Karnataka Times
Trending Stories, Viral News, Gossips & Everything in Kannada

Rental House: ಬಾಡಿಗೆ ಮನೆಗೆ ಅಡ್ವಾನ್ಸ್ ಹಣ ಕೊಡುವವರಿಗೆ ಹೊಸ ರೂಲ್ಸ್! ಇಡೀ ದೇಶಕ್ಕೆ ನಿಯಮ ಬದಲು

advertisement

ಇತ್ತೀಚಿನ ದಿನದಲ್ಲಿ ಸ್ವಂತ ಮನೆ ವಾಸ್ತವ್ಯ ಮಾಡುವುದಕ್ಕಿಂತಲೂ ಬಾಡಿಗೆ ಮನೆಯಲ್ಲಿ ಜೀವನ ಕಂಡು ಕೊಂಡವರ ಪ್ರಮಾಣ ಅಧಿಕವಾಗಿ ಇದೆ ಎಂದು ಹೇಳಬಹುದು.ಬಾಡಿಗೆ ಮನೆಯಲ್ಲಿ ವಾಸ್ತವ್ಯ ಇರಬೇಕಾದರೂ ಮನೆ ಬಾಡಿಗೆಗೆ ಮಾತ್ರವಲ್ಲದೆ ಅಡ್ವಾನ್ಸ್ ಹಣ ಕೂಡ ನೀಡಬೇಕು. ಬಹುತೇಕ ಕಡೆಗಳಲ್ಲಿ ಅಡ್ವಾನ್ಸ್ ಹಣ (Advance Payment) ಅಧಿಕ ಪಡೆಯುವವರ ಪ್ರಮಾಣ ಅಧಿಕ ಇದೆ ಎನ್ನಬಹುದು. ಆದರೆ ಇದಕ್ಕೆ ಕೂಡ ಕಾನೂನಿನ ನಿಯಮ ಇದ್ದು ಈ ಬಗ್ಗೆ ಜನರಲ್ಲಿ ಅರಿವಿನ ಕೊರತೆ ಇದೆ. ಹಾಗಾಗಿ ಬಾಡಿಗೆ ಮನೆ ವಾಸ್ತವ್ಯ ಇದ್ದವರು ಇನ್ನು ಮುಂದೆ ಬಾಡಿಗೆ ಮನೆಗೆ (Rental House) ಹೋಗ ಬೇಕು ಎಂದವರು ಈ ಮಾಹಿತಿ ಪೂರ್ತಿ ಓದಿ.

ನಗರ ವಾಸ್ತವ್ಯ:

ಬಾಡಿಗೆ ಮನೆಯಲ್ಲಿ (Rental House) ವಾಸ್ತವ್ಯ ಹೊಂದಿರುವವರ ಸಾಲಿನಲ್ಲಿ ಗ್ರಾಮಾಂತರ ಭಾಗಕ್ಕಿಂತಲೂ ನಗರ ಭಾಗದಲ್ಲಿ ಅಧಿಕ ವಾಸ್ತವ್ಯ ಇದೆ ಎನ್ನಬಹುದು. ಬೆಂಗಳೂರು ಸೇರಿದಂತೆ ಅನೇಕ ನಗರ ಭಾಗದಲ್ಲಿ ಸರಿಯಾದ ವ್ಯವಸ್ಥೆ ಇಲ್ಲದಿದ್ದರೂ ಕೂಡ ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಾರೆ. ಶಿಕ್ಷಣ, ಉದ್ಯಮ, ಉದ್ಯೋಗ ಇತರ ಕಾರಣಕ್ಕಾಗಿ ಪಟ್ಟಣಕ್ಕೆ ವಲಸೆ ಬರುವವರ ಪ್ರಮಾಣ ಅಧಿಕ ಇದ್ದು ವಲಸೆಗಾರರ ಸಂಖ್ಯೆ ಹೆಚ್ಚಾದಂತೆ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಮಾಡುವವರು ಅಧಿಕವಾಗಿ ಇದ್ದಾರೆ.

ಅಧಿಕ ಬಾಡಿಗೆ:

 

Image Source: MagicBricks

 

ಬಾಡಿಗೆ ನಿವಾಸಿಗಳ ಸಂಖ್ಯೆ ಹೆಚ್ಚಾದಂತೆ ಬಾಡಿಗೆ ನೀಡಿ ಅದರಿಂದ ಆದಾಯ ಪಡೆಯಬೇಕು ಎಂದು ಬಯಸುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಹಾಗಾಗಿ ತುಂಬಾ ಹೆಚ್ಚು ಸೌಕರ್ಯ ಇದ್ದರೆ ಅದಕ್ಕೆ ಬಾಡಿಗೆ ಕೂಡ ಅಧಿಕ ನೀಡಬೇಕಾಗಿ ಬರಲಿದೆ. ಹಾಗಾಗಿ ಬಾಡಿಗೆ ಮನೆ ಕೊಳ್ಳಬೇಕು ಎಂದವರು ಅನಗತ್ಯ ಅಧಿಕ ಹೊರೆ ಸಹ ಹೊರಬೇಕಿದೆ ಆದರೆ ಬಾಡಿಗೆ ನೀಡುವ ಮುನ್ನ ಬಾಡಿಗೆ ಪಡೆಯುವವರು ಅಧಿಕ ಆಗಿದ್ದಾರೆ ಎಂದು ಅಧಿಕ ಅಡ್ವಾನ್ಸ್ ಹಣ ಪಡೆದಿದ್ದರೆ ನೀವು ಕೂಡ ಕಾನೂನಾತ್ಮಕವಾಗಿ ಹಕ್ಕು ಚಲಾಯಿಸುವ ಅಧಿಕಾರ ಪಡೆದಿದ್ದೀರಿ.

advertisement

ಎಷ್ಟು ಹಣ ಪಡೆಯಬಹುದು:

 

Image Source: Shutterstock

 

ಬಾಡಿಗೆ ಮನೆ (Rental House) ನೀಡುವಾಗ ನೀವು ನಿಗಧಿತ ಅಡ್ವಾನ್ಸ್ ಹಣ (Advance Payment) ನೀಡಬೇಕು. ಆದರೆ ಕೆಲವೊಬ್ಬರು ಒಂದು ವರ್ಷದ ಬಾಡಿಗೆ ಮನೆಯ ಅಡ್ವಾನ್ಸ್ ಹಣ ಪಡೆಯುವುದು ಇದೆ‌. ಹಾಗಾಗಿ ಭಾರತದಲ್ಲಿ Tenancy Act ಜಾರಿಯಾಗಿದ್ದು 2020-21ನೇ ಅವಧಿಯಲ್ಲಿ ಈ ಬಗ್ಗೆ ರಾಜ್ಯ ಸರಕಾರ ಹೊಸ ಆದೇಶ ಹೊರಡಿಸಿದ್ದು ಅದರ ಪ್ರಕಾರ ಲಕ್ಷಾಂತರ ರೂಪಾಯಿ ಹಣವನ್ನು ಅಡ್ವಾನ್ಸ್ ಆಗಿ ಪಡೆಯುವಂತಿಲ್ಲ. ಬದಲಾಗಿ ಬಾಡಿಗೆ ಮನೆಯ ತಿಂಗಳ ಮೊತ್ತ 5000 ಎಂದು ಇದ್ದರೆ 10-ಸಾವಿರ ಅಡ್ವಾನ್ಸ್ ಹಣ ಪಡೆಯಬಹುದು.

ಆ ಮನೆಯ ಎರಡು ತಿಂಗಳ ಬಾಡಿಗೆ ಮಾತ್ರ ಪಡೆಯಬಹುದು, ಅದಕ್ಕಿಂತ ಹೆಚ್ಚು ಹಣ ಪಡೆಯುವಂತಿಲ್ಲ. ಅದೆ ರೀತಿ ವಾಣಿಜ್ಯ ಅಂಗಡಿ ಮುಂಗಟ್ಟುಗಳಿಗೆ ಅಡ್ವಾನ್ಸ್ ಹಣ ನೀಡುವಾಗ 6 ತಿಂಗಳ ಬಾಡಿಗೆ ಹಣ ಅಡ್ವಾನ್ಸ್ ಆಗಿ ಪಡೆಯಬಹುದು.

ಇದಕ್ಕೆ ಬಾಡಿಗೆ ಪಡೆಯುವಂತಿಲ್ಲ:

ಅಡ್ವಾನ್ಸ್ ಹಣ ಯಾಕೆ ಪಡಿತಾರೆ ಎಂದರೆ ಬಾಡಿಗೆ ಸರಿಯಾದ ಕಾಲಕ್ಕೆ ಬರದೆ ಇದ್ದರೆ ಅಥವಾ ಮನೆಯ ಭಾಗ ಹಾಳು ಮಾಡಿದ್ದರೆ ಆಗ ಈ ಹಣ ದಿಂದ ದುರಸ್ತಿ ಮಾಡಲಾಗುವುದು. ಆದರೆ ಮನೆಗೆ ಹೊಸದಾಗಿ ಪೇಂಯ್ಟ್ ಹಾಕಿಸುವುದು ಹಾಗೂ ಇತರ ವಯರಿಂಗ್ ಕೆಲಸ ಎಲ್ಲ ಮಾಡಿಸಿ ಅದಕ್ಕೆ ಬಾಡಿಗೆ ಹಣ ಅಧಿಕ ನೀಡುವಂತೆ ಕೇಳುವ ಅಧಿಕಾರ ಬಾಡಿಗೆ ನೀಡುವವರಿಗೆ ಇಲ್ಲ ಆ ಮನೆಯ ಮಾಲಿಕರೆ ಈ ಖರ್ಚು ಕೂಡ ಬರಿಸಬೇಕು.

advertisement

Leave A Reply

Your email address will not be published.