Karnataka Times
Trending Stories, Viral News, Gossips & Everything in Kannada

ATM: ಎಟಿಎಂ ನಿಂದ ಹಣ ಸಿಗದಿದ್ದರೂ ಖಾತೆಯಲ್ಲಿ ಹಣ ಕಟ್ ಆಗಿದ್ಯಾ? ಈ ಕ್ರಮ ಅನುಸರಿಸಿ!

advertisement

ಇತ್ತೀಚಿನ ದಿನದಲ್ಲಿ ಎಟಿಎಂ ಕಾರ್ಡ್ ಅನ್ನು ಬಳಕೆ ಮಾಡುವವರ ಸಂಖ್ಯೆ ಈ ಹಿಂದಿಗಿಂತ ಕಡಿಮೆ ಆಗಿದ್ದಾರೆ ಎನ್ನಬಹುದು. ಅದಕ್ಕೆ ಮುಖ್ಯ ಕಾರಣ ಡಿಜಿಟಲ್ ಇಂಡಿಯಾದ ಕ್ಯಾಶ್ ಲೆಸ್ ಸೊಸೈಟಿ ಎಂದು ಹೇಳಬಹುದು. ಹಾಗಿದ್ದರೂ ಕೆಲ ಪ್ರಮುಖ ಸ್ಥಳಗಳಿಗೆ ಪ್ರಯಾಣ ವೇಳೆ ಹಣ ಕೂಡ ಬೇಕಾಗಿದ್ದು ಅದಕ್ಕೆಂದು ನೀವು ಎಟಿಎಂ (ATM) ನಲ್ಲಿ ಹಣ ವಿಡ್ರಾ ಮಾಡಲು ಮುಂದಾದರೆ ಅನೇಕ ಸಲ ನಿಮ್ಮ ಅಕೌಂಟ್ ಹಣ ಕಟ್ಟಾಗುತ್ತದೆ, ಆದರೆ ಮಿಷನ್ ನಲ್ಲಿ ಹಣ ಮಾತ್ರ ಬರದು, ಇದಕ್ಕೆ ಕಾರಣ ಏನು? ಹಾಗಾದಾಗ ನಿಮ್ಮ ಹಣ ಮರಳಿ ಪಡೆಯುವುದು ಹೇಗೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಕಾರಣ ಏನು?

 

 

ಈ ಬಗ್ಗೆ RBI ನಲ್ಲಿ ನಿಯಮ ಉಲ್ಲೇಖ ಮಾಡಲಾಗಿದೆ. ಅದರ ಪ್ರಕಾರ ಈ ರೀತಿಯಾಗಲು ಮುಖ್ಯ ಕಾರಣವನ್ನು ಉಲ್ಲೇಖಿಸಲಾಗಿದೆ. ಅನೇಕ ಸಂದರ್ಭದಲ್ಲಿ ಬ್ಯಾಂಕಿನ ATM Machine ನಲ್ಲಿ ಕಂಡುಬರುವ ತಾಂತ್ರಿಕ ದೋಷ ಇದಕ್ಕೆ ಮುಖ್ಯ ಕಾರಣ ಎಂದು ತಿಳಿದುಬಂದಿದೆ. ಈ ತರವಾದ ತಾಂತ್ರಿಕ ದೋಷ ಕೆಲವೊಂದು ಸಲ ನೀವು ಹಣ ತೆಗೆಯಲು ಮುಂದಾದಾಗ ಮಿಷನ್ ಒಳಗೆ ಹಣ ಅರ್ಧಕ್ಕೆ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ನಿಮ್ಮ ಅಕೌಂಟ್ ನಿಂದ ಹಣ ಕಟ್ ಆಗಲಿದೆ ಮತ್ತು ನಿಮ್ಮ ಕೈಗೆ ಹಣ ಸೇರುವುದೇ ಇಲ್ಲ. ಅಂತಹ ಸಮಸ್ಯೆ ಬಗೆಹರಿಸಲು ಬ್ಯಾಂಕ್ ಗಳಿಗೆ 5 ದಿನಗಳ ವರೆಗೆ ಕಾಲಾವಕಾಶ ನೀಡಲಾಗಿದೆ.

ದಂಡ ಪಾವತಿ:

advertisement

ಎಟಿಎಂ ನಿಂದ ಅಗತ್ಯ ವಿಚಾರಕ್ಕಾಗಿ ಹಣ ಪಡೆಯಲು ಮುಂದಾದಾಗ ಹಣ ಬರದೆ ನಿಮ್ಮ ಖಾತೆಯಿಂದ ಕಡಿತವಾದರೆ ಅದು ಜನರಿಂದ ಉದ್ದೇಶಪೂರ್ವಕವಾಗಿ ಆದ ತಪ್ಪಲ್ಲ. ಹಾಗಾಗಿ ಬ್ಯಾಂಕ್ ಗಳು ಇಂತಹ ಸಂದರ್ಭಗಳಲ್ಲಿ ಕೆಲ ಜವಬ್ದಾರಿ ವಹಿಸಲಿದೆ. ವ್ಯಕ್ತಿ ತನಗೆ ಈ ರೀತಿ ಆಗಿದೆ ಎಂದು ದೂರು ಸಲ್ಲಿಸಿದ್ದ 5ದಿನದ ಒಳಗೆ ಆ ವ್ಯಕ್ತಿ ಖಾತೆಗೆ ಹಣ ವಾಪಾಸ್ಸು ಜಮೆ ಮಾಡಬೇಕು ಇಲ್ಲವಾದರೆ 6ನೇ ದಿನದಿಂದ ಬ್ಯಾಂಕ್ 100 ರೂಪಾಯಿ ಬಡ್ಡಿಯಂತೆ ಹಣ ವಾಪಾಸ್ಸು ನೀಡುವವರೆಗೂ ಗ್ರಾಹಕನಿಗೆ ನೀಡಬೇಕಾಗುತ್ತದೆ.

ಹೀಗೆ ಮಾಡಿ:

ಇಂತಹ ಸಂದರ್ಭಗಳಲ್ಲಿ ನೀವು ಮೊದಲು ಹೋಗಿ ಬ್ಯಾಂಕ್ ಶಾಖೆಗೆ ಈ ಬಗ್ಗೆ ದೂರು ನೀಡಬೇಕು. ಗ್ರಾಹಕರ ಸೇವೆಯ ನಂಬರ್ ಗೆ ಕರೆ ಮಾಡುವ ಮೂಲಕ ಆದ ಸಮಸ್ಯೆ ಬಗ್ಗೆ ದೂರು ನೀಡಬೇಕು. ಬಳಿಕ ದೂರನ್ನು ದಾಖಲಿಸಿ, ಆ ಬಗ್ಗೆ ಬ್ಯಾಂಕ್ ತನಿಖೆ ಆರಂಭಿಸಲಿದೆ. ಹಾಗೆ 5 ದಿನಗಳಲ್ಲಿ ನಿಮ್ಮ ಮೊತ್ತ ನಿಮಗೆ ಜಮೆ ಆಗಲಿದೆ. ಅಲ್ಲಿವರೆಗೆ ಎಟಿಎಂ ಸ್ಲಿಪ್ ಮತ್ತು ನಿಮ್ಮ ಬ್ಯಾಂಕ್ ಮೆಸೇಜ್ ಅನ್ನು ಸುರಕ್ಷಿತವಾಗಿ ಇಡಬೇಕು ಇಲ್ಲವಾದರೆ ನಿಮ್ಮ ಹೇಳಿಕೆಗೆ ಸಾಕ್ಷಿ ಇಲ್ಲವಾಗುತ್ತದೆ.

ದೂರು ಸಲ್ಲಿಸಲು ಅವಕಾಶ:

ಅನೇಕ ಸಲ ಬ್ಯಾಂಕ್ ಗೆ ಅಲೆದಾಡಿದರೂ 5ದಿನದ ಒಳಗೆ ಹಣ ಬರಲಾರದು. ಆರನೇ ದಿನದಿಂದ ಹೆಚ್ಚುವರಿ ಮೊತ್ತ 100 ರೂಪಾಯಿ ಸಹ ಬರಲಾರದು ಹಾಗೆ ಆಗಿ 30 ದಿನ ಕಳೆದರೆ ಆಗ ನೀವು ಈ ವಿಚಾರದ ಬಗ್ಗೆ ಕುಂದು ಕೊರತೆ ನಿವಾರಣೆ ಅಧಿಕಾರಿಗಳಿಗೆ ದೂರು ನೀಡಬಹುದು.

advertisement

Leave A Reply

Your email address will not be published.