Karnataka Times
Trending Stories, Viral News, Gossips & Everything in Kannada

Fixed Deposit: ಹಿರಿಯ ನಾಗರಿಕರಿಗೆ ಎಫ್ ಡಿ ಯಲ್ಲಿ ಹೆಚ್ಚಿನ ಬಡ್ಡಿ ದರ ಏಕೆ ನೀಡಲಾಗುತ್ತೆ ಗೊತ್ತಾ? ಬ್ಯಾಂಕ್ ಗೆ ಇದರಿಂದ ಆಗುವ ಲಾಭವೇನು?

advertisement

ಸಾಮಾನ್ಯವಾಗಿ ಹಣ ಉಳಿತಾಯ ಮಾಡಲು ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿ ಹೂಡಿಕೆಯನ್ನು ಜನರು ಮಾಡುತ್ತಾರೆ. ಈ ನಿಶ್ಚಿತ ಠೇವಣಿ ಅಥವಾ ಎಫ್ ಡಿ (Fixed Deposit) ಹೂಡಿಕೆ ಸಾಕಷ್ಟು ಲಾಭವನ್ನು ತಂದುಕೊಡುತ್ತದೆ ನೀವು ಒಂದು ಬಾರಿ ಹೂಡಿಕೆ ಮಾಡಿ ಯೋಜನೆಯ ಮುಕ್ತಾಯದ ಅವಧಿಯಲ್ಲಿ ಅತ್ಯುತ್ತಮ ಆದಾಯ ಪಡೆದುಕೊಳ್ಳಬಹುದು ಹೆಚ್ಚಿನ ಬಡ್ಡಿದರ ಸಿಗುತ್ತದೆ ಯಾಕೆ ಗೊತ್ತಾ?

ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿ ದರ ನೀಡಿದರೆ ಬ್ಯಾಂಕ್ಗೆ ಏನು ಲಾಭ?

ಸಾಮಾನ್ಯವಾಗಿ ವಯಸ್ಸಾದವರು ಅಥವಾ ನಿವೃತ್ತಿ ಹೊಂದಿರುವವರು ಸ್ಥಿರ ಠೇವಣಿ ಹೂಡಿಕೆ ಮಾಡಿದರೆ ಇತರರಿಗಿಂತಲೂ ಹೆಚ್ಚಿನ ಬಡ್ಡಿ ದರವನ್ನು ನೀಡಲಾಗುತ್ತದೆ. ಕನಿಷ್ಠ 0.50% ನಷ್ಟಾದರೂ ಹಿರಿಯ ನಾಗರಿಕರಿಗೆ ಬ್ಯಾಂಕ್ ನೀಡುತ್ತದೆ.

 

 

ಹಿರಿಯ ನಾಗರಿಕರ ಆಲೋಚನೆಯನ್ನು ಬ್ಯಾಂಕ್ ಚೆನ್ನಾಗಿ ಅರ್ಥ ಮಾಡಿಕೊಂಡಿದೆ ಎಂದು ಹೇಳಬಹುದು. ಎಫ್‌ಡಿ (Fixed Deposit) ಹೂಡಿಕೆಯಲ್ಲಿ ದೀರ್ಘಕಾಲ ಹೂಡಿಕೆ ಮಾಡುವುದಕ್ಕೆ ಹಿರಿಯ ನಾಗರಿಕರು ಬ್ಯಾಂಕ್ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿದರ ಘೋಷಿಸಿದರೆ ನಿವೃತ್ತಿ ನಂತರ ಸಿಗುವ ಎಲ್ಲಾ ಹಣವನ್ನು ಕೂಡ ಎಫ್ ಡಿ ಯಲ್ಲಿ ಹೂಡಿಕೆ ಮಾಡುತ್ತಾರೆ. ಇದರಿಂದ ಬ್ಯಾಂಕ್ ಗೆ ಹೆಚ್ಚಿನ ಲಾಭ ಉಂಟಾಗುತ್ತದೆ.

advertisement

ಹಿರಿಯ ನಾಗರಿಕರಿಗೆ 0.50% ನಷ್ಟು ಹೆಚ್ಚಿನ ಬಡ್ಡಿ:

ಹೆಚ್ಚಿನ ಬ್ಯಾಂಕ್ ನಲ್ಲಿ ಹಿರಿಯ ನಾಗರಿಕರ ಹೂಡಿಕೆಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ. 50 ಮೂಲ ಅಂಕಗಳ ಲೆಕ್ಕಾಚಾರ ಅಂದರೆ 0.50% ನಷ್ಟು ಹೆಚ್ಚಿಗೆ ಬಡ್ಡಿ ದರ ಹಿರಿಯ ನಾಗರಿಕರಿಗೆ ನೀಡಲಾಗುತ್ತದೆ. 80 ವರ್ಷ ಅಥವಾ ಅದಕ್ಕಿಂತ ಹೆಚ್ಚಿಗೆ ವಯಸ್ಸಿನವರನ್ನು ಸೂಪರ್ ಸೀನಿಯರ್ ಸಿಟಿಜನ್ ಎಂದು ಪರಿಗಣಿಸಲಾಗುತ್ತದೆ ಹಾಗೂ ಅಂತವರಿಗೆ 0.25% ನಷ್ಟು ಹೆಚ್ಚುವರಿ ಬಡ್ಡಿ ಪ್ರಯೋಜನ ಸಿಗುತ್ತದೆ. ನೀವು ಬ್ಯಾಂಕ್ ಅನ್ನು ಬದಲಾಯಿಸಿದರೆ ಅಂದ್ರೆ ಹಣವನ್ನು ಹಿಂಪಡೆದು ಬೇರೆ ಬ್ಯಾಂಕ್ ನಲ್ಲಿ ಇಟ್ಟರೆ ಅದು ಎಫ್ ಡಿ ಮೇಲೆ ಯಾವುದೇ ರೀತಿಯ ಪರಿಣಾಮವನ್ನು ಬೀರುವುದಿಲ್ಲ ಮೊದಲು ಸಿಗುವ ಪ್ರಯೋಜನವನ್ನೇ ನೀವು ಪಡೆದುಕೊಳ್ಳಬಹುದು.

ಯಾವ ಬ್ಯಾಂಕ್ ಗಳು ಹೆಚ್ಚಿನ ಬಡ್ದಿ ನೀಡುತ್ತವೆ?

  • HDFC Bank
  • ICICI Bank
  • SBI Bank
  • Bank of Baroda
  • Small financial institutions
  • Non-Banking Financial Institutions (NBFCs)
  • Suryoday Small Finance Bank

ಹೀಗೆ ಬೇರೆ ಬೇರೆ ಬ್ಯಾಂಕ್ ಗಳಲ್ಲಿ ಹಿರಿಯ ನಾಗರಿಕರಿಗೆ ಅತ್ಯುತ್ತಮ ಬಡ್ಡಿದರದಲ್ಲಿ ಎಫ್ ಡಿ (Fixed Deposit) ಠೇವಣಿ ಲಾಭ ಪಡೆಯಬಹುದು. ಹಾಗಾಗಿ ಯಾವ ಬ್ಯಾಂಕ್ ನಲ್ಲಿ ಹೆಚ್ಚು ಲಾಭ ಸಿಗುವ ಬಡ್ದಿದರ ನೀಡಲಾಗುತ್ತಿದೆ ಎಂದು ತಿಳಿದುಕೊಂಡು FD ಠೇವಣಿ ಇಟ್ಟರೆ ಹಿರಿಯ ನಾಗರಿಕರಿಗೆ ಹೆಚ್ಚಿನ ಆದಾಯ ಪಡೆಯಬಹುದು. ನಿವೃತ್ತಿ ನಂತರದ ಆರ್ಥಿಕ ಬದುಕನ್ನು ಉತ್ತಮವಾಗಿಸಿಕೊಳ್ಳಬಹುದು.

advertisement

Leave A Reply

Your email address will not be published.