Karnataka Times
Trending Stories, Viral News, Gossips & Everything in Kannada

BYD Dolphin: 5 ಸ್ಟಾರ್ ರೇಟಿಂಗ್ ಹೊಂದಿದ್ದ BYD ಹೊಸ ಆವೃತ್ತಿ ಕಾರು ಬಿಡುಗಡೆ, ಕಡಿಮೆ ಬೆಲೆ ಹಾಗೂ 427KM ಮೈಲೇಜ್!

advertisement

ಈಗಂತೂ ಕಾರು ಮಾರುಕಟ್ಟೆಯಲ್ಲಿ ಪ್ರಬಲ ಸ್ಪರ್ಧೆ, ಪೈಪೋಟಿ ನಡೆಯುತ್ತಲೇ ಇದೆ. ಯಾವಾಗಲೂ ಕಾರ್ ಕೊಳ್ಳುವಾಗ ಅದರ ರೆಂಜ್ , ಮೈಲೇಜ್, ರೇಟಿಂಗ್ ಇತ್ಯಾದಿಗಳನ್ನು ಕೂಡ ನಾವು ನೋಡುತ್ತೇವೆ. ಇತ್ತೀಚೆಗಂತೂ ಎಲೆಕ್ಟ್ರಾನಿಕ್ ವಾಹನಗಳಿಗೆ ಬಹಳ ಅಧಿಕ ಬೇಡಿಕೆ ಇದ್ದು ಕಾರುಕೊಳ್ಳಬೇಕು ಎಂದು ಅಂದುಕೊಂಡವರಿಗೆ ಚೈನಾದ ಎಲೆಕ್ಟ್ರಾನಿಕ್ ಕಾರ್ ಕಂಪೆನಿಯಿಂದ ತಯಾರಾದ BYD ಡಾಲ್ಫಿನ್ ಕಾರು ತುಂಬಾ ಉತ್ತಮ ಸೆಲೆಕ್ಷನ್ ಆಗಲಿದೆ. ಈ ಕಾರಿಗೆ ಜಗತ್ತಿನಾದ್ಯಂತ ಬೇಡಿಕೆ ಬಂದಿದ್ದು ಇದರ ವೈಶಿಷ್ಟ್ಯ ಹೇಗಿದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಪ್ರಬಲ ಪೈಪೋಟಿ:

 

 

ಚೈನಾ ಕಂಪೆನಿಯ Atto 3, E6 ಕಾರುಗಳು ಈಗಾಗಲೇ ಜನಪ್ರಿಯವಾಗಿದ್ದು ಇದೀಗ ಹೊಸ ಕಾರೊಂದು ಸೇರ್ಪಡೆ ಆಗುತ್ತಿದೆ. ಚೈನಾ ಮೂಲದ ಕಂಪೆನಿ ಮೂಲಕ BYD Dolphin ಕಾರನ್ನು ಪರಿಚಯಿಸಲಾಗಿದ್ದು ಈ ಎಲೆಕ್ಟ್ರಾನಿಕ್ ಕಾರು ಮಾರುಕಟ್ಟೆಯಲ್ಲಿ ಈಗಾಗಲೇ ಜನಪ್ರಿಯವಾಗಿರುವ MG ZS EV, Tata ಕರ್ವ್ ಇವಿ, ಹುಂಡೈ ಕ್ರೇಟಾ ಇವಿ, Citroren EC3 ಏರ್ ಕ್ರಾಸ್ ಇತರ ಪ್ರಬಲ ಕಾರುಗಳಿಗೆ ಭರ್ಜರಿಯಾಗಿ ಪೈಪೋಟಿ ನೀಡುತ್ತಲಿದೆ.

ಎಲ್ಲೆಲ್ಲ ಪರಿಚಯಿಸಲಾಗಿದೆ:

advertisement

BYD ಕಾರು ಮಾನ್ಯತೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಹೊಸದಾಗಿ ಡಾಲ್ಫಿನ್ ಲೋಗೊವನ್ನು ಬಿಡುಗಡೆ ಮಾಡಿದ್ದು ಇದು ವಿವಿಧ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಮ್ಮ ಕಾರಿನ ವಿಸ್ತರಣೆ ಮಾಡಿದ್ದ ವಿಚಾರವನ್ನು ಸಾಂಕೇತಿಸಲಿದೆ. BYD Dolphin ಕಾರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೂರೋಪ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಥೈಲ್ಯಾಂಡ್, ಮಲೇಷಿಯಾ, ಬ್ರೆಜಿಲ್, ಜಪಾನ್ ನಲ್ಲಿ ಆರಂಭಿಕ ಹಂತವಾಗಿ ಬಿಡುಗಡೆ ಮಾಡಿತ್ತು ಇದೀಗ ಭಾರತೀಯ ಮಾರುಕಟ್ಟೆಗೆ ಸಹ ಈ ಕಾರು ಲಗ್ಗೆ ಇಟ್ಟಿದೆ. ಈ ಮೂಲಕ ಇಲ್ಲಿನ ಕಂಪೆನಿಗೆ ಪೈಪೋಟಿ ನೀಡಲಿದೆ.

ವೈಶಿಷ್ಟ್ಯ ಹೇಗಿದೆ?

 

 

  • ಈ ಕಾರಿನಲ್ಲಿ ಸುರಕ್ಷತೆ ದೃಷ್ಟಿಯಿಂದ ಹಲವು ಫೀಚರ್ಸ್ ಇದೆ. 427km ವ್ಯಾಪ್ತಿಯ, 12.8 ಇಂಚಿನ ಟಚ್ ಸ್ಕ್ರೀನ್ ಡ್ಯಾಶ್ ಬೋರ್ಡ್ ಅನ್ನು ಹೊಂದಿದೆ.
  • ಡಾಲ್ಫಿನ್ PM 2.5 ಏರ್ ಫಿಲ್ಟರ್, ಡಿಜಿಟಲ್ ಇನ್ಸ್ ಸ್ಟ್ರೂ ಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ‌.
  • 360ಡಿಗ್ರಿ ಕ್ಯಾಮರಾ ಕವರೇಜ್ ಹೊಂದಿದ್ದು ಇದು ಪಾರ್ಕಿಂಗ್ ಗೆ ಅನುಕೂಲ ಆಗಲಿದೆ.
  • LED ಟೈಲ್ ಲೈಟ್ ಅನ್ನು ಹೊಂದಿದೆ.
  • 94 ರಿಂದ 201 bhp , 180 ರಿಂದ 310NM ಟಾರ್ಕ್ ಅನ್ನು ನೀಡಲಿದೆ.
  • ಕೀಲಿ ರಹಿತ ಪ್ರವೇಶ ಆಯ್ಕೆ ಸಹ ಇರಲಿದೆ.
  • ಯುರೊ NCAP ನಲ್ಲಿ 5ಸ್ಟಾರ್ ರೇಟಿಂಗ್ ಅನ್ನು ಪಡೆದಿದೆ.

ಬೆಲೆ ಎಷ್ಟು?

ಈ ಒಂದು BYD Dolphin ಕಾರಿನ ಬೆಲೆ ಎಷ್ಟು ಎಂಬ ಕುತೂಹಲ ಇದ್ದೇ ಇರುತ್ತದೆ. ಭಾರತದಲ್ಲಿ BYD ಕಾರಿನ ಬೆಲೆ 29 ಲಕ್ಷ ರೂಪಾಯಿ ಆಗಿದ್ದು ಈಗ ಬಿಡುಗಡೆ ಆಗಿದ್ದ BYD Dolphin ಕಾರಿನ ಬೆಲೆ 25 ಲಕ್ಷ ರೂಪಾಯಿ ಆಗಿದೆ. ಸ್ಪರ್ಧಾತ್ಮಕ ವೈಶಿಷ್ಟ್ಯ ಮತ್ತು ಬೆಲೆ ಮೂಲಕ ಈ ಕಾರು ಜನರನ್ನು ಆಕರ್ಷಿಸುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ದೊಡ್ಡ ಸಾಧನೆ ಮಾಡುವ ಗುರಿಯನ್ನು BYD ಕಾರು ಹೊಂದಿದ್ದು ಹೊಸ ಆವೃತ್ತಿ ಹೇಗೆ ಜನ ಮನ ಗೆಲ್ಲಲಿದೆ ಎಂದು ಕಾದುನೋಡಬೇಕು.

advertisement

Leave A Reply

Your email address will not be published.