Karnataka Times
Trending Stories, Viral News, Gossips & Everything in Kannada

Traffic Rules: ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡಿದ್ದವರ ವಿರುದ್ಧ ಭರ್ಜರಿ ಕಾರ್ಯಾಚರಣೆ, ಮಾಲೀಕರಿಗೆ ನೋಟಿಸ್ ಜಾರಿ

advertisement

ರಸ್ತೆ ಸಾರಿಗೆ ನಿಯಮ ಪಾಲನೆ ಮಾಡಬೇಕು ಎಂಬ ನಿಯಮ ಅನೇಕ ವರ್ಷದಿಂದಲೂ ಚಾಲ್ತಿಯಲ್ಲಿ ಇದೆ. ಸಂಚಾರ ನಿಯಮ ಹಾಕಿದ್ದ ಮೂಲ ಉದ್ದೇಶವೇ ಜನರ ಹಿತರಕ್ಷಣೆ ಕಾಪಾಡುವ ನೆಲೆಯಲ್ಲಿ ಹಾಗಾಗಿ ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ಅಂತವರ ವಿರುದ್ಧ ಆಗಾಗ ಕ್ರಮ ಕೈಗೊಳ್ಳಲಾಗುತ್ತಲೇ ಇರುತ್ತದೆ‌‌. ಇದೀಗ ಜನ ಸಂಚಾರದಲ್ಲಿ ಮಹಾನಗರವಾದ ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ (Traffic Rules) ಕಟ್ಟು ನಿಟ್ಟಿನ ಪಾಲನೆಗೆ ಬೆಂಬಲಿಸಲಾಗುತ್ತಿದೆ.

ಯಾವೆಲ್ಲ ನಿಯಮ ಇದೆ?

ಸಂಚಾರ ನಿಯಮಗಳ ಸಾಲಿನಲ್ಲಿ ಓವರ್ ಸ್ಪೀಡ್ ವಾಹನ ಚಲಾಯಿಸುವುದು, ಸಿಗ್ನಲ್ ಜಂಪ್ ಮಾಡುವುದು, ಎಮಿಷನ್ ಟೆಸ್ಟ್ ಮಾಡಿಸದಿರುವುದು, ಓವರ್ ಸ್ಪೀಡ್ ಹೋಗುವುದು, ಸೀಟ್ ಬೆಲ್ಟ್ ಹಾಕದಿರುವುದು, ಹೆಲ್ಮೇಟ್ ಹಾಕದಿರುವುದು, ನೋ ಪಾರ್ಕಿಂಗ್ ನಲ್ಲಿ ಗಾಡಿ ನಿಲ್ಲಿಸುವುದು, ಒನ್ ವೇ ನಲ್ಲಿ ಚಲಾಯಿಸುವುದು, ಡಾಕ್ಯೂಮೆಂಟ್ ಸರಿಯಾಗಿ ಇಟ್ಟು ಕೊಳ್ಳದಿರುವುದು, ಲೈಸೆನ್ಸ್ ರಹಿತ ವಾಹನ ಚಲಾಯಿಸುವುದು, ವಾಹನ ಓಡಿಸುವಾಗ ಮೊಬೈಲ್ ನಲ್ಲಿ ಮಾತನಾಡುವುದು ಇತ್ಯಾದಿ ಅನೇಕ ವಿಚಾರಗಳು ಸಂಚಾರ ನಿಯಮದ ಅಡಿಯಲ್ಲಿ ಬರಲಿದ್ದಿ ಅವುಗಳ ಉಲ್ಲಂಘನೆ ಆದರೆ ಶಿಕ್ಷೆ ವಿಧಿಸಲಾಗುತ್ತದೆ.

ಭರ್ಜರಿ ಕಾರ್ಯಾಚರಣೆ:

 

 

advertisement

ಬೆಂಗಳೂರಿನಲ್ಲಿ ದಕ್ಷಿಣ ವಿಭಾಗದ ಸಂಚಾರಿ ಡಿಸಿಪಿಯಾದ Shivaprakash Devaraj ಅವರು ಬೆಂಗಳೂರಲ್ಲಿ ಭರ್ಜರಿ ಕಾರ್ಯಾಚರಣೆ ಮಾಡಿದ್ದಾರೆ. ಈ ವೇಳೆ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದ 84 ಬೈಕ್ ಹಾಗೂ ಒಂದು ಕಾರನ್ನು ವಶ ಪಡಿಸಿಕೊಂಡಿದ್ದಾರೆ. ಬೈಕ್ ಸವಾರರು ಸಂಚಾರ ನಿಯಮ ಉಲ್ಲಂಘನೆ ಪಟ್ಟಿಯಲ್ಲಿ ಅಧಿಕ ಸಂಖ್ಯೆಯಲ್ಲಿದ್ದು ಇದುವರೆಗೆ 10 ಸಾವಿರಕ್ಕೂ ಅಧಿಕ ನಿಯಮ ಉಲ್ಲಂಘನೆ ಮಾಡಿದ್ದು ಇಲ್ಲಿ ದಾಖಲಾಗಿದೆ.

ಮಾಲೀಕರಿಗೆ ನೋಟಿಸ್ ಜಾರಿ:

ಸೀಜ್ ಆದ ವಾಹನಗಳ ಮಾಲೀಕರಿಗೆ ನಿಯಮ ಉಲ್ಲಂಘನೆ ವಿಚಾರ ಮನದಟ್ಟು ಮಾಡಿ ವಾಹನ ಸೀಜ್ ಕೂಡ ಮಾಡಲಾಗಿದ್ದು ಆ ಬಳಿಕ ವಾಹನ ಮಾಲೀಕರಿಗೆ ನೋಟೀಸ್ ಜಾರಿ ಮಾಡಲಾಗಿದೆ. ಹಾಗಾಗಿ ಸೂಕ್ತ ವಿಚಾರಣೆ ಮತ್ತು ದಂಡ ಬಾಕಿ ಮೊತ್ತ ವಾಪಾಸ್ಸು ನೀಡಿದ್ದ ಬಳಿಕವೇ ವಾಹನ ಹಸ್ತಾಂತರ ಮಾಡಲು ತೀರ್ಮಾನಿಸಲಾಗಿದೆ.

ದಂಡ ವಸೂಲಿ:

ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ 50 ಸಾವಿರಕ್ಕೂ ಅಧಿಕ ದಂಡ ವಿಧಿಸಿದ್ದಾಗ ಕೆಲ ಮಾಲೀಕರು ಅದನ್ನು ಬರಿಸಿರಲಿಲ್ಲ. ಈ ತರ 85 ವಾಹನಗಳನ್ನು ಸರಿಯಾಗಿ ಕಾರ್ಯಾಚರಣೆ ಮಾಡಿ ಬೆಂಗಳೂರು ದಕ್ಷಿಣ ವಿಭಾಗದ ಪೋಲಿಸರು 1.7 ಕೋಟಿ ರೂಪಾಯಿ ದಂಡ ಸಂಗ್ರಹ ಮಾಡಿದ್ದಾರೆ. 50 ಸಾವಿರ ರೂಪಾಯಿ ಗೂ ಅಧಿಕ ಬಾಕಿ ಉಳಿಸಿದ್ದಕ್ಕೆ ದಂಡ ಸಂಗ್ರಹವನ್ನು ವಾಹನ ಸವಾರರ ಮನೆಗೆ ಪೊಲೀಸ್ ನವರು ತೆರಳಿ ದಂಡ ಸಂಗ್ರಹ ಮಾಡುತ್ತಾರೆ ಎಂದು ಡಿಸಿಪಿ ಶಿವಪ್ರಕಾಶ್ ದೇವರಾಜ್ ಅವರು ಹೇಳಿದರು.

advertisement

Leave A Reply

Your email address will not be published.