Karnataka Times
Trending Stories, Viral News, Gossips & Everything in Kannada

Fish Farming: ಇಂತಹ ಕೃಷಿಕರಿಗೆ ಸರ್ಕಾರ ಕೊಡುತ್ತಿದೆ 4.40 ಲಕ್ಷ ರೂಪಾಯಿ ಸಹಾಯಧನ, ಹೀಗೆ ಅರ್ಜಿ ಸಲ್ಲಿಸಿ!

advertisement

ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅನೇಕ ವರ್ಷದಿಂದ ನೆರವು ನೀಡುತ್ತಲೇ ಬಂದಿದೆ. ಮೀನುಗಾರಿಕೆಯಲ್ಲಿಯೂ ಅನೇಕ ಪ್ರಕಾರಗಳಿದ್ದು ಅವುಗಳನ್ನು ಉತ್ತೇಜಿಸುವ ಮೂಲಕ ಯುವ ಸಮುದಾಯಕ್ಕೆ ಸ್ವ ಉದ್ಯೋಗ ನೀಡುವುದು, ವ್ಯಾಪಾರ , ವಾಣಿಜ್ಯ ಕ್ಷೇತ್ರದ ಅಭಿವೃದ್ಧಿ ಮಾಡುವುದು ಸರಕಾರದ ಪ್ರಮುಖ ಗುರಿಗಳಾಗಿದೆ. ಹಾಗಾಗಿ ಮೀನುಗಾರಿಕೆಯಲ್ಲಿ ಇಲಾಖೆಯ ವತಿಯಿಂದಲೂ ವಿವಿಧ ಯೋಜನೆಗೆ ಫಲಾನುಭವಿಗಳಾಗಲು ಅರ್ಜಿ ಆಹ್ವಾನಿಸಲಾಗಿದೆ.

2023-24ನೇ ಸಾಲಿನಲ್ಲಿ ಮೀನುಗಾರಿಕೆ (Fish Farming) ಇಲಾಖೆಯ ಅನೇಕ ಯೋಜನೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಅರ್ಹರು ಈ ಒಂದು ಪ್ರಯೋಜನ ಪಡೆಯಬಹುದಾಗಿದೆ. ಇದು ಸಹಾಯಧನ, ಸಬ್ಸಿಡಿ, ಪರಿಕರ ವಿತರಣೆ, ನಷ್ಟ ಪರಿಹಾರ ಇನ್ನು ಅನೇಕ ಅಂಶಗಳು ಸಹ ಕೂಡಿರುತ್ತದೆ. ಅದೇ ರೀತಿ ಮೀನುಗಾರಿಕೆಯಲ್ಲಿ ಕೈಗೊಳ್ಳಬೇಕಾದ ಪೂರ್ವ ರಕ್ಷಣ ಕ್ರಮದ ಬಗ್ಗೆ ಕೂಡ ಚಿಂತಿಸಲಾಗುತ್ತಿದೆ. ಪ್ರಸ್ತುತ ಯಾವ ಯೋಜನೆಗೆ ಅರ್ಜಿ ಆಹ್ವಾನಿಸಿದ್ದಾರೆ ಇತರ ಪ್ರಮುಖ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಬಹುದು.

ಯಾವುದು ಈ ಯೋಜನೆ:

 

 

advertisement

ಒಳನಾಡು ಮೀನುಗಾರಿಕೆ (Fish Farming) ಅಭಿವೃದ್ಧಿ ಸಹಾಯ ಯೋಜನೆಯ ಅಡಿಯಲ್ಲಿ ಪರಿಶಿಷ್ಟ ಜಾತಿಯ ಮೀನು ಕೃಷಿಕರು ಮೀನು ಕೃಷಿಗೆ ಸಂಬಂಧಿಸಿದಂತೆ ಕೊಳ ನಿರ್ಮಾಣ ಮಾಡಲು 4.40ಲಕ್ಷ ರೂಪಾಯಿ ಹಣ ಅಗತ್ಯವಿದ್ದು ಅದನ್ನು ಸಹಾಯಧನದ ರೂಪದಲ್ಲಿ ನೀಡಲು ಸರಕಾರ ತೀರ್ಮಾನಿಸಿದೆ. ಹಾಗಾಗಿ ಆಸಕ್ತ ಅರ್ಹ ಮೀನು ಕೃಷಿಕರು ಈ ಯೋಜನೆ ಸೌಲಭ್ಯ ಪಡೆಯಬಹುದು.

ಎಲ್ಲಿ ಅರ್ಜಿ ಸಲ್ಲಿಸಬೇಕು?

ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವವರು ಅಗತ್ಯ ದಾಖಲೆಗಳ ಸಮೇತ https://ballari.nic.in/ ವೆಬ್ಸೈಟ್ ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಅದೇ ರೀತಿ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸುವವರು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಯಾವಾಗ ಕೊನೆ ದಿನ

ಈ ಬಗ್ಗೆ ಯಾವುದೆ ಗೊಂದಲ ಇತರ ಸಮಸ್ಯೆ ಪರಿಹಾರಕ್ಕಾಗಿ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ 8970754167 ಅಥವಾ ಉಪ ನಿರ್ದೇಶಕರ ಸಂಖ್ಯೆ 9449593156 ಗೆ ಸಂಪರ್ಕಿಸಬಹುದು. ಈ ಅರ್ಜಿ ಸಲ್ಲಿಕೆಗಾಗಿದ್ದ ಬಳಿಕ ಅರ್ಜಿ ಸಲ್ಲಿಸಿದ್ದ ದಾಖಲೆ ಪರಿಶೀಲನೆ ಕಟ್ಟು ನಿಟ್ಟಾಗಿ ಮಾಡಲಾಗುವುದು.ಅರ್ಜಿ ಸಲ್ಲಿಸಲು ಫೆ. 20 ಕೊನೆ ದಿನವಾಗಿದೆ.

advertisement

Leave A Reply

Your email address will not be published.