Karnataka Times
Trending Stories, Viral News, Gossips & Everything in Kannada

Sukanya Samriddhi Yojana: 4,000ರೂ. ಹೂಡಿಕೆ ಮಾಡುವ ಮೂಲಕ ರೂ 22 ಲಕ್ಷ ಪಡೆಯಿರಿ!

advertisement

ಇಂದು ಹೆಣ್ಣುಮಕ್ಕಳ ಅಭಿವೃದ್ಧಿ ಗಾಗಿ ಸರಕಾರ ಹಲವು ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತಲೆ ಇದೆ. ಶಿಕ್ಷಣ ದ ಸೌಲಭ್ಯದ ಜೊತೆಗೆ ಭವಿಷ್ಯದ ಒಳಿತಾಗಿ ಹಲವು ಸ್ಕಿಮ್ ಗಳನ್ನು ಕೂಡ ಸರಕಾರ ಜಾರಿ ಮಾಡಿದೆ. ಅದೇ ರೀತಿ ಕೇಂದ್ರ ಸರ್ಕಾರವು ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana) ಯನ್ನು ಜಾರಿಗೆ ತಂದಿದ್ದು ಹೆಣ್ಣು ಮಗುವಿನ ಭವಿಷ್ಯದ ಸುರಕ್ಷತೆಗಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಪ್ರಯೋಜನ ಏನು?

 

 

ಈ ಯೋಜನೆಯ ಮೂಲಕ ನೀವು ಕನಿಷ್ಟ 250 ರೂಪಾಯಿ ಮತ್ತು ಗರಿಷ್ಠ 1.5 ಲಕ್ಷ ರೂಪಾಯಿ ಹೂಡಿಕೆ ಮಾಡಬೇಕು. ಬ್ಯಾಂಕ್ ಮತ್ತು ಅಂಚೆ ಕಚೇರಿಗಳಲ್ಲಿ ಖಾತೆ ತೆರೆಯಬಹುದಾಗಿದ್ದು ಹೆಣ್ಣು ಮಗುವಿನ‌ ಹೆಸರಿನಲ್ಲಿಯೇ ಖಾತೆ ತೆರೆಯಬೇಕು.ಈ ಯೋಜನೆಯಲ್ಲಿ ಆದಾಯ ತೆರಿಗೆ ಕಾಯ್ದೆ, 1061 ರ ಸೆಕ್ಷನ್ 80 ಸಿ ಮೂಲಕ ಬಡ್ಡಿದರಗಳು ಮತ್ತು ತೆರಿಗೆ ಪ್ರಯೋಜನಗಳನ್ನು ಕೂಡ ನೀವು ಪಡೆಯಬಹುದು.ಈ ಯೋಜನೆಯ ಮುಕ್ತಾಯ ಮೊತ್ತವು ಹೂಡಿಕೆ ಮಾಡಿದ ಮೊತ್ತವನ್ನು ಅವಲಂಬಿಸಿ ಇರುತ್ತದೆ.

advertisement

ಎಷ್ಟು ಬಡ್ಡಿ ಪಡೆಯಬಹುದು:

ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana) ಯಲ್ಲಿ ಹೂಡಿಕೆ ಮಾಡಿದ್ರೆ ನೀವು 8.2% ದರದಲ್ಲಿ ಬಡ್ಡಿಯನ್ನು ಪಡೆಯ ಬಹುದಾಗಿದೆ. ಇಂದು ಕೇಂದ್ರ ಸರ್ಕಾರವು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಬಡ್ಡಿಯನ್ನು ಹೆಚ್ಚು ಮಾಡಿದ್ದು ಈ ಹಿಂದೆ ಈ ಯೋಜನೆ ಯಲ್ಲಿ ಹೂಡಿಕೆಯ ಮೇಲೆ 8% ದರದಲ್ಲಿ ಬಡ್ಡಿಯನ್ನು ನೀಡ ಲಾಗುತ್ತಿತ್ತು. ಈಗ ಶೇ.8.2 ನೀಡ್ತಾ ಇದೆ.

ಇಷ್ಟು ಹೂಡಿಕೆ ಮಾಡಿ:

ಈ ಯೋಜನೆಯು ಮಗಳಿಗೆ 18 ವರ್ಷ ತುಂಬಿದಾಗ ಶಿಕ್ಷಣ ಅಥವಾ ಮದುವೆಗಾಗಿ ಖಾತೆಯಿಂದ ಮೊತ್ತವನ್ನು ಹಿಂಪಡೆಯಲು ಅವಕಾಶ ಇದೆ. ನೀವು ಪ್ರತಿ ತಿಂಗಳು ರೂ 4,000 ಭರಿಸಿದ್ರೆ ನೀವು ರೂ 48,000 ಹೂಡಿಕೆ ಮಾಡಲು ಸಾಧ್ಯವಾಗುತ್ತದೆ ನೀವು 15 ವರ್ಷಗಳ ವರೆಗೆ ಖಾತೆಗೆ ಹಣ ಜಮಾ ಮಾಡಿದ್ರೆ 7 ಲಕ್ಷ 20 ಸಾವಿರ ಪಡೆಯುತ್ತೀರಿ. 21 ವರ್ಷಗಳ ನಂತರ ಮೆಚ್ಯೂರಿಟಿ ಅಂದರೆ 2045 ರಲ್ಲಿ, ನೀವು ಕೇವಲ 15 ಲಕ್ಷದ 14 ಸಾವಿರ ಬಡ್ಡಿಯನ್ನು ಪಡೆಯಬಹುದಾಗಿದ್ದು ಅಂದರೆ 7.20 ಲಕ್ಷ ಹೂಡಿಕೆಯ ಮೇಲೆ 15.14 ಲಕ್ಷ ಬಡ್ಡಿ ಪಡೆಯಬಹುದು. ಮೆಚ್ಯೂರಿಟಿಯಲ್ಲಿ ನೀವು ಹೂಡಿಕೆ ಮೊತ್ತ ಮತ್ತು ಬಡ್ಡಿ ಮೊತ್ತ ಒಟ್ಟು 22 ಲಕ್ಷ 34 ಸಾವಿರ ರೂ. ಪಡೆಯಬಹುದು.

advertisement

Leave A Reply

Your email address will not be published.