Karnataka Times
Trending Stories, Viral News, Gossips & Everything in Kannada

NSC: ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಕೇವಲ ಬಡ್ಡಿಯಿಂದಲೇ ಸಿಗುತ್ತೆ 4,49,034 ರೂಪಾಯಿ!

advertisement

ಇಂದು ಜನರು ಹೂಡಿಕೆಗಾಗಿ ಹೆಚ್ಚಿನ ಆಧ್ಯತೆ ಯನ್ನು ನೀಡುತ್ತಾರೆ. ಯಾಕಂದ್ರೆ ಮುಂದಿನ ದಿನದ ಹೂಡಿಕೆಗಾಗಿ ಉಪಯೋಗ ವಾಗುವುದೇ ಈ ಸೆವಿಂಗ್ಸ್ ಮೊತ್ತ. ಇಂದು ವಾಸ್ತವವಾಗಿ, ಯಾವುದೇ ಹೂಡಿಕೆಗೆ ಹೆಚ್ಚಿನ‌ ಅಪಾಯವೂ ಇದ್ದೇ ಇರುತ್ತದೆ. ಹಾಗಾಗಿ ಸುರಕ್ಷತೆಯ ಹೂಡಿಕೆ ಮೂಲಕ ಜನರು ಸೇವಿಂಗ್ ಮಾಡಲು ಪ್ರಯತ್ನಿಸುತ್ತಾರೆ. ಇದೀಗ ಈ ಯೋಜನೆ ಮೂಲಕ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸಿರಿ.

ಐದು ವರ್ಷಗಳ ಅವಧಿ:

5 ವರ್ಷಗಳ ಕಿರು ಅವಧಿಯ ಮೇಲೆ ಹೂಡಿಕೆ ಮಾಡಲು ಈ ಯೋಜನೆ ಉತ್ತಮ ಆಯ್ಕೆಯಾಗಿದ್ದು, ಸಣ್ಣ ಹಾಗೂ ಮಧ್ಯಮ ವರ್ಗದ ಜನತೆಗೆ ಹೂಡಿಕೆ ಮಾಡಲು ಸುರಕ್ಷಿತ ಹಾಗೂ ಕಡಿಮೆ ಅಪಾಯದ ಹೂಡಿಕೆಗೆ NSC ಅತ್ಯುತ್ತಮ ಆಯ್ಕೆ ಎನ್ನಬಹುದು.

ಬಡ್ಡಿ ದರ ಎಷ್ಟು?

 

advertisement

 

ಇದೀಗ NSC ಸೇರಿದಂತೆ ಅಂಚೆ ಕಛೇರಿಯ ಅನೇಕ ಸಣ್ಣ ಉಳಿತಾಯ ಯೋಜನೆಗಳಲ್ಲಿ ಕೇಂದ್ರ ಸರಕಾರವು ಬಡ್ಡಿದರಗಳನ್ನು ಹೆಚ್ಚು ಮಾಡಿದೆ. ಈಗ ನೀವು ಪೋಸ್ಟ್ ಆಫೀಸ್ ಹೂಡಿಕೆ ಮೂಲಕ 7.7% ದರದಲ್ಲಿ ಬಡ್ಡಿಯನ್ನು ಪಡೆಯಬಹುದು. ಅದೇ ರೀತಿ ಆದಾಯ ತೆರಿಗೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಸಹ ಪಡೆಯಬಹುದು. 1.5 ಲಕ್ಷದವರೆಗಿನ ಹೂಡಿಕೆಯ ಮೇಲೆ ನೀವು ರಿಯಾಯಿತಿಯನ್ನು ಪಡೆಯಲು ಅವಕಾಶ ಇದೆ.ಈ ಯೋಜನೆಯಲ್ಲಿ ನೀವು 100 ರೂಪಾಯಿ ಹೂಡಿಕೆ ಮೂಲಕ ಯೋಜನೆ ಪ್ರಾರಂಭಿಸಬಹುದು.

ಹತ್ತು ಲಕ್ಷ ಹೂಡಿಕೆ ಮಾಡಿ:

ನೀವು NSC ಯಲ್ಲಿ 10 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ರೆ‌ ಇದರ ಮೇಲೆ ನೀವು ವಾರ್ಷಿಕ 7.7% ದರದಲ್ಲಿ ನಿಮ್ಮ ಹೂಡಿಕೆಯು 5 ವರ್ಷಗಳವರೆಗೆ ಲಾಕ್ ಇನ್ ಅವಧಿಯಲ್ಲಿ ಉಳಿಯುತ್ತದೆ. ಕ್ಯಾಲ್ಕುಲೇಟರ್ ನಿಯಮದ ಪ್ರಕಾರ, ನಿಮ್ಮ ಅಸಲು ಮೊತ್ತವು 10 ಲಕ್ಷ ರೂಪಾಯಿಗಳು ಆಗಿದ್ದು ನೀವು 4,49,034 ರೂಪಾಯಿಗಳನ್ನು ಬಡ್ಡಿಯಿಂದ ಮತ್ತು ಅಸಲು ಮೊತ್ತ ಮತ್ತು ಬಡ್ಡಿಯನ್ನು ಪಡೆಯುವ ಮೂಲಕ, ನಿಮ್ಮ ಹೂಡಿಕೆಯ ಮೇಲೆ ನೀವು ರೂ 14,49,034 ರೂ ಪಡೆಯಬಹುದು. ನೀವು ಈ ಯೋಜನೆಯಲ್ಲಿ 15 ಲಕ್ಷದ ವರೆಗೆ ಹೂಡಿಕೆ ಮಾಡಿದರೆ 5 ವರ್ಷಗಳ ನಂತರ ನೀವು 20.85 ಲಕ್ಷ ಮೊತ್ತವನ್ನು ಪಡೆಯಬಹುದು.

advertisement

Leave A Reply

Your email address will not be published.