Karnataka Times
Trending Stories, Viral News, Gossips & Everything in Kannada

Fixed Deposit: ಈ 5 ಬ್ಯಾಂಕ್ ನಲ್ಲಿ ನಿಮಗೆ FD ಮೇಲೆ ಎಲ್ಲದಕ್ಕಿಂತ ಹೆಚ್ಚಿನ ಬಡ್ಡಿದರ ಸಿಗಲಿದೆ!

advertisement

ದೀರ್ಘಾವಧಿಯ ಭದ್ರತೆಯ ದೃಷ್ಟಿಯಿಂದ ಉತ್ತಮ ಉಳಿತಾಯ ಮಾಡಬೇಕು ಎಂದು ಅಂದುಕೊಂಡವರಿಗೆ ಎಫ್ ಡಿ ಮಾಡುವುದು ಒಂದು ಒಳ್ಳೆಯ ಉಪಾಯ ಎನ್ನಬಹುದು. ಇದರಲ್ಲಿ ಬಡ್ಡಿದರ ಅಧಿಕವಾಗಿ ಸಿಗುವ ಕಾರಣ ಅತೀ ಹೆಚ್ಚು ಲಾಭ ಪಡೆಯಲು ಈ ಕ್ರಮ ಅನುಕೂಲ ಆಗಿದೆ. Fixed Deposit ಯನ್ನು ಸರಕಾರಿ ನಂಬಿಕೆ ಸಂಸ್ಥೆಯಲ್ಲಿ ಮಾಡುವುದರಿಂದ ನಿಮಗೆ ಲಾಭದ ಜೊತೆಗೆ ಅಧಿಕ ಬಡ್ಡಿದರ ಸಹ ನೀಡಲಿದೆ. ಭಾರತದಲ್ಲಿ ಯಾವೆಲ್ಲ ಬ್ಯಾಂಕ್ Fixed Deposit  ಮಾಡಿದರೆ ಅಧಿಕ ಬಡ್ಡಿದರದ ನೀಡಲಿದೆ‌. ಎಲ್ಲಿ FD ಮಾಡಿದರೆ ನಿಮಗೆ ಲಾಭ ಅಧಿಕ ಸಿಗಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ICICI Bank:

 

 

ICICI Bank ನಲ್ಲಿ ಉತ್ತಮ ರೀತಿಯಲ್ಲೇ ಬಡ್ಡಿದರ ನೀಡಲಾಗುತ್ತಿದೆ. 3% ನಿಂದ ಬಡ್ಡಿದರ ಆರಂಭವಾಗಿ 7.2% ವರೆಗೆ ಸಹ ನೀಡಲಾಗುವುದು. 15 ತಿಂಗಳಿಂದ ಎರಡು ವರ್ಷದ ಅವಧಿವರೆಗೆ ಸ್ಥಿರ ಠೇವಣಿ (Fixed Deposit) ಮೇಲಿನ ಬಡ್ಡಿದರ 7.20% ವರೆಗೆ ಗರಿಷ್ಠ ಬಡ್ಡಿದರ ನಿಮಗೆ ಸಿಗಲಿದೆ. 15 ತಿಂಗಳಿಂದ 18 ತಿಂಗಳವರೆಗೆ ಬಡ್ಡಿದರವು ಅವಧಿಗೆ ಸಾಮಾನ್ಯ ನಾಗರಿಕರಿಗೆ 7.20% ಹಿರಿಯನಾಗರಿಕರಿಗೆ 7.75%ವರೆಗೆ ಇರಲಿದೆ.

HDFC Bank:

 

 

advertisement

HDFC Bank ನಲ್ಲಿ ಸ್ಥಿರ ಠೇವಣಿ ಮೇಲೆ ಅಧಿಕ ಬಡ್ಡಿದರ ಸಿಗಲಿದೆ. 3%ನಿಂದ 7.5% ವರೆಗೆ ಕೂಡ ಬಡ್ಡಿದರ ಇರುವುದನ್ನು ನೀವು ಕಾಣಬಹುದು. 1 ವರ್ಷದ ಅವಧಿಗೆ ಸಾಮಾನ್ಯ ನಾಗರಿಕರಿಗೆ 6% ಹಿರಿಯನಾಗರಿಕರಿಗೆ 6.50%, 18 ರಿಂದ 21 ತಿಂಗಳ ಅವಧಿಗೆ ಸಾಮಾನ್ಯ ನಾಗರಿಕರಿಗೆ 7.25%% ಹಿರಿಯನಾಗರಿಕರಿಗೆ 7.75%, 2 ರಿಂದ 3 ವರ್ಷ ಅವಧಿಗೆ ಸಾಮಾನ್ಯ ನಾಗರಿಕರಿಗೆ 7% ಹಿರಿಯ ನಾಗರಿಕರಿಗೆ 7.50% ನಂತೆ ಬಡ್ಡಿದರ ನೀಡಲಾಗುತ್ತದೆ.

Bank of Baroda:

Bank of Baroda ದಲ್ಲಿ ಬಡ್ಡಿದರವು 4.25% ನಿಂದ ಆರಂಭವಾಗಿ 7.25% ವರೆಗೂ ಇರಲಿದೆ. ಎರಡರಿಂದ ಮೂರು ವರ್ಷದ ಅವಧಿಗೆ ಎಫ್ ಡಿ ಮೇಲಿನ ಬಡ್ಡಿದರವು 7.25% ಇರಲಿದೆ. 399 ದಿನಗಳ ಸ್ಥಿರ ಠೇವಣಿ ಮೇಲೆ 7.15% ಇರಲಿದೆ. 360 ದಿನಗಳ ವರೆಗೆ 7.10% ಬಡ್ಡಿದರ ಇರಲಿದೆ. ಒಂದರಿಂದ ಎರಡು ವರ್ಷದ ಅವಧಿಗೆ 6.85% ಬಡ್ಡಿದರ ಸಿಗಲಿದೆ.

Other Banks:

 

 

ಇತರ ಬ್ಯಾಂಕ್ ನಲ್ಲಿ ಕೋಟಕ್ ಮಹೀಂದ್ರ ಬ್ಯಾಂಕ್ (Kotak Mahindra Bank) ನಲ್ಲಿ 4% ನಿಂದ 7.25% ವರೆಗೆ ಬಡ್ಡಿದರವನ್ನು ನೀಡಲಾಗುವುದು. 1 ವರ್ಷದಿಂದ 2 ವರ್ಷಕ್ಕೆ 7.25% ಬಡ್ಡಿದರ ಸಿಗಲಿದೆ. 2 ರಿಂದ ಮೂರು ವರ್ಷಕ್ಕೆ 7% ಬಡ್ಡಿದರ ಸಿಗಲಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ವು ತನ್ನ ಗ್ರಾಹಕರಿಗೆ FD ಮೇಲೆ 3.5%ನಿಂದ 7% ವರೆಗೆ ಬಡ್ಡಿದರ ನೀಡಲಿದೆ. ಅದೇ ರೀತಿ ಹಿರಿಯ ನಾಗರಿಕರಿಗೆ 50% ಅಧಿಕ ಬಡ್ಡಿದರ ಸಿಗಲಿದೆ. 2 ರಿಂದ 3 ವರ್ಷಕ್ಕೆ 7%, 3ರಿಂದ 5 ವರ್ಷಕ್ಕೆ 6.75% ನಷ್ಟು ಬಡ್ಡಿದರ ಸಿಗಲಿದೆ, 5ರಿಂದ 10 ವರ್ಷಕ್ಕೆ 6.5% ಬಡ್ಡಿದರ ಸಿಗಲಿದೆ.

advertisement

Leave A Reply

Your email address will not be published.