Karnataka Times
Trending Stories, Viral News, Gossips & Everything in Kannada

Maruti Suzuki Grand Vitara: ಮಾರುತಿ ಸುಜುಕಿಯ ಗ್ರಾಂಡ್ ವಿಟಾರದ ಬೆಲೆ ಹೆಚ್ಚಳ, ಹೊಸ ಬೆಲೆ ಎಷ್ಟು?

advertisement

ಇಂದು ಕಾರು ಖರೀದಿ ಎಂಬುದು ಪ್ರತಿಯೊಬ್ಬರ ಕನಸು ಆಗಿರುತ್ತದೆ. ಆದರೆ ತಮ್ಮ ಇಷ್ಟದ ಕಂಪನಿಯ ಕಾರು ಖರೀದಿ ಮಾಡುವಲ್ಲಿ ಹೆಚ್ಚಿನ ಹಣದ ಅವಶ್ಯಕತೆ ಬೇಕಾಗುತ್ತದೆ.ಇಂದು ಕಾರು ತಯಾರಿಯ ವೆಚ್ಚದ ಮೌಲ್ಯವು ಹೆಚ್ಚಾಗಿದ್ದು ವಾಹನಗಳ ಬೆಲೆಯು ಕೂಡ ಅಧಿಕ ವಾಗಿದೆ. ಇಂದು ಪ್ರತಿಷ್ಟಿತ ಕಂಪನಿ ಕಾರುಗಳ ಬೆಲೆಯು ಹೆಚ್ಚಾಗಿದೆ. ಅಂತಹ ಜನಪ್ರಿಯ ಮಾದರಿಗಳಲ್ಲಿ ಗ್ರ್ಯಾಂಡ್ ವಿಟಾರಾ ಕೂಡ ಒಂದಾಗಿದ್ದು ಮಾರುತಿ ಸುಜುಕಿ ಇಂಡಿಯಾ ಇದೀಗ ಗ್ರಾಂಡ್ ವಿಟಾರಾ (Maruti Suzuki Grand Vitara) ಬೆಲೆ ಏರಿಕೆಯನ್ನು ಮಾಡಿದ್ದು ಈ ಕಾರು ಖರೀದಿ ಮಾಡಬೇಕೆಂದು ಇದ್ದ ವಾಹನ ಪ್ರೀಯರಿಗೆ ನಿರಾಸೆ ಉಂಟಾಗಿದೆ.

ಎಷ್ಟಾಗಿದೆ ಬೆಲೆ:

 

 

ಹೈಬ್ರಿಡ್ ಎಸ್‌ಯುವಿ ಈಗ ಇದರ ಎಕ್ಸ್‌ಶೋರೂಮ್ ಬೆಲೆ 10.8 ಲಕ್ಷ ರೂಪಾಯಿಯಿಂದ ಪ್ರಾರಂಭವಾಗಿ 20.09 ಲಕ್ಷ ರೂಪಾಯಿ ತನಕ ತಲುಪುತ್ತದೆ. ಇದೀಗ ಎಲ್ಲಾ ರೂಪಾಂತರಗಳು 10,000 ರೂಪಾಯಿ ಹೆಚ್ಚಳವನ್ನು ಪಡೆದುಕೊಂಡಿವೆ. ಈ ಹೆಚ್ಚಳವು ಡೆಲ್ಟಾ ಸ್ಮಾರ್ಟ್ ಹೈಬ್ರಿಡ್ ಎಟಿ, ಝೀಟಾ ಸ್ಮಾರ್ಟ್ ಹೈಬ್ರಿಡ್ ಎಟಿ, ಆಲ್ಫಾ ಸ್ಮಾರ್ಟ್ ಹೈಬ್ರಿಡ್ ಎಟಿ ಮತ್ತು ಆಲ್ಫಾ ಡ್ಯುಯಲ್ ಟೋನ್ ಸ್ಮಾರ್ಟ್ ಹೈಬ್ರಿಡ್ ಎಟಿಗಳನ್ನು ಹೊರತುಪಡಿಸಿ ಆಯ್ದ ಇತರ ರೂಪಾಂತರಗಳ ಮೇಲೆ ಪರಿಣಾಮ ಬೀರಲಿದೆ.

advertisement

ಹೇಗಿದೆ ವೈಶಿಷ್ಟ್ಯ?

 

 

ಈ ಕಾರಿನ ವೈಶಿಷ್ಟ್ಯವು ವಿಭಿನ್ನವಾಗಿದ್ದು ಗ್ರ್ಯಾಂಡ್ ವಿಟಾರಾ (Maruti Suzuki Grand Vitara) ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರಲಿದ್ದು ಮೊದಲ ಆಯ್ಕೆಯು 1.5-ಲೀಟರ್ NA, 4-ಸಿಲಿಂಡರ್ ಪೆಟ್ರೋಲ್ ಎಂಜಿನ್ 103 hp ಮತ್ತು 135 Nm ಟಾರ್ಕ್ ಅನ್ನು ನೀಡಲಿದೆ. ಅದೇ ರೀತಿ 5-ಸ್ಪೀಡ್ ಮ್ಯಾನುವಲ್ ನೊಂದಿಗೆ 19.38kpl ನಿಂದ 21.11kpl ವರೆಗಿನ ಇಂಧನ ದಕ್ಷತೆಯನ್ನು ಹೊಂದಿದೆ.

  • ಇನ್ನೊಂದು 1.5-ಲೀಟರ್, 3-ಸಿಲಿಂಡರ್ ಸ್ಟ್ರಾಂಗ್ ಹೈಬ್ರಿಡ್ ಅಟ್ಕಿನ್ಸನ್ ಪೆಟ್ರೋಲ್ ಎಂಜಿನ್ ಆಗಿದ್ದು, ಇದು 115 ಎಚ್‌ಪಿ ಶಕ್ತಿಯನ್ನು ಹೊರಹಾಕುತ್ತದೆ
  • ಇನ್ನು ಸುರಕ್ಷತೆಯ ವಿಚಾರವಾಗಿ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಹೋಲ್ಡ್ ಅಸಿಸ್ಟ್ ಸೇರಿದಂತೆ ಸಾಕಷ್ಟು ವೈಶಿಷ್ಟ್ಯಗಳನ್ನು ಹೊಂದಿದೆ
  • ಹಲವು ವಿಶಿಷ್ಟ ವಿನ್ಯಾಸ ದೊಂದಿಗೆ ಗಮನ ಸೆಳೆದಿದ್ದು 9.0 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, HUD ಡಿಸ್ಪ್ಲೇ, 360-ಡಿಗ್ರಿ ಕ್ಯಾಮೆರಾ, ವೈರ್‌ಲೆಸ್ ಚಾರ್ಜರ್, ಇತ್ಯಾದಿ ಒಳಗೊಂಡಿದೆ.
  • ಸ್ಮಾರ್ಟ್ ಹೈಬ್ರಿಡ್ ರೂಪಾಂತರವು ಡ್ಯುಯಲ್ ಬ್ಯಾಟರಿ ಸೆಟಪ್‌ನೊಂದಿಗೆ ಬರಲಿದೆ
  • ಆರು ಏರ್‌ಬ್ಯಾಗ್‌ಗಳು , ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಜೊತೆಗೆ ಹಿಲ್ ಹೋಲ್ಡ್ ಅಸಿಸ್ಟ್, 3-ಪಾಯಿಂಟ್ ELR ಸೀಟ್ ಬೆಲ್ಟ್‌ಗಳು ಬರಲಿದೆ.
  • ಇನ್ನು ಮಾರುತಿ ಗ್ರ್ಯಾಂಡ್ ವಿಟಾರಾ ಇಂಟೆಲಿಜೆಂಟ್ ಎಲೆಕ್ಟ್ರಿಕ್ ಹೈಬ್ರಿಡ್ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್‌ನಲ್ಲಿ 8 ವರ್ಷಗಳ ಅವಧಿಯೊಂದಿಗೆ 160,000 ಕಿಮೀ ಪ್ರಮಾಣಿತ ವಾರಂಟಿಯೊಂದಿಗೆ ಬರಲಿದೆ.

advertisement

Leave A Reply

Your email address will not be published.