Karnataka Times
Trending Stories, Viral News, Gossips & Everything in Kannada

Prajwal Revanna: ದೊಡ್ಡ ನಿರ್ಧಾರ ತಗೆದುಕೊಂಡ ಪ್ರಜ್ವಲ್ ರೇವಣ್ಣ ಕುಟುಂಬ! ಕೇಸ್ ನಲ್ಲಿ ಹೊಸ ಟ್ವಿಸ್ಟ್.

advertisement

ಇತ್ತೀಚಿನ ದಿನಗಳಲ್ಲಿ ಕೇವಲ ರಾಜ್ಯದ ಮೀಡಿಯಾಗಳಲ್ಲಿ ಮಾತ್ರವಲ್ಲದೆ ನ್ಯಾಷನಲ್ ಮೀಡಿಯಾ ಗಳಲ್ಲಿ ಕೂಡ ಓಡಾಡುತ್ತಿರುವಂತಹ ಒಂದೇ ಒಂದು ಪ್ರಕರಣ ಅಂದ್ರೆ ಅದು ಪ್ರಜ್ವಲ್ ರೇವಣ್ಣ (Prajwal Revanna) ಅವರ ವಿಡಿಯೋ ಕೇಸ್. ಈ ಪ್ರಕರಣ ಹೊರಬಂದ ನಂತರ ಅವರು ಲೋಕಸಭಾ ಚುನಾವಣೆಯ ಮತದಾನ ಮಾಡಿ ನೇರವಾಗಿ ವಿದೇಶಕ್ಕೆ ಓಡಿಹೋಗಿದ್ದು ಎನ್ನುವುದಾಗಿ ಸುದ್ದಿ ಕೇಳಿ ಬಂದಿದ್ದು ಈಗ ಮತ್ತೆ ಅವರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಗಳು ಹೊರ ಬರುತ್ತಿದ್ದು ಬನ್ನಿ ಅದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ಪಡೆದು ಕೊಳ್ಳೋಣ.

Sit ತನಿಖೆಯನ್ನು ಎದುರಿಸಬೇಕು ಎನ್ನುವುದಾಗಿ ಕುಟುಂಬದ ಕಡೆಯಿಂದ ಒತ್ತಡ ಹೆಚ್ಚಾಗಿರುವ ಬೆನ್ನಲ್ಲಿ ಪ್ರಜ್ವಲ್ ರೇವಣ್ಣ (Prajwal Revanna) ತನಿಖೆಯನ್ನು ಎದುರಿಸುವುದಕ್ಕಾಗಿ ಬೆಂಗಳೂರಿಗೆ ಬರಬೇಕಾಗಿರುವ ಅವಶ್ಯಕತೆಯನ್ನು ಹೊಂದಿದ್ದಾರೆ. ಜಾಮೀನು ಸಿಗಲಿ ಸಿಗದೇ ಇರಲಿ ಪ್ರಜ್ವಲ್ ರೇವಣ್ಣ ಎಸ್ಐಟಿ ತನಿಖೆಗೆ ಹಾಜರಾಗಬೇಕಾಗಿರುವುದು ಕಡ್ಡಾಯವಾಗಿದೆ. ರಾಜ ತಾಂತ್ರಿಕ ಪಾಸ್ಪೋರ್ಟ್ ಅನ್ನು ಪಡೆದುಕೊಂಡು ಪ್ರಜ್ವಲ್ ರೇವಣ್ಣ ಜರ್ಮನಿ ದೇಶಕ್ಕೆ ಹೋಗಿದ್ದರು.

 

Image Source: IndiaToday

 

ಈ ಸಂದರ್ಭದಲ್ಲಿ ನಂತರ ರೇವಣ್ಣ ಅವರ ವಿರುದ್ಧ ಸಂತ್ರಸ್ತೆ ಗಂಭೀರ ಪ್ರಕರಣವನ್ನು ದಾಖಲು ಮಾಡಿದರು. ಹೆಚ್ಚಿದ ಒತ್ತಡದಿಂದಾಗಿ ಸರ್ಕಾರ ಈ ಪ್ರಕರಣವನ್ನು ಈಗ ಗಂಭೀರವಾಗಿ ಪರಿಗಣಿಸಿದ್ದು ವಿಚಾರಣೆಗಾಗಿ ಎಸ್ಐಟಿ ತನಿಖೆಯನ್ನು ರಚಿಸಿದೆ.

advertisement

ಇದರ ಬೆನ್ನಲ್ಲೇ ಈಗ ಕುಟುಂಬಕ್ಕೆ ಮತ್ತೊಂದು ಆಘಾತ ಕೂಡ ತಲುಪಿದೆ ಎಂಬುದಾಗಿ ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತಹ ಒಬ್ಬರನ್ನು ಅಪಹರಣ ಮಾಡಿರುವಂತಹ ಆರೋಪದ ಮೇಲೆ ಪ್ರಜ್ವಲ್ ರೇವಣ್ಣ (Prajwal Revanna) ಅವರ ತಂದೆ ಆಗಿರುವಂತಹ ರೇವಣ್ಣ ಅವರನ್ನು ಬಂಧಿಸಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ಈಗ ಎಲ್ಲರೂ ಕೂಡ ಕುತೂಹಲದಿಂದ ಕಾಯುತ್ತಿರುವಂತಹ ಪ್ರಶ್ನೆ ಅಂದರೆ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಬಂದ ನಂತರ ಎಸ್ಐಟಿ ಅವರನ್ನ ವಿಚಾರಣೆಗೆ ಒಳಪಡಿಸುತ್ತದೆಯೋ ಅಥವಾ ಬಂಧನ ಮಾಡುತ್ತದೆಯೋ ಎಂಬುದನ್ನು ಕಾದು ನೋಡಬೇಕಾಗಿದೆ.

 

Image Source: Business Standard

 

ಸದ್ಯಕ್ಕೆ ರಾಷ್ಟ್ರ ವ್ಯಾಪಿಯಾಗಿ ಪ್ರಜ್ವಲ್ ರೇವಣ್ಣ (Prajwal Revanna) ಅವರ ವಿರುದ್ಧ ವಿಡಿಯೋ ಕೇಸ್ ಪ್ರಕರಣ ಸಾಕಷ್ಟು ದೊಡ್ಡ ಮಟ್ಟದ ಗಂಭೀರ ಪ್ರಕರಣದ ರೂಪದಲ್ಲಿ ನ್ಯಾಷನಲ್ ನ್ಯೂಸ್ ಆಗಿದೆ. ಹೀಗಾಗಿ ಈ ಬಾರಿ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಆರೋಪ ಸಾಬೀತಾದಲ್ಲಿ ದೊಡ್ಡ ಮಟ್ಟದ ಶಿಕ್ಷೆಯನ್ನು ವಿಧಿಸುವಂತಹ ಸಾಧ್ಯತೆ ಇದೆ. ಯಾಕೆಂದ್ರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಈ ಪ್ರಕರಣದ ಕುರಿತಂತೆ ಸಾಕಷ್ಟು ಜಿದ್ದಾಜಿದ್ದಿನ ಮಾತುಕತೆಗಳು ಕೂಡ ಈಗಾಗಲೇ ಬಹಿರಂಗವಾಗಿ ನಡೆದಿರುವುದನ್ನು ಕೂಡ ನೀವು ಗಮನಿಸಬಹುದಾಗಿದೆ.

ಒಟ್ಟಾರೆಯಾಗಿ ಮುಂದಿನ ಕೆಲವು ದಿನಗಳಲ್ಲಿ ಪ್ರಜ್ವಲ್ ರೇವಣ್ಣ ಅವರ ಈ ವಿಡಿಯೋಗೆ ಪ್ರಕರಣ ಯಾವ ತಿರುವನ್ನು ಪಡೆದುಕೊಳ್ಳುತ್ತದೆ ಎನ್ನುವುದನ್ನು ನೋಡುವುದಕ್ಕೆ ಇಡೀ ದೇಶ ಹಾಗೂ ದೇಶದ ಜನರು ಕಾತರರಾಗಿ ಕಾಯುತ್ತಿದ್ದಾರೆ.

advertisement

Leave A Reply

Your email address will not be published.