Karnataka Times
Trending Stories, Viral News, Gossips & Everything in Kannada

NSC: ಬ್ಯಾಂಕ್ ಎಫ್‌ಡಿಗಿಂತ ಹೆಚ್ಚಿನ ಬಡ್ಡಿಯನ್ನು ಪಡೆಯಲು ಈ ಯೋಜನೆಯಲ್ಲಿ ಹೂಡಿಕೆ ಮಾಡಿ!

advertisement

ಇಂದು ಸೇವಿಂಗ್ ಬಗ್ಗೆ ಪ್ರತಿಯೊಬ್ಬರು ಕೂಡ ಯೋಚಿಸುತ್ತಾರೆ. ಅದರಲ್ಲೂ ಮದ್ಯಮ ವರ್ಗಕ್ಕೆ ಮಕ್ಕಳ ‌ಮದುವೆ ಅಂತ ಬಂದಾಗ ಸೇವಿಂಗ್ ಹಣ ಅಲ್ಪವಾದರೂ ಬೇಕಾಗಬಹುದು.ಅದರಲ್ಲಿ ಪೋಸ್ಟ್ ಆಫೀಸ್ (Post Office) ಈಗಾಗಲೇ ಜನರಿಗೆ ಉಳಿತಾಯ ಮಾಡುವ ಕೌಶಲ್ಯವನ್ನು ಕಲ್ಪಿಸಿಕೊಟ್ಟಿದೆ. ಅನೇಕ ರೀತಿಯ ಉಳಿತಾಯ ಮಾಡುವ ಯೋಜನೆಗಳನ್ನು ನೀಡುತ್ತಿದ್ದು ಎಲ್ಲಾ ಉಳಿತಾಯ ಯೋಜನೆಗಳಲ್ಲಿ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರವು ಒಂದು ಯೋಜನೆಯಾಗಿದೆ.

ಎಷ್ಟು ಬಡ್ಡಿ:

 

 

ಸದ್ಯ ಅಂಚೆ ಕಛೇರಿಯು ತನ್ನ ಹೂಡಿಕೆದಾರರ ಬೇಡಿಕೆಯನ್ನು ಗಮನಿಸಿಕೊಂಡು ಹಲವು ರೀತಿಯ ಯೋಜನೆಗಳನ್ನು ಜನತೆಗೆ ನೀಡುತ್ತಿದೆ. ಪೋಸ್ಟ್ ಆಫೀಸ್ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (Post Office National Savings Certificate) ದಲ್ಲಿ, ಹಣಕಾಸು ಸಚಿವಾಲಯವು ಪ್ರತಿ ತ್ರೈಮಾಸಿಕಕ್ಕೆ ಬಡ್ಡಿಯನ್ನು ಕೂಡ ಬದಲಾವಣೆ ಮಾಡುತ್ತದೆ. ಈಗ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರಕ್ಕೆ ವಾರ್ಷಿಕ ಶೇ.7.7 ಬಡ್ಡಿ ನೀಡುತ್ತಿದೆ.ಅನೇಕ ಬ್ಯಾಂಕ್‌ಗಳು ತೆರಿಗೆ ಉಳಿತಾಯ ಎಫ್‌ಡಿಯಲ್ಲಿ ಶೇಕಡಾ 7.50 ರ ಬಡ್ಡಿದರಗಳನ್ನು ನೀಡುತ್ತಿವೆ.

advertisement

ಹಣ ದ್ವಿಗುಣ:

ನೀವು 1,000 ರೂಪಾಯಿಗಳೊಂದಿಗೆ ಪೋಸ್ಟ್ ಆಫೀಸ್‌ನ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆ (NSC) ನಲ್ಲಿ ಹೂಡಿಕೆ ಮಾಡಬಹುದಾಗಿದೆ‌. ಇದು 5 ವರ್ಷದ ಉಳಿತಾಯ ಯೋಜನೆ ಆಗಿದ್ದು ನಿಮ್ಮ ಹಣವು ಕೇವಲ 10 ವರ್ಷಗಳಲ್ಲಿ ದ್ವಿಗುಣ ಆಗುತ್ತದೆ. ಇಲ್ಲಿ ಹೂಡಿಕೆ ಮಾಡುವುದರಿಂದ ತೆರಿಗೆ ಉಳಿತಾಯ ಯೋಜನೆಗಳ ಲಾಭವೂ ಸಿಗುತ್ತದೆ. ವರ್ಷಗಳಲ್ಲಿ ಹಣವು ದ್ವಿಗುಣಗೊಳ್ಳುತ್ತದೆ.

ಇಷ್ಟು ಮೊತ್ತ ಪಡೆಯಿರಿ:

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆಯ ಮೂಲಕ ನೀವು 15 ಲಕ್ಷ ಹೂಡಿಕೆ ಮಾಡಿದ್ರೆ ಸಾಕು. ಶೇ.7.7 ಬಡ್ಡಿ ದರದಲ್ಲಿ ನಿಮಗೆ 6,73,551 ರೂಪಾಯಿಗಳನ್ನು ಬಡ್ಡಿಯಾಗಿ ಪಡೆಯಬಹುದು. ಮೆಚ್ಯೂರಿಟಿ ಅವಧಿಯಲ್ಲಿ ನಿಮಗೆ ಒಟ್ಟು 21,73,551 ರೂಪಾಯಿಗಳು ಸಿಗಲಿದೆ.

advertisement

Leave A Reply

Your email address will not be published.