Karnataka Times
Trending Stories, Viral News, Gossips & Everything in Kannada

Driving License: ಡ್ರೈವಿಂಗ್ ಲೈಸೆನ್ಸ್ ನವೀಕರಿಸುವುದು ಹೇಗೆ? ಮನೆಯಲ್ಲಿಯೇ ಕುಳಿತು ಈ ಕೆಲಸ ಮಾಡಿಕೊಳ್ಳಿ!

advertisement

ವಾಹನ ಚಲಾಯಿಸುವ ಪ್ರತಿಯೊಬ್ಬರಿಗೂ ಡ್ರೈವಿಂಗ್ ಲೈಸೆನ್ಸ್ ಬೇಕೇ ಬೇಕು. ವಾಹನ ಚಾಲನ ಪರವಾನಿಗೆ ಇಲ್ಲದೆ ಯಾರು ಕೂಡ ವಾಹನವನ್ನು ಓಡಿಸುವಂತಿಲ್ಲ. ಹಾಗೆ ಓಡಿಸಿ ಸಿಕ್ಕೆ ಬಿದ್ದರೆ ಭಾರಿ ಪ್ರಮಾಣದ ದಂಡವನ್ನು ಕೂಡ ಪಾವತಿಸಬೇಕು.

ಡ್ರೈವಿಂಗ್ ಲೈಸೆನ್ಸ್ (Driving License) ಅನ್ನುವುದು ಬಹಳ ಮುಖ್ಯವಾಗಿರುವ ದಾಖಲೆ ಆಗಿದೆ. ಹಾಗಾಗಿ ಈ ಡಾಕ್ಯುಮೆಂಟ್ ನಿಮ್ಮ ಬಳಿ ಇದ್ದು ಅದರ ಅವಧಿ ಮುಗಿದಿದ್ದರೆ ಅಥವಾ ಮುಕ್ತಾಯಗೊಳ್ಳುವ ಹಂತದಲ್ಲಿದ್ದರೆ ಅದನ್ನು ತಕ್ಷಣ ಅಪ್ಡೇಟ್ ಮಾಡಿಸಿಕೊಳ್ಳಿ. ಯಾಕೆಂದರೆ ಡ್ರೈವಿಂಗ್ ಲೈಸನ್ಸ್ ನವೀಕರಿಸಿ ಕೊಳ್ಳದೆ ಇದ್ದಲ್ಲಿ ಸಮಸ್ಯೆ ಉಂಟಾಗಬಹುದು.

30 ದಿನಗಳ ಅವಕಾಶ!

 

advertisement

 

ಸರ್ಕಾರ ಡ್ರೈವಿಂಗ್ ಲೈಸನ್ಸ್ (Driving License) ನವೀಕರಣಕ್ಕೆ 30 ದಿನಗಳ ಅವಕಾಶ ನೀಡಿದೆ. ನೀವು ಮನೆಯಲ್ಲಿ ಕುಳಿತು ಈ ಕೆಲಸ ಮಾಡಿಕೊಳ್ಳಬಹುದು. ಒಂದು ವೇಳೆ ನವೀಕರಣ ಮಾಡಿಕೊಳ್ಳದೆ ಇದ್ದಲ್ಲಿ ದಂಡ ಪಾವತಿಸಬೇಕು.

  • ಮೊದಲು ಸರ್ಕಾರದ https://parivahan.gov.in/parivahan/ ಈ ಅಧಿಕೃತ ವೆಬ್ಸೈಟ್ ಗೆ.
  • ಬಳಿಕ ಹೊಸ ಪುಟ ತೆಗೆದುಕೊಳ್ಳುತ್ತದೆ. ಆನ್ಲೈನ್ ಸೇವೆಗಳು ಎನ್ನುವ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
  • ಈಗ ಡ್ರೈವಿಂಗ್ ಲೈಸೆನ್ಸ್ ಗೆ ಸಂಬಂಧಿಸಿದ ಸೇವೆಗಳು ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ನಂತರ ನಿಮಗೆ ಒಂದಿಷ್ಟು ಮಾರ್ಗ ಸೂಚಿಗಳು ಗೋಚರಿಸುತ್ತವೆ. ಇದು ಡ್ರೈವಿಂಗ್ ಲೈಸೆನ್ಸ್ ನವೀಕರಿಸಬೇಕಾದರೆ ನೀವು ಪಾಲಿಸಬೇಕಾಗಿರುವ ಮಾರ್ಗ ಸೂಚಿಗಳು.
  • ನಂತರ ನೀವು ನಿಮ್ಮ ಡಿಎಲ್ ಸಂಖ್ಯೆ, ಜನ್ಮ ದಿನಾಂಕ ಭರ್ತಿ ಮಾಡಿ ನಂತರ ಕ್ಯಾಪ್ಚ ಕೋಡ್ ನಮೂದಿಸಿ ಸಬ್ಮಿಟ್ ಮಾಡಿ.ಡ್ರೈವಿಂಗ್ ಲೈಸೆನ್ಸ್ ನವೀಕರಿಸಿಕೊಳ್ಳುವುದಕ್ಕೆ ಕೆಲವೊಂದಿಷ್ಟು ಮಾಹಿತಿಗಳನ್ನು ಭರ್ತಿ
  • ಮಾಡಬೇಕಾಗುತ್ತದೆ ನೀವು ಫಾರ್ಮ್ 1A ಭರ್ತಿ ಮಾಡಬೇಕು ಇದಕ್ಕೆ ವೈದ್ಯರಿಂದ ಪ್ರಮಾಣೀಕೃತ ಪತ್ರ ಪಡೆದುಕೊಳ್ಳಬೇಕು ಎನ್ನುವುದು ಗಮನಿಸಿ. ಸಾರಿಗೆ ಇಲಾಖೆ ವೆಬ್ ಸೈಟಿನಿಂದ ಈ ಫಾರಂ ಅನ್ನು ಡೌನ್ಲೋಡ್ ಮಾಡಿಕೊಂಡು ನೀವು ವೈದ್ಯಕೀಯ ಸರ್ಟಿಫಿಕೇಟ್ ಮಾಡಿಸಬೇಕಾಗುತ್ತದೆ.

ಈ ರೀತಿ ಮನೆಯಲ್ಲಿಯೇ ಕುಳಿತು ಸುಲಭವಾಗಿ ಡ್ರೈವಿಂಗ್ ಲೈಸೆನ್ಸ್ (Driving License) ಅಪ್ಡೇಟ್ ಮಾಡಿಕೊಳ್ಳಿ.

advertisement

Leave A Reply

Your email address will not be published.