಪಂಚ್ (Electric Avatar Tata Punch) ಕಾರನ್ನು ಒಟ್ಟಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ತನ್ನ ಅತ್ಯಾಕರ್ಷಕ ಬಣ್ಣ ಹಾಗೂ ವಿನ್ಯಾಸಗಳಿಂದಾಗಿ ಜನರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾದ ಟಾಟಾ ಪಂಚ್ ಮಾರ್ಚ್ ತಿಂಗಳಿನಲ್ಲಿ ಉತ್ತಮವಾಗಿ ಮಾರಾಟವಾದಂತಹ ಭಾರತೀಯ ಕಾರು ಎಂಬ ಪಟ್ಟವನ್ನು ಪಡೆದುಕೊಂಡಿದೆ. ಅಷ್ಟೇ ಅಲ್ಲದೆ ಕಳೆದ ಒಂದೇ ತಿಂಗಳಿನಲ್ಲಿ ಬರೋಬ್ಬರಿ 17,547 ಯೂನಿಟ್ಸ್ ಗಳು ಮಾರಾಟವಾಗಿವೆ.

Hyundai Creta:

 

advertisement

Image Source: CarWale

 

ಅದ್ಭುತವಾದ ಕಾರುಗಳನ್ನು ಮಾರುಕಟ್ಟೆಗಿಳಿಸುತ್ತಾ ಖರೀದಿದಾರರ ವರ್ಗದಲ್ಲಿ ಭಾರಿ ಜನಪ್ರಿಯತೆ ಪಡೆದುಕೊಂಡಿರುವ ಹುಂಡೈ ಕಂಪನಿ (Hyundai Company)ಯು ಇತ್ತೀಚಿಗಷ್ಟೇ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಹುಂಡೈ ಕ್ರೆಟಾ (Hyundai Creta) ಕಾರನ್ನು ಪರಿಚಯಿಸಿತ್ತು. ಈ ಕಾರಿನ ಅದ್ಭುತ ವೈಶಿಷ್ಟ್ಯತೆಗಳು ಜನರಿಗೆ ಬಹಳ ಇಷ್ಟವಾಗಿ ಮಾರ್ಚ್ ತಿಂಗಳಿನಲ್ಲಿ ಬರೋಬ್ಬರಿ 16,458 ಯೂನಿಟ್ಗಳಲ್ಲಿ ಮಾರಾಟವಾಗಿದೆ. ಜೊತೆಗೆ ಅತಿ ಹೆಚ್ಚು ಮಾರಾಟವಾದ ಭಾರತೀಯ ಕಾರುಗಳ ಪಟ್ಟಿ ಎರಡನೇ ಸ್ಥಾನವನ್ನು ಅಲಂಕರಿಸಿದೆ.

Maruti Wagon R:

 

Image Source: CarWale

 

ಭಾರತದ ಹೆಸರಾಂತ ಕಾರು ತಯಾರಿಕಾ ಕಂಪನಿಗಳಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿರುವ ಮಾರುತಿ ಸುಜುಕಿ ಕಂಪನಿಯ, ಮಾರುತಿ ವ್ಯಾಗನ್ R (Maruti Wagon R) ಕಾರು ಕಳೆದ ಮಾರ್ಚ್ 2024 ರಂದು ಅತಿ ಹೆಚ್ಚು ಮಾರಾಟವಾದ ಭಾರತೀಯ ಕಾರುಗಳ ಪಟ್ಟಿ ಮೂರನೇ ಸ್ಥಾನವನ್ನು ಅಲಂಕರಿಸಿದ್ದು, ವ್ಯಾಗನ್R ಒಟ್ಟು 16,368 ಕಾರುಗಳು ಮಾರಾಟವಾಗಿದೆ.

advertisement

Leave A Reply

Your email address will not be published.