Karnataka Times
Trending Stories, Viral News, Gossips & Everything in Kannada

Pension: ಗಂಡನ ಸಾವಿನ ನಂತರ ಹೆಂಡತಿಗೆ ಪಿಂಚಣಿ ದೊರೆಯುತ್ತದೆಯೆ? ನಿಯಮದಲ್ಲಿ ಏನಿದೆ?

advertisement

ಹುಟ್ಟಿನಂತೆ ಸಾವು ಸಹಜ ಕ್ರಿಯೆ ಖಾಸಗಿ ವಲಯದ ಉದ್ಯೋಗಿಗಳು ತಮ್ಮ ಸಂಬಳದ 12% ವನ್ನು PF ನಿಧಿಯಲ್ಲಿ ಠೇವಣಿ ಮಾಡುತ್ತಾರೆ. ನಿವೃತ್ತಿಯ ನಂತರ ಈ ಮೊತ್ತವನ್ನು ಉದ್ಯೋಗಿಗೆ ಪಿಂಚಣಿಯಾಗಿ ನೀಡಲಾಗುತ್ತದೆ. ಸರ್ಕಾರಿ ನೌಕರರ ಹಾಗೆ ಇವರಿಗೆ ನಿವೃತ್ತಿ ನಂತರ ಯಾವುದೇ ಹಣದ ಆದಾಯ ಇಲ್ಲದ ಕಾರಣ ಈ ಯೋಜನೆ ಶುರುವಾದದ್ದು. ಒಂದು ವೇಳೆ ಕೆಲಸ ಮಾಡುವ ಪತಿ ನಿವೃತ್ತಿಯ ನಂತರ ಮರಣ ಹೊಂದಿದಲ್ಲಿ ಪತ್ನಿಗೆ ಈ ಮೊತ್ತ ದೊರೆಯುತ್ತದೆಯೇ ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳಲಿದ್ದೇವೆ.

ಹಣ ಬಿಡುಗಡೆ ಆಗಲು ಇರುವ ನಿಯಮಗಳೇನು?

ಇದಕ್ಕಾಗಿ ಕೆಲವೊಂದು ನಿಯಮಗಳಿದ್ದು ಅವುಗಳೇನು ಹಾಗೂ ಹೇಗೆ ಅನುಸರಿಸಬೇಕು ಎಂಬುದನ್ನು ನೋಡೋಣ ಪತಿಯ ಮರಣಾ ನಂತರ ಅವರ ಪಿಂಚಣಿ (Pension) ಮೊತ್ತವನ್ನು ಪತ್ನಿ ಪಡೆಯಬಹುದಾಗಿದ್ದರೂ ಇದಕ್ಕೆ ಕೆಲವೊಂದು ಷರತ್ತುಗಳಿವೆ. ಪಿಂಚಣಿ (Pension) ನಿಧಿಯು ಉದ್ಯೋಗಿ ಹಾಗೂ ಅವರ ಕುಟುಂಬಕ್ಕೆ ಆರ್ಥಿಕ ಭದ್ರತೆ ಹಾಗೂ ಸ್ಥಿರತೆಯನ್ನೊದಗಿಸುತ್ತದೆ.

ಪತಿಯ ಮರಣಾ ನಂತರ ಪತ್ನಿಗೆ ಪಿಂಚಣಿಯ ಹಕ್ಕು ಇದೆಯೇ?

 

 

ಖಾಸಗಿ ವಲಯದಲ್ಲಿ ಉದ್ಯೋಗ ನಿರ್ವಹಿಸುವ ಉದ್ಯೋಗಿಯ ನಿವೃತ್ತಿ ವಯಸ್ಸು 58 ವರ್ಷಗಳಾಗಿದ್ದು ಖಾಸಗಿ ಸಂಸ್ಥೆಯಲ್ಲಿ 10 ವರ್ಷಗಳ ಕಾಲ ಕೆಲಸ ಮಾಡುತ್ತಿದ್ದರೆ ಪಿಂಚಣಿ (Pension) ಗೆ ಅರ್ಹರಾಗಿರುತ್ತಾರೆ.
ನೌಕರಿಯ ನಂತರ ಉದ್ಯೋಗಿಗೆ ಪಿಂಚಣಿ ನೀಡಲಾಗುತ್ತದೆ. ಈ ಪರಿಸ್ಥಿತಿಯಲ್ಲಿ 58 ವರ್ಷ ತುಂಬಿದ ನಂತರ ಉದ್ಯೋಗಿ ಮರಣ ಹೊಂದಿದರೆ ಆತನ ಪತ್ನಿಗೆ ಪಿಂಚಣಿಯ ಲಾಭ ಸಿಗುತ್ತದೆ.

ಒಮ್ಮೊಮ್ಮೆ ಉದ್ಯೋಗಿ ಅಕಸ್ಮತ್ತಾಗಿ ಮರಣ ಹೊಂದುತ್ತಾರೆ. ದೈಹಿಕ ಅಸ್ವಸ್ಥತೆಯಿಂದ ಉದ್ಯೋಗಿ ಮರಣಹೊಂದಿದಾಗ ಇಪಿಎಫ್ ಅಡಿಯಲ್ಲಿ ಪಡೆದ ಮೊತ್ತವು ಮೃತರಾದವರ ಕುಟುಂಬಕ್ಕೆ ಸಾಕಷ್ಟು ಸಹಾಯವನ್ನು ಒದಗಿಸುತ್ತದೆ.

advertisement

EPFO ಅಡಿಯಲ್ಲಿ ಪಿಂಚಣಿ ಲಭ್ಯವಿದೆ.

ಖಾಸಗಿ ಉದ್ಯೋಗಿಗಳಿಗೆ ಪಿಂಚಣಿ ನೀಡುವ ಜವಾಬ್ದಾರಿಯನ್ನು ಇಪಿಎಫ್‌ಒ ಹೊಂದಿದೆ. EPFO ಒಂದು ರೀತಿಯ ಭವಿಷ್ಯ ನಿಧಿಯಾಗಿದ್ದು, ಉದ್ಯೋಗಿಗೆ ಆರ್ಥಿಕವಾಗಿ ಸಬಲರಾಗಲು ಇದನ್ನು ನೀಡಲಾಗುತ್ತದೆ.
ಪ್ರತಿ ತಿಂಗಳು ಉದ್ಯೋಗಿ ತನ್ನ ಸಂಬಳದ ನಿರ್ದಿಷ್ಟ ಮೊತ್ತವನ್ನು ಇಪಿಎಫ್ ನಿಧಿಗೆ ನೀಡುತ್ತಾನೆ. ಈ ಮೊತ್ತವು ಉದ್ಯೋಗಿಯ ಮೂಲ ವೇತನದ 12% ವಾಗಿದೆ. ಉದ್ಯೋಗಿಯೊಂದಿಗೆ ಕಂಪನಿಯು ಸಹ ಇಪಿಎಫ್‌ಗೆ ಕೊಡುಗೆಯನ್ನು ನೀಡುತ್ತದೆ.

ಕಂಪನಿಯು ಪ್ರತಿ ತಿಂಗಳು ಪಿಎಫ್ ಖಾತೆಗೆ ಉದ್ಯೋಗಿಯ ಮೊತ್ತವನ್ನು ನೀಡುತ್ತದೆ. ನಿವೃತ್ತಿಯ ನಂತರ ಪಿಂಚಣಿ ಪಾವತಿಸಲು ಈ ನಿಧಿಯನ್ನು ಬಳಸಲಾಗುತ್ತದೆ. ಇದು ಉದ್ಯೋಗಿಗೆ ಹಾಗೂ ಅವರ ಕುಟುಂಬಕ್ಕೆ ಆರ್ಥಿಕ ನೆರವನ್ನೊದಗಿಸುತ್ತದೆ.

Pension ಯಾವಾಗ ದೊರೆಯುತ್ತದೆ?

ಸರ್ಕಾರ ನಿವೃತ್ತಿ ವಯಸ್ಸನ್ನು 58 ವರ್ಷಕ್ಕೆ ನಿಗದಿಪಡಿಸಿದೆ. ಉದ್ಯೋಗಿ ನೀಡಿದ ಮೊತ್ತದ ಒಂದು ಭಾಗವನ್ನು PF ನಿಧಿಯಲ್ಲಿ ಮತ್ತು ಒಂದು ಭಾಗವನ್ನು ಇಪಿಎಸ್‌ನಲ್ಲಿ ಠೇವಣಿ ಇಡಲಾಗುತ್ತದೆ.
ಉದ್ಯೋಗಿ 58 ವರ್ಷಗಳನ್ನು ದಾಟಿದಾಗ, ಅವರು ಈ ನಿಧಿಯಿಂದ ಹಣವನ್ನು ಹಿಂಪಡೆಯಬಹುದು. ನೌಕರರು ಪಿಎಫ್ ಖಾತೆಯಿಂದ ಒಂದು ದೊಡ್ಡ ಮೊತ್ತವನ್ನು ಹಿಂಪಡೆಯಬಹುದು, ಆದರೆ ಇಪಿಎಸ್ ಖಾತೆಯಲ್ಲಿ ಠೇವಣಿ ಮಾಡಿದ ಹಣವನ್ನು ಉದ್ಯೋಗಿಗೆ ಪಿಂಚಣಿಯಾಗಿ ನೀಡಲಾಗುತ್ತದೆ.

ಪತಿಯ ಪಿಂಚಣಿಯನ್ನು ಪತ್ನಿಯು ಯಾವಾಗ ಪಡೆಯುತ್ತಾರೆ:

ಉದ್ಯೋಗಿ 58 ವರ್ಷಗಳ ನಂತರ ಮರಣಹೊಂದಿದರೆ, ಆತನ ಪತ್ನಿ ಪತಿಯ ಪಿಂಚಣಿ ಹಕ್ಕನ್ನು ಪಡೆಯುತ್ತಾರೆ. ಇದರೊಂದಿಗೆ ನಾಮಿನಿಯು ಪೂರ್ಣ ಮೊತ್ತವನ್ನು ಪಡೆಯುತ್ತಾರೆ. ಉದ್ಯೋಗಿ ನಿವೃತ್ತಿಯ ನಂತರ ಮರಣಹೊಂದಿದರೆ, ಪಿಂಚಣಿ ಮೊತ್ತದ ಅರ್ಧದಷ್ಟು ಅತನ ಪತ್ನಿಗೆ ಸಲ್ಲುತ್ತದೆ.ಉದ್ಯೋಗಿ ನಿವೃತ್ತಿಯ ಮೊದಲು ಮರಣಹೊಂದಿದರೆ, ಈ ಮೊತ್ತವನ್ನು ಪತ್ನಿಗೆ ಪಿಂಚಣಿಯಾಗಿ ನೀಡಲಾಗುತ್ತದೆ. ಇದರಲ್ಲಿ, ನೌಕರನ ಸಾವಿನ ನಡುವಿನ ಅಂತರವು ಹೆಚ್ಚಿದಷ್ಟೂ ಕಡಿಮೆ ಪಿಂಚಣಿ ಮೊತ್ತವನ್ನು ನೀಡಲಾಗುತ್ತದೆ.ವಿಧವೆಯರ ಪಿಂಚಣಿ ಮೊತ್ತವನ್ನು 1,000 ರೂ.ಗೆ ನಿಗದಿಪಡಿಸಲಾಗಿದೆ. ಅಂದರೆ ನೌಕರನ ಮರಣದ ನಂತರ ವಿಧವೆ ಪತ್ನಿಗೆ ಪಿಂಚಣಿಯಾಗಿ 1,000 ರೂವನ್ನು ನೀಡಲಾಗುತ್ತದೆ.ಒಟ್ಟಿನಲ್ಲಿ ಸರ್ಕಾರದ ಈ ಯೋಜನೆಯಿಂದ ಪಾಲಾನುಭವ ಪಡೆಯಬಹುದಾಗಿದೆ.

advertisement

Leave A Reply

Your email address will not be published.