Karnataka Times
Trending Stories, Viral News, Gossips & Everything in Kannada

Dairy Farming: ಗುಡ್ ನ್ಯೂಸ್; ರೈತರಿಗೆ ಪಶು ಸಂಗೋಪನೆಗೆ ಸಿಗಲಿದೆ 12 ಲಕ್ಷ ರೂಪಾಯಿ ಸಾಲ!

advertisement

ದೇಶದಲ್ಲಿ ರೈತರು ಆರ್ಥಿಕತೆಗೆ ದೊಡ್ಡ ಕೊಡುಗೆಯನ್ನು ನೀಡುತ್ತಾರೆ. ಹಾಗಾಗಿ ಕೃಷಿ ಚಟುವಟಿಕೆಗೆ ಅಗತ್ಯ ಇರುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿಕೊಡಲು ದೇಶದ ಸರ್ಕಾರ ಬದ್ಧವಾಗಿದೆ. ಇದಕ್ಕಾಗಿ ಕೃಷಿ ಉದ್ಯಮವನ್ನು ಮೆಚ್ಚಿಕೊಂಡಿರುವ ರೈತರಿಗೆ ಬೇರೆ ಬೇರೆ ರೀತಿಯ ಯೋಜನೆಗಳ ಮೂಲಕ ಅವರ ಸರ್ವತೋಮುಖ ಬೆಳವಣಿಗೆಗೆ ಸರ್ಕಾರ ಸಹಾಯ ಮಾಡುತ್ತಿದೆ.

ಕೃಷಿ ಚಟುವಟಿಕೆ ಮಾಡುವ ರೈತರು ಪಶುಸಂಗೋಪನೆ ಮಾಡಿಕೊಂಡು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಲು ನಬಾರ್ಡ್ ಪಶು ರೈತರಿಗೆ ಸಾಲ ಒದಗಿಸುತ್ತಿದೆ. ಹೈನುಗಾರಿಕೆ ಮಾಡಲು ಬೇಕಾಗಿರುವ ದನಗಳ ಖರೀದಿ ಮತ್ತು ಅವುಗಳ ನಿರ್ವಹಣೆಗೆ ಅಗತ್ಯ ಇರುವ ಹಣಕ್ಕಾಗಿ ನಬಾರ್ಡ್ ನಿಂದ ಸಾಲ ಪಡೆದುಕೊಳ್ಳಬಹುದು. ಇಲ್ಲಿಯವರೆಗೆ ಪಶು ಖರೀದಿಗೆ ಸಿಗುತ್ತಿದ್ದ 5 ಲಕ್ಷ ರೂಪಾಯಿ ಸಾಲವನ್ನು ಹೆಚ್ಚಿಸಿ 12 ಲಕ್ಷ ರೂಪಾಯಿಗಳ ಸಾಲವನ್ನು ಪಡೆದುಕೊಳ್ಳಬಹುದು. ಹಾಗೂ ಇದಕ್ಕೆ 50% ಅಷ್ಟು ಸಬ್ಸಿಡಿಯನ್ನು ನಬಾರ್ಡ್ ವತಿಯಿಂದ ಪಡೆಯಬಹುದು.

50% ಸಬ್ಸಿಡಿ ಯೊಂದಿಗೆ ಪಡೆಯಿರಿ 12 ಲಕ್ಷ ರೂಪಾಯಿಗಳ ಸಾಲ:

ಹೆಚ್ಚುತ್ತಿರುವ ಹಾಲಿನ ಅಗತ್ಯತೆಗಳನ್ನ ಪೂರೈಸಲು ಹೈನುಗಾರಿಕೆ (Dairy Farming) ಬಹಳ ಮುಖ್ಯವಾಗಿರುವ ಉದ್ಯಮವಾಗಿದ್ದು ಸ್ವಯಂ ಉದ್ಯೋಗ ಆರಂಭಿಸುವವರಿಗೆ ಇದು ಹೆಚ್ಚು ಲಾಭವನ್ನು ತಂದುಕೊಡುತ್ತದೆ. ಹೀಗಾಗಿಯೇ ಪಶು ಖರೀದಿ ಹಾಗೂ ಹೈನುಗಾರಿಕೆ ಅಭಿವೃದ್ಧಿಗಾಗಿ ನಬಾರ್ಡ್ ಮೂಲಕ 50,000 ಗಳಿಂದ 12 ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯ ಪಡೆಯಬಹುದು. ಇದಕ್ಕೆ 6.5% ನಿಂದ 9% ವರೆಗೆ ಬಡ್ಡಿ ಇರುತ್ತದೆ.

 

 

advertisement

ಅಷ್ಟೇ ಅಲ್ಲ ಸಾಲ (Loan) ತೀರಿಸಲು 10 ವರ್ಷಗಳ ಅವಧಿ ಇರುತ್ತದೆ. ಅದರಲ್ಲೂ SC ಹಾಗೂ ST ವರ್ಗಕ್ಕೆ ಸೇರಿದ ರೈತರಿಗೆ 33% ಗಿಂತಲೂ ಹೆಚ್ಚಿನ ಸಬ್ಸಿಡಿ ಹಾಗೂ ಇತರ ರೈತರಿಗೆ 25% ನಷ್ಟು ಸಬ್ಸಿಡಿ ಪಡೆಯಬಹುದು.

ಯಾರಿಗೆ ಸಿಗಲಿದೆ ಈ ಸಾಲ ಸೌಲಭ್ಯ:

ಕಾಮಧೇನು ವಿಶ್ವವಿದ್ಯಾಲಯ, ಅಂಜೋರಾದಲ್ಲಿ ನಡೆದ ಎರಡನೇ ಘಟಿಕೋತ್ಸವ ಸಮಾರಂಭದಲ್ಲಿ ಉಪಸ್ಥಿತರಿದ್ದ, ಛತ್ತಿಸ್ಗಢ ಕೃಷಿ ಸಚಿವ ಬ್ರಿಜಮೋಹನ್ ಅಗರ್ವಾಲ್ ಪಶು ಸಂಗೋಪನೆಗಾಗಿ 12 ಲಕ್ಷ ರೂಪಾಯಿ ಸಾಲ ಲಭ್ಯವಿದೆ ಹಾಗೂ 50% ನಷ್ಟು ಸಹಾಯಧನವನ್ನು ಸರ್ಕಾರ ಒದಗಿಸುತ್ತದೆ ಎನ್ನುವ ಖುಷಿ ವಿಚಾರವನ್ನು ಹಂಚಿಕೊಂಡಿದ್ದಾರೆ.

ಅರ್ಜಿ ಸಲ್ಲಿಸುವುದು ಹೇಗೆ?

ಹೈನುಗಾರಿಕೆ (Dairy Farming) ಯ ಸಾಲ ಸೌಲಭ್ಯ ಪಡೆಯುವುದಕ್ಕಾಗಿ ಹತ್ತಿರದ ನಬಾರ್ಡ್ ಕೇಂದ್ರ ಅಥವಾ ಬ್ಯಾಂಕ್ ಗೆ ಹೋಗಿ ಅರ್ಜಿ ಸಲ್ಲಿಸಬೇಕು. ನಬಾರ್ಡ್ ಮೂಲಕ ಬ್ಯಾಂಕ್ ನಲ್ಲಿಯೂ ಸಾಲ ಸೌಲಭ್ಯ ನೀಡಲಾಗುವುದು. ಇದಕ್ಕಾಗಿ ನೀವು ಸಬ್ಸಿಡಿ ಫಾರ್ಮ್ ಒಂದನ್ನು ಭರ್ತಿ ಮಾಡಬೇಕು ಹಾಗೂ ಸಾಲದ ಮೊತ್ತಕ್ಕೆ ಯೋಜನಾ ವರದಿಯನ್ನು ಸಲ್ಲಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ನಬಾರ್ಡ್ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಥವಾ ಈ ಕೆಳಗಿನ ಸಹಾಯವಾಣಿಗೆ ಕರೆ ಮಾಡಿ.

ಸಹಾಯವಾಣಿ ಸಂಖ್ಯೆ 022-26539895/96/99.

advertisement

Leave A Reply

Your email address will not be published.