Karnataka Times
Trending Stories, Viral News, Gossips & Everything in Kannada

Driving License: ಡ್ರೈವಿಂಗ್ ಲೈಸೆನ್ಸ್ ವಿಚಾರವಾಗಿ ದೇಶದ ಎಲ್ಲಾ ಜನತೆಗೂ ಹೊಸ ರೂಲ್ಸ್! RTO ಹೊಸ ಸ್ಪಷ್ಟನೆ.

advertisement

ಇಷ್ಟು ದಿನಗಳವರೆಗೂ ಡ್ರೈವಿಂಗ್ ಲೈಸೆನ್ಸ್ ಪಡೆದುಕೊಳ್ಳಬೇಕೆಂದಿದ್ದರೆ ಪ್ರತಿಯೊಬ್ಬರು ಸರ್ಕಾರದ ರೀಜನಲ್ ಟ್ರಾನ್ಸ್ಪೋರ್ಟ್ ಆಫೀಸ್ (Regional Transport Office) ನಲ್ಲಿ ಕ್ಯೂ ನಿಂತು ಟೆಸ್ಟ್ ಡ್ರೈವ್ ನೀಡಿ ಅನಂತರ ಸರ್ಟಿಫಿಕೇಟ್ ಪಡೆದುಕೊಳ್ಳಬೇಕಿತ್ತು. ಅದರಿಗ ಸರ್ಕಾರ ಈ ನಿಯಮದಲ್ಲಿ ಕೆಲ ಬದಲಾವಣೆಗಳನ್ನು ಉಂಟುಮಾಡಿದ್ದು ಇನ್ಮುಂದೆ ಡ್ರೈವಿಂಗ್ ಲೈಸೆನ್ಸ್ (Driving License) ಪಡೆದುಕೊಳ್ಳಲು ಆರ್‌ಟಿಓ ಆಫೀಸ್ ಬಳಿಯೇ ಹೋಗಬೇಕಿಲ್ಲ, ಬದಲಿಗೆ ಯಾವುದಾದರೂ ಖಾಸಗಿ ಸಂಸ್ಥೆಯಲ್ಲಿ ಡ್ರೈವ್ ಟೆಸ್ಟ್ ಮಾಡಿಸಿ ಸರ್ಟಿಫಿಕೇಟ್ ಪಡೆದುಕೊಳ್ಳಬಹುದು. ಈ ನಿಯಮವನ್ನು ಜೂನ್ 1ನೇ ತಾರೀಕು 2024ರಂದು ಸರ್ಕಾರ ಜಾರಿಗೆ ತರಲಿದ್ದು, ಅದಾಗಲೇ ಇದರ ನೋಟಿಸನ್ನು ಬಿಡುಗಡೆ ಮಾಡಲಾಗಿದೆ.

ಖಾಸಗಿ ಡ್ರೈವಿಂಗ್ ಸೆಂಟರ್ ಗಳಿಗೆ ಹೊಸ ನಿಯಮ ಜಾರಿ:

  1. ಖಾಸಗಿ ಡ್ರೈವಿಂಗ್ ಟ್ರೈನಿಂಗ್ ಸೆಂಟರ್ (Driving Training Center) ಅನ್ನು ನಿರ್ಮಾಣ ಮಾಡಲು ಕನಿಷ್ಠ ಒಂದು ಎಕರೆ ಸ್ಥಳವಿರಬೇಕು ಹಾಗೂ ಕಾರ್ ಡ್ರೈವಿಂಗ್ ಹೇಳಿಕೊಡಲು ಕಡ್ಡಾಯವಾಗಿ ಸರಿ ಸುಮಾರು ಎರಡು ಎಕರೆ ಸ್ಥಳ ಇರಬೇಕು.
  2. ಖಾಸಗಿ ಡ್ರೈವಿಂಗ್ ಸೆಂಟರ್ ಗಳಲ್ಲಿ ಸೂಕ್ತವಾದ ಪರೀಕ್ಷೆ ಸೌಲಭ್ಯವನ್ನು ಒದಗಿಸಬೇಕು ಹಾಗೂ ತರಬೇತಿ ನೀಡುವಂತ ವ್ಯಕ್ತಿಗಳು ಕನಿಷ್ಠ ಹೈಸ್ಕೂಲ್ ಡಿಪ್ಲೋಮೋ (High School Diploma) ಪದವಿಯನ್ನು ಹೊಂದಿರಬೇಕು ಹಾಗೂ ಐದು ವರ್ಷಗಳ ಡ್ರೈವಿಂಗ್ ಅನುಭವವಿರಬೇಕು(Driving Experience).
  3. ಜೊತೆಗೆ ತರಬೇತಿದಾರರಿಗೆ ಬಯೋಮೆಟ್ರಿಕ್ ಮತ್ತು ಮಾಹಿತಿ ತಂತ್ರಜ್ಞಾನ (Biometric and Information Technology) ವ್ಯವಸ್ಥೆಯ ಕುರಿತು ಎಲ್ಲಾ ವಿಚಾರಗಳು ತಿಳಿದಿರಬೇಕು.
  4. ಲಘು ವಾಹನಗಳ ಟ್ರೈನಿಂಗ್ 4 ವಾರ(29 ಗಂಟೆ)ಗಳಲ್ಲಿ ಪೂರ್ಣಗೊಳ್ಳಬೇಕು ಇದನ್ನು ಎರಡು ವಿಭಾಗಗಳಾಗಿ ವಿಂಗಡಿಸಿ 8 ಗಂಟೆಗಳ ಕಾಲ ಥಿಯರಿ ಅಭ್ಯಾಸವನ್ನು ಹೇಳಿಕೊಟ್ಟರೆ ಇನ್ನುಳಿದ 21 ಗಂಟೆ ಪ್ರಾಯೋಗಿಕವಾಗಿ ಡ್ರೈವಿಂಗ್ ಹೇಳಿಕೊಡಬೇಕು.
  5. ಭಾರಿ ತೂಕದ ವಾಹನಗಳ ತರಬೇತಿಯನ್ನು 38 ಗಂಟೆಗಳ ಕಾಲ ನಡೆಸಬೇಕು 8 ಗಂಟೆ ಗಳ ಕಾಲ ಥಿಯರಿ (Theory Class) ಹಾಗೂ ಇನ್ನುಳಿದ 31 ಗಂಟೆಗಳ ಕಾಲ ಪ್ರಾಯೋಗಿಕ ಅಭ್ಯಾಸವನ್ನು ಹೇಳಿಕೊಡಬೇಕು. ಹೀಗೆ ಆರು ವಾರಗಳಲ್ಲಿ ಚಾಲಕನಿಗೆ ಉನ್ನತ ಹಾಗೂ ಗುಣಮಟ್ಟ ಡ್ರೈವಿಂಗ್ ಅಭ್ಯಾಸವನ್ನು ಎಲ್ಲ ಖಾಸಗಿ ಡ್ರೈವಿಂಗ್ ಸಂಸ್ಥೆಗಳು ನೀಡಬೇಕೆಂದು ಆದೇಶಿಸಿದೆ.

ಡ್ರೈವಿಂಗ್ ಲೈಸೆನ್ಸ್ ಶುಲ್ಕ:

 

advertisement

Image Source: The Indian Express

 

  • ಲರ್ನರ್ ಲೈಸೆನ್ಸ್/Learner License – ₹200
  • ಲರ್ನರ್ ಲೈಸೆನ್ಸ್ ರಿನಿವಲ್/Learner License Renewal -₹200
  • ಇಂಟರ್ನ್ಯಾಷನಲ್ ಲೈಸೆನ್ಸ್/International License – ₹1000
  • ಪರ್ಮನೆಂಟ್ ಲೈಸೆನ್ಸ್/Permanent License -₹200

ಡ್ರೈವಿಂಗ್ ಲೈಸೆನ್ಸ್ ಪಡೆಯಲು ಅಪ್ಲಿಕೇಶನ್ ಹಾಕುವುದು ಹೇಗೆ?

1. ನೀವೇನಾದರೂ ಹಲವು ತಿಂಗಳಿಂದ ಡ್ರೈವಿಂಗ್ ಲೈಸನ್ಸ್ (Driving License) ಪಡೆದುಕೊಳ್ಳಬೇಕೆಂದು ಯೋಚಿಸುತ್ತಿದ್ದರೆ ಅಂತರ್ಜಾಲದಲ್ಲಿ ಲಭ್ಯವಿರುವ ಅಧಿಕೃತ ವೆಬ್ಸೈಟ್ https://parivahan.gov.in ಗೆ ಭೇಟಿ ನೀಡಿ.
2. ನಂತರ ಹೋಂ ಪೇಜ್ ನಲ್ಲಿ ಪ್ರಕಟವಾಗುವ ಅಪ್ಲೈ ಡ್ರೈವಿಂಗ್ ಲೈಸೆನ್ಸ್ (Apply Driving License) ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
3. ಅಪ್ಲಿಕೇಶನ್ ಫಾಮ್ (Application Form) ಒಂದು ಲಭ್ಯವಾಗುತ್ತದೆ ನಿಮಗೆ ಬೇಕಿದ್ದರೆ ಅದನ್ನು ಪ್ರಿಂಟ್ ತೆಗೆದುಕೊಳ್ಳಬಹುದು.
4. ಡ್ರೈವಿಂಗ್ ಲೈಸೆನ್ಸ್ ಅನ್ನು ಆಫ್ ಲೈನ್ ಮತ್ತು ಆನ್ ಲೈನ್ ನಲ್ಲಿ ಅಪ್ಲೈ ಮಾಡಬಹುದು.
5. ಸೂಕ್ತವಾದ ಮಾಹಿತಿಗಳನ್ನು ಅಪ್ಲಿಕೇಶನ್ ಫಾರ್ಮ್ ನಲ್ಲಿ ದಾಖಲಿಸಿ ಹಾಗೂ ಕೇಳಲಾಗುವಂತಹ ದಾಖಲಾತಿಗಳನ್ನೆಲ್ಲ ಅಪ್ಲೋಡ್ ಮಾಡಿ.
6. ಈ ಪ್ರಕ್ರಿಯೆ ಮುಗಿದ ಬಳಿಕ ನಿಮ್ಮ ಹತ್ತಿರದ ಆರ್ ಟಿ ಓ ಆಫೀಸ್ (RTO office) ಗೆ ಭೇಟಿ ನೀಡಿ ಅಪ್ಲಿಕೇಶನ್ ಫಾರ್ಮಿನ ಜೊತೆಗೆ ಬೇಕಾಗುವ ದಾಖಲಾತಿಗಳನ್ನು ಒದಗಿಸಿ ಹಾಗೂ ನಿಮ್ಮ ಚಾಲನ ಕೌಶಲ್ಯದ ಪುರಾವೆಯನ್ನು ನೀಡಿ.

advertisement

Leave A Reply

Your email address will not be published.