Karnataka Times
Trending Stories, Viral News, Gossips & Everything in Kannada

Ladli Behna Yojana: ಮನೆ ಇಲ್ಲದ ಮಹಿಳೆಯರಿಗೆ ಇಲ್ಲಿದೆ ಸ್ವಂತ ಮನೆಯನ್ನು ಹೊಂದುವ ಅವಕಾಶ, ಲಾಡ್ಲಿ ಬೆಹೆನಾ ಯೋಜನೆಯಲ್ಲಿ ಈಗಲೇ ಅರ್ಜಿ ಸಲ್ಲಿಸಿ.

advertisement

ಮಹಿಳೆಯರಿಗೆ ನೆರವಾಗುವಂತಹ ಹಲವು ಯೋಜನೆಗಳನ್ನು ಸರಕಾರ ಕಾಲ ಕಾಲಕ್ಕೆ ನೀಡುತ್ತಲೇ ಇರುತ್ತದೆ. ಮಹಿಳೆಯರು ಸ್ವಾವಲಂಬಿ ಹಾಗೂ ಯಾವುದೇ ತರಹದ ಕಷ್ಟ ಇವರಿಗೆ ಬರಬಾರದು ಎಂಬ ಕಾರಣಕ್ಕಾಗಿ ಹಲವು ಯೋಜನೆಗಳನ್ನು ಸರಕಾರಗಳು ರೂಪಿಸುತ್ತವೆ. ಈ ಯೋಜನೆಯ ಅಡಿಯಲ್ಲಿ ಯಾರಿಗೆಲ್ಲಾ ಅರ್ಹತೆ ಇದೆಯೋ ಅಂತಹ ಮಹಿಳೆಯರು ಇದರ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಾರೆ.

ಈಗ ಇಂಥದ್ದೇ ಇನ್ನೊಂದು ಯೋಜನೆ ಮನೆ ಇಲ್ಲದ ಮಹಿಳೆಯರಿಗೆ ನೆರವಾಗುವಂತೆ ರೂಪಿಸಲಾಗಿದೆ. ಇದರಿಂದ ಸ್ವಂತ ಮನೆ ಇರದ ಎಲ್ಲಾ ಮಹಿಳೆಯರು ತಮ್ಮದೇ ಆದ ಸ್ವಂತ ಮನೆಯನ್ನು ಕಟ್ಟಿಕೊಳ್ಳಬಹುದಾದ ಅವಕಾಶವನ್ನು ನೀಡುತ್ತದೆ. ಇದರಿಂದಾಗಿ ಮಹಿಳೆಯರು ಕಚ್ಚಾ ಮನೆಗಳಲ್ಲಿ ವಾಸಿಸಬೇಕಾದ ಅನಿವಾರ್ಯತೆ ಇಲ್ಲದಾಗುತ್ತದೆ.

Ladli Behna Yojana:

 

 

advertisement

ಲಾಡ್ಲಿ ಬೆಹೆನಾ (Ladli Behna) ಎನ್ನುವ ಹೆಸರಿನ ಯೋಜನೆಯನ್ನು ಈಗ ಸರ್ಕಾರ ರೂಪಿಸಿದೆ. ಈ ಯೋಜನೆ ಅಡಿಯಲ್ಲಿ ನೀವು ಅರ್ಜಿ ಸಲ್ಲಿಸಿ ಪಕ್ಕಾ ಮನೆ ನಿರ್ಮಿಸಿಕೊಳ್ಳಲು ಆರ್ಥಿಕ ನೆರವನ್ನು ಪಡೆಯಬಹುದಾಗಿದೆ. ಇದು ಮುಖ್ಯವಾಗಿ ಬಡ ಕುಟುಂಬಗಳಿಗೆ ಮನೆಯನ್ನು ನೀಡಬೇಕು ಎಂಬ ಉದ್ದೇಶದಿಂದ ಮಾಡಿದ ಯೋಜನೆಯಾಗಿದ್ದು ಸ್ವಂತ ಮನೆಗಳು ಇಲ್ಲದ ಕೊಳಗೇರಿಗಳಲ್ಲಿ ವಾಸಿಸಬೇಕಾದ ಅನಿವಾರ್ಯತೆ ಇರುವ ಮಹಿಳೆಯರಿಗೆ ಸ್ವಂತ ಸೂರನ್ನು ನೀಡುತ್ತದೆ.

ಎಷ್ಟು ಧನ ಸಹಾಯ ಸಿಗಲಿದೆ ?

ಈ ಯೋಜನೆ ಅಡಿ ಅರ್ಜಿ ಸಲ್ಲಿಸಿ, ಇದಾದ ನಂತರ ನಮ್ಮ ಅರ್ಜಿಯನ್ನು ಅಧಿಕಾರಿಗಳು ಪರಿಶೀಲಿಸುತ್ತಾರೆ, ನಮಗೆ ಈ ಯೋಜನೆಯಡಿಯಲ್ಲಿ ಹಣಕಾಸಿನ ನೆರವು ಸಿಗುತ್ತದೆ ಎಂದಾದಲ್ಲಿ ಎರಡು ಲಕ್ಷ ರೂಪಾಯಿಗಳವರೆಗಿನ ಆರ್ಥಿಕ ನೆರವು ಸಿಗಲಿದೆ. ಈ ಧನ ಸಹಾಯ ನಮ್ಮ ಸ್ವಂತ ಮನೆಯನ್ನು ಕಟ್ಟಿಕೊಳ್ಳಲು ಸಿಗಲಿದೆ. ಯೋಜನೆಯಲ್ಲಿ ಕಟ್ಟಿಕೊಂಡ ಮನೆಗಳು ಆಯಾ ಮಹಿಳೆಯರ ಹೆಸರಿನಲ್ಲಿ ಇದ್ದು, ಯಾರಿಗೆಲ್ಲ ಶಾಶ್ವತ ಮನೆಗಳು ಇಲ್ಲ ಅಂಥವರಿಗೆ ಮಾತ್ರ ಯೋಜನೆಯಿಂದ ಶಾಶ್ವತ ಮನೆ ಪಡೆಯುವ ಅವಕಾಶ ದೊರೆಯಲಿದೆ. ಇದರಿಂದಾಗಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಕಡಿಮೆಯಾಗಲಿದೆ ಹಾಗೂ ಸ್ವಾವಲಂಬಿ ಜೀವನ ನಡೆಸಬೇಕು ಎನ್ನುವ ಮಹಿಳೆಯರ ಕನಸು ನನಸಾಗಲಿದೆ ಎಂದು ಸರ್ಕಾರ ಹೇಳಿಕೊಂಡಿದೆ.

ಈಗಾಗಲೇ ಈ ಬಗೆಗಿನ ಮಾಹಿತಿಗಳನ್ನು ಯೋಜನೆಯ ಅಧಿಕೃತ ವೆಬ್ ಸೈಟಿನಲ್ಲಿ ಬಿಡುಗಡೆ ಮಾಡಲಾಗಿದ್ದು ಈ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಇಲ್ಲಿ ನಿಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿ ಪರಿಶೀಲನೆಯ ನಂತರ ನಮಗೆ ಈ ಯೋಜನೆ ಅಡಿ ಮನೆ ಕಟ್ಟಿಕೊಳ್ಳಲು ನೆರವು ಸಿಗುವ ಅರ್ಹತೆ ಇದ್ದಲ್ಲಿ 2 ಲಕ್ಷ ರೂಪಾಯಿ ವರೆಗಿನ ಹಣ ನಮ್ಮ ಬ್ಯಾಂಕ್ ಅಕೌಂಟ್ ಗೆ ಜಮೆ ಆಗಲಿದೆ. ಈ ಯೋಜನೆಯನ್ನು ಈಗಾಗಲೇ ಮಧ್ಯಪ್ರದೇಶದಲ್ಲಿ ಆರಂಭಿಸಲಾಗಿದ್ದು ಬೇರೆ ಪ್ರದೇಶಗಳಿಗೂ ಕೂಡ ಈ ಯೋಜನೆಗಳನ್ನು ವಿಸ್ತರಿಸುವ ಸಾಧ್ಯತೆ ಇದೆ.

advertisement

Leave A Reply

Your email address will not be published.