Karnataka Times
Trending Stories, Viral News, Gossips & Everything in Kannada

Solar Atta Chakki: ಮಹಿಳೆಯರಿಗೆ ಈ ಯೋಜನೆಯಲ್ಲಿ ಸಿಗುತ್ತಿದೆ ಉಚಿತ ಸೌರಶಕ್ತಿಯ ಹಿಟ್ಟಿನ ಗಿರಣಿ, ಹೀಗೆ ಪಡೆದುಕೊಳ್ಳಿ!

advertisement

ಕೇಂದ್ರ ಸರ್ಕಾರದ ಈ ಹೊಸ ಯೋಜನೆಯ ಬಗ್ಗೆ ತಿಳಿದರೆ ಖಂಡಿತವಾಗಿಯೂ ನಿಮಗೆ ಖುಷಿ ಆಗಬಹುದು. ಯಾಕಂದ್ರೆ ಅತಿ ಕಡಿಮೆ ಖರ್ಚಿನಲ್ಲಿ ಅಥವಾ ಖರ್ಚೇ ಇಲ್ಲದೆ ನೀವು ಸೌರ ಶಕ್ತಿಯನ್ನು ಬಳಸಿಕೊಂಡು ಹಿಟ್ಟಿನ ಗಿರಣಿಯನ್ನು ಸ್ಥಾಪಿಸುವುದಕ್ಕೆ ಕೇಂದ್ರ ಸರ್ಕಾರ ಅನುವು ಮಾಡಿಕೊಡುತ್ತಿದೆ. ಇದರಿಂದ ಯಾವುದೇ ವೆಚ್ಚ ಇಲ್ಲದೆ ನೀವು ಹಣ ಸಂಪಾದನೆ ಮಾಡಲು ಕೂಡ ಸಾಧ್ಯವಿದೆ.

Solar Atta Chakki ಸ್ಥಾಪನೆ:

ಕೇಂದ್ರ ಸರ್ಕಾರದ ಸೌರ ಹಿಟ್ಟಿನ ಗಿರಣಿ ಯೋಜನೆಯ (Solar Atta Chakki) ಪ್ರಯೋಜನವನ್ನು ಸಾಕಷ್ಟು ಜನ ಇಂದು ಪಡೆದುಕೊಳ್ಳುವಂತೆ ಆಗಿದೆ ಯಾಕೆಂದರೆ ಈ ಗಿರಣಿ ಯಂತ್ರ ಚಲಿಸುವುದಕ್ಕೆ ವಿದ್ಯುತ್ ಅಥವಾ ಡೀಸೆಲ್ ಬೇಕೇ ಬೇಕು. ಹಾಗಂದ ಮಾತ್ರಕ್ಕೆ ಹೆಚ್ಚು ವಿದ್ಯುತ್ ಖರ್ಚಾಗುತ್ತದೆ, ವೆಚ್ಚವೂ ಹೆಚ್ಚು ಎಂದು ನೀವು ಭಾವಿಸಬೇಡಿ. ಯಾಕಂದ್ರೆ ವಿದ್ಯುತ್ ಬಿಲ್ ಬರದೇ, ಡೀಸೆಲ್ ಖರೀದಿ ಮಾಡದೆ ನೀವು ಹಿಟ್ಟಿನ ಗಿರಣಿ ಆರಂಭಿಸಬಹುದು.

ಹೌದು, ಇದು ಕೇಂದ್ರ ಸರ್ಕಾರದ ಹೊಸ ಯೋಜನೆ ಆಗಿದ್ದು ಸೋಲಾರ್ ವಿದ್ಯುತ್ ಮೂಲಕ ಹಿಟ್ಟಿನ ಗಿರಣಿ ಅಥವಾ ಯಂತ್ರವನ್ನು ನೀವು ಚಲಾಯಿಸಬಹುದು. ಹಾಗಾಗಿ ವಿದ್ಯುತ್ ಕಡಿತದ ಸಮಸ್ಯೆ ಹಾಗೂ ಅಧಿಕ ವೆಚ್ಚದ ಸಮಸ್ಯೆ ನಿಮಗೆ ಇರುವುದಿಲ್ಲ. ಸೂರ್ಯ ಬೆಳಿಗ್ಗೆ ಉದಯಿಸಿದಾಗಿನಿಂದ ಸೂರ್ಯ ಮುಳುಗುವವರೆಗೂ ನೀವು ಸೋಲಾರ್ ಮೂಲಕವೇ ನಿಮ್ಮ ಹಿಟ್ಟಿನ ಗಿರಣಿ ಕಾರ್ಯ ನಿರ್ವಹಿಸುವಂತೆ ಮಾಡಬಹುದು.

Solar Atta Chakki ವೆಚ್ಚ ಎಷ್ಟು:

 

advertisement

 

ನೀವು ಎಷ್ಟು ಮೋಟಾರ್ ಸಾಮರ್ಥ್ಯದ ಹಿಟ್ಟಿನ ಗಿರಣಿ ಸ್ಥಾಪಿಸಲು ಬಯಸುತ್ತೀರಿ ಎನ್ನುವುದರ ಆಧಾರದ ಮೇಲೆ ಸೌರಫಲಕದ ವ್ಯಾಟ್ ಗಳನ್ನು ನಿರ್ಧರಿಸಬಹುದು ಉದಾಹರಣೆಗೆ 10 HP ಹಿಟ್ಟಿನ ಗಿರಣಿಗೆ 5kw ಸೌರಫಲಕ, 15 HP ಸೋಲಾರ್ ಡ್ರೈವ್ ಅಥವಾ VFD ಡ್ರೈವ್ ಸ್ಥಾಪಿಸಬೇಕಾಗುತ್ತದೆ. ಇದರ ಅಂದಾಜು ವೆಚ್ಚ ಆರು ಲಕ್ಷ ರೂಪಾಯಿಗಳು.

ಸರ್ಕಾರ ಕೊಡುತ್ತೆ ಸಬ್ಸಿಡಿ:

6 ಲಕ್ಷ ರೂಪಾಯಿ ವೆಚ್ಚ ಅಂದ್ರೆ, ಸಾಮಾನ್ಯರಿಗೆ ಇಷ್ಟು ಹಣವನ್ನು ಭರಿಸುವುದು ಕಷ್ಟವಾಗಬಹುದು. ಹಾಗಂತ ಮಾತ್ರಕ್ಕೆ ಟೆನ್ಶನ್ ಮಾಡಿಕೊಳ್ಳುವ ಅಗತ್ಯವಿಲ್ಲ. ಯಾಕೆಂದರೆ ನಿಮಗೆ ಹಿಟ್ಟಿನ ಗಿರಣಿ ಆರಂಭಿಸಲು ಹಣಕಾಸಿನ ಸಹಾಯವನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಅಷ್ಟೇ ಅಲ್ಲದೆ ಇದಕ್ಕೆ ರಾಜ್ಯ ಸರ್ಕಾರಗಳ ಸಹಕಾರ ಕೂಡ ಇದೆ ಹಾಗಾಗಿ ಸೌರ ಹಿಟ್ಟಿನ ಗಿರಣಿ (Solar Atta Chakki) ಸ್ಥಾಪನೆಗೆ ಬ್ಯಾಂಕ್ನಿಂದ ಸಾಲ ಪಡೆದುಕೊಂಡು ಸರ್ಕಾರದಿಂದ ಸಬ್ಸಿಡಿ ಪಡೆಯಬಹುದು. ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಹತ್ತಿರದ ಇಂಧನ ಇಲಾಖೆ ಅಥವಾ ಬ್ಯಾಂಕ್ ಗೆ ಹೋಗಿ ಮಾಹಿತಿ ಪಡೆದುಕೊಳ್ಳಿ.

ಸೌರ ಹಿಟ್ಟಿನ ಗಿರಣಿ ಆರಂಭಿಸುವುದರಿಂದ ಸಾಕಷ್ಟು ಜನ ಸ್ವಂತ ಉದ್ಯಮವನ್ನು ಆರಂಭಿಸಬಹುದು ಜೊತೆಗೆ ಇದು ಪರಿಸರ ಸ್ನೇಹಿ ಆಗಿರುವುದರಿಂದ, ವಾತಾವರಣಕ್ಕೂ ಯಾವುದೇ ಕೆಟ್ಟ ಕೆಮಿಕಲ್ ಸೇರಿಕೊಳ್ಳುವುದಿಲ್ಲ. ಜೊತೆಗೆ ಅತಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯವನ್ನು ಕೂಡ ತಂದುಕೊಡಬಲ್ಲದು.

advertisement

Leave A Reply

Your email address will not be published.