Karnataka Times
Trending Stories, Viral News, Gossips & Everything in Kannada

CM Siddaramaiah: ಅಂಗನವಾಡಿ ಕಾರ್ಯಕರ್ತೆಯರಿಗೆ ಉಚಿತ ಸ್ಮಾರ್ಟ್ ಫೋನ್ ವಿತರಣೆ ಘೋಷಣೆ ಮಾಡಿದ ಸಿದ್ದರಾಮಯ್ಯ

advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 15ನೇ ಬಜೆಟ್‌ ಮಂಡನೆ ಮಾಡಿದ್ದಾರೆ‌.ಇನ್ನೂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆ ನೀತಿ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ವಿಪಕ್ಷ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಬಜೆಟ್ ಮಂಡನೆ ಪ್ರಾರಂಭ ಮಾಡಿದ ಸಿದ್ದರಾಮಯ್ಯ ಅವರು ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಬಗ್ಗೆ ಹೇಳಿಕೊಂಡರು. ಗೃಹಜ್ಯೋತಿ (Gruha Jyothi), ಗೃಹಲಕ್ಷ್ಮಿ (Gruha Lakshmi), ಅನ್ನಭಾಗ್ಯ (Anna Bhagya), ಶಕ್ತಿ, ಮತ್ತು ಯುವನಿಧಿ (Yuva Nidhi) ಯಾವ ರೀತಿ ಅಭಿವೃದ್ಧಿ ಹಂತದಲ್ಲಿದೆ ಎಂದು ತಿಳಿಸಿದ್ರು. ಬಜೆಟ್ ಮಂಡನೆ ಮಾಡಿ ಹಲವಾರು ಜನಪರ ಕಾರ್ಯದ ಬಗ್ಗೆ ಮಾತನಾಡಿದ್ದಾರೆ.ಕೇಂದ್ರ ಸರ್ಕಾರ ಮಾಡದ ಕೆಲಸವನ್ನು ನಾವು ಮಾಡಿದ್ದೇವೆ. ಗ್ಯಾರಂಟಿ ಯೋಜನೆಗಳಿಂದ ಬಡವರ ಅಭಿವೃದ್ಧಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಸ್ಮಾರ್ಟ್‌ಫೋನ್‌ ವಿತರಣೆ:

 

 

ಇಂದು ಅಂಗನವಾಡಿ ಕೇಂದ್ರಕ್ಕೆ ಮಕ್ಕಳನ್ನು ಪ್ರೋತ್ಸಾಹ ಮಾಡುವ ನಿಟ್ಟಿನಲ್ಲಿ ಸರಕಾರ ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.‌ ಅದೇ ರೀತಿ ಬಾಣಂತಿ ಮಹೀಳೆಯರಿಗೆ,ಮಕ್ಕಳಿಗೆ ಪೌಷ್ಟಿಕ ಆಹಾರ ಕೂಡ ನೀಡುತ್ತಿದೆ. ಇನ್ನೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ ಫೋನ್‌ ನೀಡುವ ಬಗ್ಗೆ ಸಿದ್ದರಾಮಯ್ಯ (CM Siddaramaiah) ಮಾಹಿತಿ ನೀಡಿದ್ರು.‌ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗುವುದು ಎಂದು ಹೇಳಿದ್ರು

advertisement

ಯಾಕಾಗಿ ಸ್ಮಾರ್ಟ್‌ಫೋನ್‌?

ಹೌದು, ಅಂಗನವಾಡಿ ಕೇಂದ್ರಗಳ ಸಮಗ್ರ ಮಾಹಿತಿ, ಪೌಷ್ಟಿಕ ಆಹಾರ ನೀಡುವ ವಿವರ, ಇತ್ಯಾದಿ ತುರ್ತಾಗಿ ಸಂಗ್ರಹಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸರಕಾರದಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಲಾರ್ಟ್‌ಫೋನ್‌ ವಿತರಿಸುತ್ತದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ಅಳವಡಿಸಿ ಎಲ್ಲ ಮಾಹಿತಿ ಗಳನ್ನು ದಾಖಲು ಮಾಡಿ ಎಲ್ಲ ರೀತಿಯ ಯೋಜನೆಗಳ ಪ್ರಯೋಜನವನ್ನು ಮಕ್ಕಳು ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ ನೀಡಲು ಸುಲಭ ವಾಗುತ್ತದೆ.

ಪೋಶನ್ ಅಭಿಯಾನ:

ಈ ಯೋಜನೆಯ ಮೂಲಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಫಲಾನುಭವಿಗಳು‌ ಮಕ್ಕಳು ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರ ಪೌಷ್ಟಿಕತೆಯ ಆಹಾರ ನೀಡುವ ನಿರ್ದಿಷ್ಟ ಅವಧಿಗೆ ಈ ಯೋಜನೆಯನ್ನು ಕೈಗೊಂಡು ದಾಖಲೆಯನ್ನು ಪೋಷ್ ಟ್ರಾಕರ್ ನಲ್ಲಿ ಅಳವಡಿಸಲು ಸ್ಮಾರ್ಟ್ ಫೋನ್ ನೀಡಲಾಗುತ್ತದೆ.‌ಅದೇ ರೀತಿ ಈ ಭಾರಿಯು ಸಿಎಂ ಸಿದ್ದರಾಮಯ್ಯ (CM Siddaramaiah) ಸ್ಮಾರ್ಟ್‌ಫೋನ್‌ ಪೋನ್ ಜೊತೆಗೆ ಅಂಗನವಾಡಿ ಕಾರ್ಯಕರ್ತರಿಗೆ (Anganwadi Workers) ತರಬೇತಿ ನೀಡುವುದಾಗಿ ತಿಳಿಸಿದ್ದಾರೆ.

 

 

advertisement

Leave A Reply

Your email address will not be published.